More

    ಅಯೋಧ್ಯೆಯನ್ನು ಬೆಳಗಲಿವೆ 5.51 ದೀಪಾವಳಿ ಹಣತೆಗಳು

    ಲಖನೌ: ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿ ದೀಪೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಶುರುವಾಗಿವೆ.. ಅಯೋಧ್ಯೆಯ ರಾಮ್​ ಕಿ ಪೈದಿ ಘಾಟ್​ನಲ್ಲಿ ಈ ಬಾರಿ 5.51 ಲಕ್ಷ ಹಣತೆಗಳು ಬೆಳಗಲಿದ್ದು ದೀಪೋತ್ಸವದ ಮೆರುಗನ್ನು ಹೆಚ್ಚಿಸಲಿವೆ. ಕಳೆದ ವರ್ಷವೂ ಇಷ್ಟೇ ಹಣತೆಗಳನ್ನು ಬೆಳಗಲಾಗಿತ್ತು.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಶುಕ್ರವಾರ ಸೂಚನೆ ನೀಡಿದ್ದು, ಕೋವಿಡ್ 19 ತಡೆಗೆ ಅಗತ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ದೀಪೋತ್ಸವಕ್ಕೆ ಸಿದ್ಧತೆ ಮಾಡುವಂತೆ ಅವರು ನಿರ್ದೇಶಿಸಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ರಾಮ ಮನೋಹರ ಲೋಹಿಯಾ ಅವಧ್​ ಯೂನಿವರ್ಸಿಟಿಗಳು ಈ ಸಲದ ದೀಪೋತ್ಸವದ ಆಯೋಜನೆಯ ಹೊಣೆಗಾರಿಕೆ ಹೊತ್ತುಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ:  ಕರೊನಾ ಕರಿಛಾಯೆಯಲ್ಲೂ ಜಗಮಗಿಸಲಿದೆ ಅಯೋಧ್ಯೆ; ಈ ಸಲ ದೀಪೋತ್ಸವ ಎಂದಿಗಿಂತ ಅದ್ದೂರಿ!

    ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಯೋಧ್ಯೆಯಲ್ಲಿ ವಿಜೃಂಭಣೆಯ ದೀಪೋತ್ಸವ ಪ್ರತಿ ವರ್ಷ ಆಯೋಜನೆಯಾಗುತ್ತಿದೆ.  2017ರಲ್ಲಿ ಯೋಗಿ ಆದಿತ್ಯನಾಥ್​ ಅವರಿಂದಲೇ ಇದು ಆರಂಭವಾಗಿತ್ತು. ಜನರೂ ಸಂಭ್ರಮದಿಂದ ಈ ದೀಪೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಲದ ದೀಪೋತ್ಸವ ನವೆಂಬರ್ 12ರಿಂದ 16ರ ತನಕ ಆಚರಿಸಲ್ಪಡಲಿದೆ.  (ಏಜೆನ್ಸೀಸ್)

    ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts