More

    ಬೆಂಗಳೂರಿಗೆ ಮರಳಿದ ಮೋಹಕ ತಾರೆ ರಮ್ಯಾ; ಕುತೂಹಲ ಸೃಷ್ಟಿಸಿದೆ ಅನಿರೀಕ್ಷಿತ ಆಗಮನ..!

    ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ದೂರ ಇರುವ ನಟಿ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಡಿ.3 ರಂದು ಬೆಂಗಳೂರಿಗೆ ಬಂದಿಳಿದಿರುವ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಒಂದು ಪೋಸ್ಟ್. ಇನ್​ಸ್ಟಾಗ್ರಾಮ್​ನಲ್ಲಿ ಮೋಹಕ ತಾರೆ ತಾವು ಬೆಂಗಳೂರಿಗೆ ಬಂದು ಇಳಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಕರೊನಾ ಟೆಸ್ಟ್ ಬಗ್ಗೆ ಹಂಚಿಕೊಂಡಿದ್ದಾರೆ.

    ಸದಾ ಸುದ್ದಿಯಲ್ಲಿರುವ ನಟಿ ರಮ್ಯಾ ಪೋಸ್ಟ್​​ನಲ್ಲಿ ಈ ಭಾರಿ ಕರೊನಾ ಮತ್ತು ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪೋಸ್ಟ್​​ನಲ್ಲಿ ನಟಿ ರಮ್ಯಾ, ‘ಬೆಂಗಳೂರು ಏರ್ಪೋಟ್ ಎಂದ ಕ್ಷಣ ಎಲ್ಲರಿಗೂ ಈಗ ಆತಂಕವಾಗುತ್ತಿದೆ. ಕರೊನಾ ರೂಪಾಂತರಿ ವೈರಾಣು ಒಮಿಕ್ರಾನ್ ಎಲ್ಲೆಡೆ ಹಬ್ಬಿದೆ. ಹಾಗಾಗಿ, ರಾಜ್ಯಕ್ಕೆ ಬರುವ ಎಲ್ಲರೂ ಸದ್ಯ ಕರೊನಾ ಟೆಸ್ಟ್ ಮಾಡಿಕೊಳ್ಳಲೇ ಬೇಕು ಎಂಬಂತಾಗಿದೆ. ನಾನು ಬೆಂಗಳೂರಿಗೆ ಬಂದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಆರತಿ ಬೆಳಗಿ ತಮ್ಮ ಮನೆ ನಾಯಿಯ ಬರ್ತ್‌ಡೇ ಆಚರಿಸಿದ ಸುಧಾ ಮೂರ್ತಿ; ವಿಡಿಯೋ ವೈರಲ್..

    ಜೊತೆಗೆ, ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕರೊನಾ ಟೆಸ್ಟ್ ಸುಲಭವಾಗಿಯೇ ನಡೆದಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ವೈದ್ಯರು, ನರ್ಸ್​ಗಳು, ವಿಮಾನ ನಿಲ್ದಾಣದ ಉದ್ಯೋಗಿಗಳು ಮತ್ತು ಎಲ್ಲರೂ ಅಲ್ಲಿ ಕರೊನಾ ಟೆಸ್ಟ್​​ಗೆಂದು ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದು ವಿವರಿಸಿದ್ದಾರೆ. ನಟಿ ರಮ್ಯಾ ಹುಟ್ಟುಹಬ್ಬಕ್ಕೆಂದು ನವೆಂಬರ್ 26ರಂದು ಸ್ನೇಹಿತರೊಡನೆ ಬೇರೆ ಸ್ಥಳದಲ್ಲಿ ಎಂಜಾಯ್ ಮಾಡಿದ್ದು ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಇದನ್ನೂ ಓದಿ: ‘ಮೊನ್ನೆ ತಾನೇ ನಾನು ಅವರು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ವಿ..’: ಶಿವರಾಂ ಅಂತಿಮ ದರ್ಶನ ಪಡೆದ ಸಿಎಂ ಮತ್ತೇನೆಂದರು?

    ಸಿನಿಮಾಗಳಿಂದ ಮತ್ತು ರಾಜಕೀಯದಿಂದಲೂ ದೂರವಿದ್ದ ನಟಿ ರಮ್ಯಾ ಬೇರೆ ದೇಶಗಳಲ್ಲಿ ಇದ್ದರು. ಇಷ್ಟು ದಿನ ಬೆಂಗಳೂರಿನಲ್ಲಿ ಇರದ ನಟಿ ರಮ್ಯಾ ಮತ್ತೆ ಬೆಂಗಳೂರಿಗೆ ಬಂದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ನಟಿ ರಮ್ಯಾ ಅವರ ಈ ಆಕಸ್ಮಿಕ ಆಗಮನದಿಂದ ನಟಿ ಸಿನಿಮಾಗಳಲ್ಲಿ ಮತ್ತೆ ಮಿಂಚಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕೆಲವರಂತೂ, ಒಂದಿಷ್ಟು ಸಿನಿಮಾ ಕಥೆಗಳನ್ನು ಕೇಳಲು ನಟಿ ರಮ್ಯಾ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂಬ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts