More

    ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶದ ಗೌರವಾನ್ವಿತ ಸಿಎಂ ಎಂದ ನಟಿ ಊರ್ವಶಿ ರೌಟೇಲಾ; ಟ್ವೀಟ್ ವೈರಲ್​!

    ಆಂಧ್ರಪ್ರದೇಶ: ಟಾಲಿವುಡ್​​ ಚಿತ್ರರಂಗದ ಪವರ್​ ಸ್ಟಾರ್​ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಬ್ರೋ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಮಾಡಿರುವ ಟ್ವೀಟ್​ವೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: 2024ರ ಚುನಾವಣೆಗೂ ಮುನ್ನ ಬಿಜೆಪಿ ಬಂಗಾಳದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ: ಮಮತಾ ಬ್ಯಾನರ್ಜಿ

    ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ಅಭಿನಯದ ಬ್ರೋ ಚಿತ್ರದಲ್ಲಿ ‘ಮೈ ಡಿಯರ್ ಮಾರ್ಕಂಡೇಯ’ ಹಾಡಿನಲ್ಲಿ ಊರ್ವಶಿ ರೌಟೇಲಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ರಿಲೀಸ್​​ ಕುರಿತು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುವ ಸಲುವಾಗಿ ಟ್ವೀಟ್​ ಮಾಡಿದ ಅವರು, “ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ‘ಬ್ರೋ’ ಚಿತ್ರದಲ್ಲಿ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದು, ಬಹಳ ಸಂತೋಷವಾಗಿದೆ” ಎಂದು ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಪವನ್​ ಕಲ್ಯಾಣ್ ಅವರನ್ನು ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡ ನೆಟ್ಟಿಗರು, ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ರೌಟೇಲಾ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ನಟಿ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

    ‘ಸಲಾರ್’ ರಿಲೀಸ್​​ ದಿನವೇ ‘ದ ವ್ಯಾಕ್ಸಿನ್ ವಾರ್’!; ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts