More

    ಫೆ.24ರಿಂದ ಚರಕ ಉತ್ಸವ

    ಸಾಗರ: ತಾಲೂಕಿನ ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ಧೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.24 ಮತ್ತು 25ರಂದು ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ-2024 ಹಮ್ಮಿಕೊಳ್ಳಲಾಗಿದೆ.
    24ರಂದು ಕೈಮಗ್ಗ ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತç ಯೋಜನೆಯಡಿ ಕೊಡುಕೊಳ್ಳುವವರ ಸಮಾವೇಶ ಹಾಗೂ ಪವಿತ್ರ ವಸ್ತç ವಿಚಾರ ಮಂಥನ ನಡೆಯಲಿದೆ. ದೇಶದ ಹೆಸರಾಂತ ವಿನ್ಯಾಸಕಾರರು, ಕೈ ಉತ್ಪನ್ನಗಳ ಉತ್ಪಾದಕರು, ವಿವಿಧ ಜಿಲ್ಲೆಯ ನೇಕಾರರು, ಸಾಹಿತಿಗಳು, ಬರಹಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ದೆಹಲಿ ಹರಿಜನ್ ಸೇವಕ ಸಂಘದ ಸಂಜಯ್ ರೈ ಚರಕ ಉತ್ಸವ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮಾವಿನಸರ ಉಪಸ್ಥಿತರಿರುವರು. ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7.30ಕ್ಕೆ ಮೈಸೂರಿನ ನವೋದಯ ತಂಡದಿAದ ಅಯೋಧ್ಯಾ ಕಾಂಡ ನಾಟಕ ಪ್ರದರ್ಶನ ಇರುತ್ತದೆ. 25ರಂದು ಸಂಜೆ 6.30ಕ್ಕೆ ಕಾಯಕ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ಇರುತ್ತದೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾಯಕ ಪ್ರಶಸ್ತಿ ವಿತರಿಸಲಿದ್ದಾರೆ. ಅಧ್ಯಕ್ಷ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದು, ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಹಟ್ಟಿಯಂಗಡಿ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts