More

    ಹಿಂಡನ್​ಬರ್ಗ್​ ಹೊಡೆತ: 34,900 ಕೋಟಿ ರೂ. ಪ್ರಾಜೆಕ್ಟ್​ ಕೈ ಬಿಟ್ಟ ಅದಾನಿ ಗ್ರೂಪ್ಸ್!

    ನವದೆಹಲಿ: ಹಿಂಡನ್​ಬರ್ಗ್​ ಹೊಡೆತದಿಂದಾಗಿ ಅದಾನಿ ಗ್ರೂಪ್ಸ್​ ನಲುಗಿ ಹೋಗಿದ್ದು ಇದೀಗ ಅದಾನಿ ಗ್ರೂಪ್ಸ್​ ಸುಮಾರು 35 ಸಾವಿರ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್​ ಒಂದನ್ನು ಕೈಬಿಟ್ಟಿದೆ.

    ಅದಾನಿ ಗ್ರೂಪ್ ಗುಜರಾತಿನ ಮುಂದ್ರಾದಲ್ಲಿ ರೂ 34,900 ಕೋಟಿ ರೂ. ಮೌಲ್ಯದ ಪೆಟ್ರೋಕೆಮಿಕಲ್ ಪ್ರಾಜೆಕ್ಟ್‌ನ ಕೆಲಸವನ್ನು ಸ್ಥಗಿತಗೊಳಿಸಿದೆ. ಇವರು ಈ ನಿರ್ಧಾರವನ್ನು ಕೈಗೊಳ್ಳಲು ಅನೇಕ ಕಾರಣಗಳಿವೆ ಎನ್ನಲಾಗಿದೆ. ಮೊದಲನೆಯದು, ಇರುವ ಹಣವನ್ನು ಉಳಿಸಿಕೊಳ್ಳುವುದು ಮತ್ತೊಂದು, ಹೂಡಿಕೆದಾರರ ಹಣವನ್ನು ಉಳಿಸುವುದು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟ: ಹಿಂಡನ್​ಬರ್ಗ್ ವರದಿ ಪರಿಣಾಮ, ಕಂಪನಿಗಳ ಷೇರುಗಳಲ್ಲಿ ಕುಸಿತ

    ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ 2021ರಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮುಂದ್ರಾ ಪೆಟ್ರೋಕೆಮ್ ಲಿಮಿಟೆಡ್ಅನ್ನು ಅದಾನಿ ಪೋರ್ಟ್ಸ್‌ನಲ್ಲಿ ಗ್ರೀನ್‌ಫೀಲ್ಡ್ ಕಲ್ಲಿದ್ದಲು-ಪಿವಿಸಿ ಸ್ಥಾವರವನ್ನು ಸ್ಥಾಪಿಸಲು ಮತ್ತು ಗುಜರಾತ್‌ನ ಕಚ್ ಜಿಲ್ಲೆಯ ವಿಶೇಷ ಆರ್ಥಿಕ ವಲಯ (APSEZ) ಭೂಮಿಯನ್ನು ಸಂಯೋಜಿಸಿತ್ತು.

    ಆದರೆ ಹಿಂಡೆನ್‌ಬರ್ಗ್ ರಿಸರ್ಚ್‌ನ ಜನವರಿ 24 ರ ವರದಿಯಲ್ಲಿ ಲೆಕ್ಕಪರಿಶೋಧಕರ ವಂಚನೆ, ಸ್ಟಾಕ್ ಮ್ಯಾನಿಪ್ಯುಲೇಷನ್‌ಗಳು ಮತ್ತು ಇತರ ಕಾರ್ಪೊರೇಟ್ ಆಡಳಿತದ ಲೋಪಗಳ ಬಗ್ಗೆ ಗೌತಮ್ ಅದಾನಿ ಸಾಮ್ರಾಜ್ಯದ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಇದರಿಂದಾಗಿ ಅದಾನಿ ಕಂಪನಿಗಳ ಶೇರು ಮೌಲ್ಯ ಮಾರುಕಟ್ಟೆಯಲ್ಲಿ ಪಾತಾಳ ಕಂಡಿತ್ತು.

    ಇದನ್ನೂ ಓದಿ: ಎಲಾನ್​ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?

    ಈಗ, ವ್ಯಾಪಾರದಲ್ಲಿ ಮತ್ತೊಮ್ಮೆ ಟಾಪ್​ಗೆ ಏರಲು ಕೆಲವು ಸಾಲಗಳನ್ನು ಮರುಪಾವತಿ ಮಾಡಿ ಹೂಡಿಕೆದಾರರ ನಂಬಿಕೆ ಉಳಿಸಿಕೊಳ್ಳುವುದು ಮಾತ್ರವೇ ಒಂದು ತಂತ್ರವಾಗಿ ಉಳಿದಿದೆ. ಹಿಂಡನ್‌ಬರ್ಗ್‌ ಹೊರಿಸಿದ್ದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ಸ್​ ನಿರಾಕರಿಸಿದೆ.

    PTI ಸುದ್ದಿಸಂಸ್ಥೆ ನೋಡಿದ ಮೇಲ್‌ಗಳಲ್ಲಿ, ಮುಂದ್ರಾ ಪೆಟ್ರೋಕೆಮಿಕಲ್​ ಲಿಮಿಟೆಡ್‌ನ ಗ್ರೀನ್ ಪಿವಿಸಿ ಯೋಜನೆಗಾಗಿ ಕೆಲಸದ ವ್ಯಾಪ್ತಿಯ ಎಲ್ಲಾ ಚಟುವಟಿಕೆಗಳನ್ನು ಮತ್ತು ಎಲ್ಲಾ ಜವಾಬ್ದಾರಿಯುತ ಹುದ್ದೆಗಳನ್ನು ಅಮಾನತುಗೊಳಿಸುವಂತೆ ಗುಂಪು ಆದೇಶಿಸಿದೆ. ಇದು ಅನಿರೀಕ್ಷಿತ ಸನ್ನಿವೇಶ. ವಿವಿಧ ವ್ಯವಹಾರದ ವರ್ಗಗಳಲ್ಲಿ, ಅದಾನಿ ಗ್ರೂಪ್ಸ್​ ವಿವಿಧ ಯೋಜನೆಗಳನ್ನು ಮರು-ಮೌಲ್ಯಮಾಪನ ಮಾಡುತ್ತಿದೆ. ಭವಿಷ್ಯದ ಹಣದ ಹರಿವು ಮತ್ತು ಹಣಕಾಸಿನ ಆಧಾರದ ಮೇಲೆ, ಕೆಲವು ಯೋಜನೆಗಳನ್ನು ಅದರ ಮುಂದುವರಿಕೆ ಮತ್ತು ಟೈಮ್‌ಲೈನ್‌ನಲ್ಲಿ ಪರಿಷ್ಕರಣೆಗಾಗಿ ಮರು-ಮೌಲ್ಯಮಾಪನ ಮಾಡಲಾಗುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts