More

    ಸಚಿವ ಡಾ. ಎಂ.ಸಿ. ಸುಧಾಕರ್ ಹಾರ, ತುರಾಯಿ ಉಡುಗೊರೆ ನೀಡಬೇಡಿ ಎಂದಿದ್ದು ಏಕೆ? ಇಲ್ಲಿದೆ ನೋಡಿ ಮಾಹಿತಿ

    ಬೆಂಗಳೂರು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಭಾಗವಹಿಸುವ ಕಾರ್ಯಕ್ರಮಗಳಿಗೆ ಹಾರ, ತುರಾಯಿ, ಹೂಗುಚ್ಛ ಮತ್ತಿರ ಉಡುಗೊರೆಗಳನ್ನು ನೀಡದಂತೆ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ವಿಭಾಗಗಳಿಗೂ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಆ ಮೂಲಕ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ಪಡೆಯಲು ನಿರಾಕರಿಸಿದ್ದು, ‘ಗೋ ಗ್ರೀನ್’ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಸಚಿವರು ಮುಂದಾಗಿದ್ದಾರೆ.

    ರಾಜ್ಯದಲ್ಲಿ 430 ಸರ್ಕಾರಿ ಮತ್ತು 375 ಖಾಸಗಿ ಪದವಿ ಕಾಲೇಜು, 26 ಸರ್ಕಾರಿ ವಿಶ್ವವಿದ್ಯಾಲಯ, 20 ಖಾಸಗಿ ಮತ್ತು 11 ಡೀಮ್ಡ್ ವಿಶ್ವವಿದ್ಯಾಲಯ ಸೇರಲಿದೆ. ಇದು ಮಾತ್ರವಲ್ಲದೆ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಇವೆಲ್ಲವೂ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರಲಿದೆ.

    ಈ ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ವಿವಿಗಳ ಮುಖ್ಯಸ್ಥರು, ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts