More

    ತಂತ್ರಜ್ಞಾನ ಆಧರಿತ ಕಲಿಕೆ ಅಗತ್ಯ

    ಸಿರಿಗೆರೆ: ತಂತ್ರಜ್ಞಾನ ಆಧರಿತ ಕಲಿಕೆಯು ಮಕ್ಕಳನ್ನು ಪ್ರೇರೇಪಿಸುವಲ್ಲಿ ಸಹಾಯಕವಾಗಿದೆ ಎಂದು ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಹೇಳಿದರು.

    ತರಳಬಾಳು ವಿದ್ಯಾಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 500ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರಿಗೆ ಇಲ್ಲಿನ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ತರಗತಿಗಳಲ್ಲಿ ಶಿಕ್ಷಕರಿಗಿಂತ ಮಕ್ಕಳು ಹೆಚ್ಚಾಗಿ ಮಾತನಾಡಬೇಕು.

    ವಿದ್ಯಾರ್ಥಿಗಳಲ್ಲಿರುವ ಆತಂಕ, ಭೀತಿ ಹೋಗಲಾಡಿಸಲು ಚಟುವಟಿಕೆ ಆಧಾರಿತ ಶಿಕ್ಷಣ ಬಹುಮುಖ್ಯ ಎಂದರು.

    ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ ಮಾತನಾಡಿ, ಶಿಕ್ಷಕರು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಬರುವ ತೊಡಕುಗಳ ನಿವಾರಣೆಗೆ ಪಠ್ಯಪುಸ್ತಕ, ಪಠ್ಯವಸ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ಪರಿಣಾಮಕಾರಿ ಬೋಧನೆ ಮಾಡಬೇಕಿದೆ ಎಂದು ತಿಳಿಸಿದರು.

    ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ರಾಜಶೇಖರಪ್ಪ, ರಮೇಶ್ ಕಣಕಟ್ಟೆ, ಸಿ.ಎಲ್.ಏಕಾಂತ್, ಶ್ರೀನಿವಾಸ್‌ಕುಮಾರ್, ಬಿ.ಎನ್.ಲಕ್ಷ್ಮಣ, ಮೊಹಮ್ಮದ್ ಹನೀಫ್, ಎಸ್.ಎನ್.ಪ್ರದೀಪ್, ಅಜಾದ್ ಅಹ್ಮದ್, ಕೆ.ಶಿವಣ್ಣ, ಜಿ.ಯೋಗೇಂದ್ರ ನಾಯಕ್, ಕೆ.ಒ.ನಾಗೇಶ್, ಡಾ.ಪಿ.ಎಸ್.ಕಂದಗಲ್, ಕೆ.ಎಸ್.ರಾಮಚಂದ್ರಪ್ಪ, ಚಿದಾನಂದಸ್ವಾಮಿ, ಎಸ್.ಎನ್.ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts