More

    ಕರೊನಾ ವಿರುದ್ಧ ಹೋರಾಡಲು ನರ್ಸ್​ ಸೇವೆಗೆ ಧುಮುಕಿದ ಬಾಲಿವುಡ್​ ನಟಿ: ಹಿಂದೆ ಮಾಡಿದ್ದ ವಾಗ್ದಾನಕ್ಕಾಗಿ ಸಕಾಲದಲ್ಲಿ ನೆರವು

    ಮುಂಬೈ: ಜಾಗತಿಕವಾಗಿ ಮೃತ್ಯುಕೂಪ ನಿರ್ಮಿಸಿರುವ ಮಹಾಮಾರಿ ಕರೊನಾ ಭಾರತದಲ್ಲೂ ಮರಣ ಮೃದಂಗ ಬಾರಿಸುತ್ತಿದ್ದು, ಮಹಾರಾಷ್ಟ್ರ ಸೋಂಕಿತರ ಸಂಖ್ಯೆಯಲ್ಲಿ ನಂಬರ್​ 2 ಸ್ಥಾನದಲ್ಲಿದೆ. ಹೀಗಿರುವಾಗ ಬಾಲಿವುಡ್​ ನಟಿಯೊಬ್ಬರು ಸೋಂಕಿನ ವಿರುದ್ಧ ಹೋರಾಡಲು ನರ್ಸ್​ ಸೇವೆಯನ್ನು ಆರಂಭಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಭಾರತೀಯ ಸಿನಿಮಾ ರಂಗದ ಪ್ರಸಿದ್ಧ ಹಿರಿಯ ನಟ ಸಂಜಯ್​ ಮಿಶ್ರಾ ಅವರೊಟ್ಟಿಗೆ “ಕಾಂಚ್ಲಿ” ಚಿತ್ರದಲ್ಲಿ ಜತೆಯಾಗಿ ನಟಿಸಿರುವ ನಟಿ ಶಿಖಾ ಮೆಲ್ಹೋತ್ರಾ ಮಹಾರಾಷ್ಟ್ರದ ಆಸ್ಪತ್ರೆಯೊಂದರಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನರ್ಸ್​ ಯೂನಿಫಾರ್ಮ್​ ತೊಟ್ಟಿರುವ ಫೋಟೋವನ್ನು ಶಿಖಾ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ನರ್ಸಿಂಗ್​ ಕೋರ್ಸ್​ ಮಾಡಿದ್ದ ಶಿಖಾ, ಇದೀಗ ಕರೊನಾ ವಿರುದ್ಧ ಹೋರಾಡಿ ಜನರ ಸೇವೆ ಬಳಸಿಕೊಳ್ಳುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ.

    ಮುಂಬೈನ ಜೋಗೇಶ್ವರಿ ಈಸ್ಟ್​ನಲ್ಲಿರುವ ಬಾಳಾಸಾಹೇಬ್​ ಠಾಕ್ರೆ ಟ್ರಾಮಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಖಾ ಅವರು 2014ರಲ್ಲಿ ದೆಹಲಿಯ ವರ್ಧಮಾನ್​ ಮಹಾವೀರ್​ ಮೆಡಿಕಲ್​ ಕಾಲೇಜಿನಲ್ಲಿ ನರ್ಸಿಂಗ್​ ಕೋರ್ಸ್​ ಮುಗಿಸಿದರು. ಆದರೆ, ಸಿನಿಮಾದೆಡಗಿನ ಅವರ ತುಡಿತ ಬಾಲಿವುಡ್​ಗೆ ಕಾಲಿಡುವಂತೆ ಮಾಡಿತು. ಆದರೆ ಕರೊನಾದಂತಹ ತುರ್ತು ಪರಿಸ್ಥಿತಿಯಲ್ಲಿ ಸುಮ್ಮನೇ ಕೂರದ ಶಿಖಾ ತಾನು ಕಲಿತದ್ದು ಇತರರಿಗೆ ಉಪಯೋಗವಾಗಲಿ ಎಂದು ನರ್ಸ್​ ಯೂನಿಫಾರ್ಮ್​ ಧರಿಸಿ ಕರೊನಾ ವಿರುದ್ಧದ ರಣರಂಗಕ್ಕೆ ಪ್ರವೇಶ ನೀಡಿದ್ದಾರೆ.

    ನರ್ಸಿಂಗ್​ ತರಬೇತಿ ಮುಗಿಸಿದ ಬಳಿಕ ಸಮಾಜಕ್ಕೆ ಸೇವೆ ಸಲ್ಲಿಸುವೆ ಎಂದು ವಾಗ್ದಾನ ಮಾಡಿದ್ದೆ. ಅದಕ್ಕೆ ಈಗ ಸೂಕ್ತ ಸಮಯ ಅನಿಸುತ್ತಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಶಿಖಾ ಬರೆದುಕೊಂಡಿದ್ದಾರೆ. ಸಂದಿಗ್ಧ ಸಮಯದಲ್ಲಿ ಜನತೆಗೆ ನೆರವಾದ ಶಿಖಾಗೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.

    ಸದ್ಯ ದೇಶದಲ್ಲಿ ದಿನೇ ದಿನೇ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, 900ರ ಸಮೀಪಕ್ಕೆ ಬಂದಿದೆ. ಒಟ್ಟು 21 ಮಂದಿ ಬಲಿಯಾಗಿದ್ದಾರೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 6 ಲಕ್ಷ ಸಮೀಪಕ್ಕೆ ಬಂದಿದೆ. 27 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಲಸಿಕೆ ಕಂಡುಹಿಡಿಯಬೇಕಾದರೆ ಆರೋಗ್ಯಯುತ ಸ್ವಯಂಪ್ರೇರಿತರು ಕರೊನಾ ಸೋಂಕಿಗೆ ಒಳಗಾಗಲೇಬೇಕೆಂದ ವಿಜ್ಞಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts