More

    ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಹಳೆಗನ್ನಡ ಸೇರಿಸಿ: ನಾಡೋಜ ಹಂಪನಾ

    ಬೆಂಗಳೂರು: ತಾಯಿ ಬೇರಾದ ಹಳೆಗನ್ನಡಕ್ಕೆ ವಿಶ್ವವಿದ್ಯಾಲಯಗಳಲ್ಲಿ ಗೌಣ ಸ್ಥಾನ ಪ್ರಾಪ್ತವಾಗುತ್ತಿದ್ದು, ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಹಳೆಗನ್ನಡವನ್ನು ಸೇರಿಸಿ ಅದರ ಪಾಂಡಿತ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ನಾಡೋಜ ಡಾ.ಹಂಪ ನಾಗರಾಜಯ್ಯ ಹೇಳಿದ್ದಾರೆ.

    ಉದಯಭಾನು ಕಲಾಸಂಘದಲ್ಲಿ ಡಾ.ಪಿ.ವಿ.ನಾರಾಯಣ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘‘ಡಾ.ಪಿ.ವಿ.ನಾರಾಯಣ ಅವರ ಅಭಿನಂದನೆ ಮತ್ತು ಕನ್ನಡ ಪ್ರಧಾನ ಗ್ರಂಥ ಲೋಕಾರ್ಪಣೆ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದರು.

    ಬಹಳ ವ್ಯಸನದ ಸಂಗತಿ ಎಂದರೆ ವಿಶ್ವವಿದ್ಯಾನಿಲಯಗಳಲ್ಲಿ ಹಳೆಗನ್ನಡ ಎಂದರೆ ಅವುಗಳನ್ನು ಕೆಳಗಡೆ ಇಡುವ ಮನಸ್ಥಿತಿ ನಿರ್ಮಾಣವಾಗಿದೆ. ಜನಪದ ಸಾಹಿತ್ಯ, ವಚನ ಸಾಹಿತ್ಯ ಬಗ್ಗೆ ಬೋಧಿಸಲಾಸಗುತ್ತಿದೆ. ಆದರೆ ಹಳಗನ್ನಡ ತಾಯಿ ಬೇರು ಇದ್ದಂತೆ ಉಳಿದ ಭಾಷೆಗಳಿಗೆ ನೀರನ್ನು ಎರೆದು, ಸತ್ವ ಮತ್ತು ತೇಜಸ್ ನೀಡಿರುತ್ತದೆ. ಅಂತಹ ಹಳೆಗನ್ನಡವನ್ನು ಗೌಣವನ್ನಾಗಿಸಲಾಗಿದೆ. ಇದನ್ನು ಹಳೆಗನ್ನಡದ ದುಷಮ ಕಾಲ ಎನ್ನಬಹುದಾಗಿದೆ. ಹಳೆಗನ್ನಡವನ್ನು ಜೀವಂತವಾಗಿ ಇಡಬೇಕಾದರೆ ವಿಶ್ವವಿದ್ಯಾನಿಲಯಗಳು ಮೊದಲು ಹಳೆಗನ್ನಡದ ವಿದ್ವತ್, ಪಾಂಡಿತ್ಯಕ್ಕೆ ಗೌರವವನ್ನು ಕೊಡಬೇಕು. ಹೀಗಾಗಿ ವಿವಿಗಳು ತಮ್ಮ ಪಠ್ಯಕ್ರಮದಲ್ಲಿ ಹಳೆಗನ್ನಡವನ್ನು ಮತ್ತೆ ಸೇರಿಸಿ ಅದರ ಪಾಂಡಿತ್ಯವನ್ನು ಪೋಷಿಸುವ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ ಎಂದರು.

    ಡಾ.ಪಿ.ವಿ.ನಾರಾಯಣ ಅವರು ವೆಂಕಟಾ ಅಮಾತ್ಯ ವಂಶದವರು. ಅಂದರೆ ರಾಜರ ಆಸ್ಥಾನದಲ್ಲಿದ್ದ ಮಂತ್ರಿ ಮನೆ ತನಕ್ಕೆ ಸೇರಿದವರು. ಗೌರವ ಮರ್ಯಾದೆಗಳು ಪ್ರಾಪ್ತವಾದ ಒಂದು ದೊಡ್ಡ ಪರಂಪರೆಯಲ್ಲಿ ಜನಿಸಿದವರು. ನಾರಾಯಣ ಅವರು ಚಂಪು ನುಡಿಗನ್ನಡಿಯ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಇದು ಬಹಳ ಶ್ರಮ, ಶ್ರದ್ದೆಯ ಮತ್ತು ಪ್ರೇಮದ ಕೆಲಸವಾಗಿದೆ. ಇಂತಹ ಅದ್ಭುತ ಕೆಲಸವನ್ನು ನಾರಾಯಣ ಅವರು ಮಾಡಿದ್ದಾರೆ. ನಾರಾಯಣ ಅವರು 80 ವಸಂತಗಳನ್ನು ಪೂರೈಸಿ ಸಾರ್ಥಕವಾದ ಬದುಕನ್ನು ನಡೆಸಿದ್ದಾರೆ. ಚಂಪು ಕೆಲಸ ಮಾಡಿರುವ ಇವರನ್ನು ಇನ್ನು ಮುಂದೆ ‘‘ಚಂಪು ನಾರಾಯಣ’ ಎಂಬ ಹೆಸರಿನಿಂದ ಕರೆಯೋಣ. ನಾರಾಯಣ ಅವರು ಬದುಕು ಬಂಗಾರವಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

    ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಹಳೆಗನ್ನಡ ಸೇರಿಸಿ: ನಾಡೋಜ ಹಂಪನಾ

    ಡಾ.ಪಿ.ವಿ.ನಾರಾಯಣ ಅವರು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ದಕ್ಷ ಅಧ್ಯಾಪಕ ಎಂದು ಜನಪ್ರಿಯರಾಗಿದ್ದಾರೆ. ಪದವಿ, ಪ್ರಶಸ್ತಿಗಳಿಂದ ದೂರ ಉಳಿದಿದ್ದಾರೆ. ಇವರ ಮುಂದಿನ ಜೀವನ ಆರೋಗ್ಯಕರ ಮತ್ತು ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.
    | ನಾಡೋಜ ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ, ಖ್ಯಾತ ವಿದ್ಯಾಂಸರು

    ಬೆಂ.ವಿ.ವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಚ್.ಶಶಿಕಲಾ ಮಾತನಾಡಿ, ಪಿವಿಎನ್ ಅವರು ನಮ್ಮ ಗುರುಗಳು. ಸರಳ, ಸಜ್ಜನಿಕೆ ಮತ್ತು ವಿದ್ವತ್ ಇವರ ಜತೆ ಜತೆಯಲ್ಲಿಯೇ ಇದೆ. ಕನ್ನಡದ ಕೈಂಕರ್ಯಗಳನ್ನು ಸಾಕಷ್ಟು ಮಾಡಿದ್ದಾರೆ. ವಚನ ಸಾಹಿತ್ಯ, ಚಂಪು ಸಾಹಿತ್ಯದ ಬಗ್ಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಪಿವಿಎನ್ ಅವರಿಗೆ ಕನ್ನಡ ಎಂದರೇ ವೀರನಿಷ್ಠೆ. ಸಮಾಜಕ್ಕಾಗಿ ತಮ್ಮನೆ ತಾವು ಅರ್ಪಿಸಿಕೊಂಡಿದ್ದಾರೆ. ತಾಳ್ಮೆ, ಸಹನ, ಸಹಿಷ್ಣುತೆಯ ಸಾಕಾರ ಮೂರ್ತಿ ಇವರು ಎಂದು ಬಣ್ಣಿಸಿದರು.

    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಉದಯಭಾನು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ ಹಾಗೂ ಕೃತಿಯ ಪ್ರಧಾನ ಸಂಪಾದಕ ಡಾ.ಆರ್.ಲಕ್ಷ್ಮೀನಾರಾಯಣ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    ಫೇಸ್​ಬುಕ್​ ಫ್ರೆಂಡ್​ನ ಮದುವೆಯಾಗಲು ಭಾರತಕ್ಕೆ ಬಂದ ವಿದೇಶಿ ಬೆಡಗಿ!

    ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

    ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂಥ ದಾಳ ಉರುಳಿಸಿದ ಅಮಿತ್ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts