More

    ‘ನಾನು ಸ್ಟಾರ್ ಅಲ್ಲ, ನಿಮ್ಮ ಮನೆ ಮಗಳು’: ನಟಿ ಕಂಗನಾ ರಣಾವತ್​ಗೆ ಅದ್ದೂರಿ ಸ್ವಾಗತ

    ಹಿಮಾಚಲ ಪ್ರದೇಶ: ಪ್ರತಿಬಾರಿ ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದ ಬಾಲಿವುಡ್ ಬೆಡಗಿ, ನಟಿ ಕಂಗನಾ ರಣಾವತ್​, ಇದೀಗ ಲೋಕಸಭಾ ಚುನಾವಣೆ 2024ರಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದಿದ್ದು, ಹಿಮಾಚಲ ಪ್ರದೇಶದ ಮಂಡಿಯಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕಿ ಸುಪ್ರಿಯಾ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ಸಿಟ್ಟಾಗಿದ್ದ ಕಂಗನಾ, ವಿವಾದಗಳ ಬೆನ್ನಲ್ಲೇ ಈಗ ಮಂಡಿಯಲ್ಲಿ ರೋಡ್​ ಶೋ ಆರಂಭಿಸಿದ್ದಾರೆ.

    ಇದನ್ನೂ ಓದಿ: ಹೊಸ ದಾಖಲೆ ಬರೆದ ಚಿನ್ನದ ಬೆಲೆ: ಬಂಗಾರ ತುಟ್ಟಿ ಆಗುತ್ತಿರುವುದೇಕೆ?

    ಇಂದು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಕಂಗನಾ ರಣಾವತ್ ಮುಂಬರುವ ಚುನಾವಣೆಗಾಗಿ ನಗರ ಪ್ರದೇಶದಲ್ಲಿ ಬೃಹತ್​ ರೋಡ್‌ಶೋ ನಡೆಸಿದರು. ಕಾರ್ಯಕ್ರಮದ ವೇಳೆ ನೆರೆದಿದ್ದ ಜನಸಮೂಹದತ್ತ ಕೈ ಬೀಸಿ ಮಾತನಾಡಿದ ನಟಿ, “ಬಹಳಷ್ಟು ಜನರು ಇಲ್ಲಿಗೆ ಬಂದಿದ್ದೀರಾ, ಮಂಡಿಯ ಧ್ವನಿಯಾಗಿ ಈ ಚುನಾವಣೆಯಲ್ಲಿ ನಾನು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ನಿಮ್ಮಲ್ಲರಿಗೂ ಹೆಮ್ಮೆ ಇದೆ” ಎಂದರು.

    ‘ಜೈ ಶ್ರೀ ರಾಮ್’ ಎಂದು ಕೂಗುತ್ತ ನಟಿಯನ್ನು ಸ್ವಾಗತಿಸಿದ ಬೆಂಬಲಿಗರನ್ನು ಉದ್ದೇಶಿಸಿ ಮಾತನ್ನು ಮುಂದುವರಿಸಿದ ಕಂಗನಾ, “ಬಿಜೆಪಿಗೆ ಅಭಿವೃದ್ಧಿ ಮುಖ್ಯ ವಿಷಯ. ಮಂಡಿಯ ಜನರು ತಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತಾರೆ. ಕ್ಷೇತ್ರದ ನಿವಾಸಿಗಳು ನನ್ನನ್ನು ಕೇವಲ ನಾಯಕಿಯಾಗಿ ನೋಡದೆ ನಿಮ್ಮ ಮನೆ ಮಗಳಾಗಿ ನೋಡಿ ಪ್ರೋತ್ಸಾಹಿಸಿ ಎಂದರು.

    ಇದನ್ನೂ ಓದಿ: ಕಾಂಗ್ರೆಸ್​ಗೆ ಐಟಿ ಶಾಕ್..1800 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್!

    ಲೋಕಸಭೆ ಚುನಾವಣೆ: ಹಿಮಾಚಲ ಪ್ರದೇಶವು ನಾಲ್ಕು ಲೋಕಸಭಾ ಸ್ಥಾನಗಳನ್ನು ಒಳಗೊಂಡಿದ್ದು, ಹಮೀರ್‌ಪುರ, ಮಂಡಿ, ಶಿಮ್ಲಾ ಮತ್ತು ಕಾಂಗ್ರಾದಲ್ಲಿ ಚುನಾವಣೆ ನಡೆಯಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಯಾರ ಮುಡಿಗೆ ಗೆಲುವು ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts