More

    ‘ನನ್ನ ಹೆಸರಲ್ಲಿ ನವ ನಟಿಯರಿಗೆ ಧೋಖಾ!’; ರೊಚ್ಚಿಗೆದ್ದ ನಟ ವಿಜಯ್​ ದೇವರಕೊಂಡ

    ಹೈದರಾಬಾದ್​: ಟಾಲಿವುಡ್​ನಲ್ಲಿ ನಟ ವಿಜಯ್​ ದೇವರಕೊಂಡ ಸ್ಟಾರ್ ನಟ. ಅರ್ಜುನ್​ ರೆಡ್ಡಿ ಸಿನಿಮಾ ಮೂಲಕ ಸ್ಟಾರ್​ಗಿರಿ ಅಲಂಕರಿಸಿ, ಸದ್ಯ ಬಹುಬೇಡಿಕೆಯುಳ್ಳ ನಟನಾಗಿ ಬೆಳೆದಿದ್ದಾರೆ. ಆದರೆ, ಇದೀಗ ಇದೇ ನಟನ ಹೆಸರಿನಲ್ಲಿ ಒಂದಷ್ಟು ವಂಚನೆಗಳಾಗುತ್ತಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ರಾಹುಲ್​ ಒಳ್ಳೆಯ ಸ್ನೇಹಿತ ಅಂದ್ರು ನಿರ್ಮಾಪಕ ಕೆ.ಮಂಜು

    ಅಂದರೆ, ಟಾಲಿವುಡ್​ನಲ್ಲಿ ಕೆಲ ಚಿತ್ರ ನಿರ್ಮಾಣ ಸಂಸ್ಥೆಗಳು, ‘ನಮ್ಮ ಚಿತ್ರದಲ್ಲಿ ವಿಜಯ್​ ದೇವರಕೊಂಡ ನಾಯಕನಾಗಿ ನಟಿಸಲಿದ್ದಾರೆ. ಆಸಕ್ತಿಯುಳ್ಳ ನಟ, ನಟಿಯರು ಆಡಿಷನ್​ಗೆ ಬರಬಹುದು. ವಿಜಯ್ ಜತೆ ನಟಿಸುವ ಚಾನ್ಸ್​ ಗಿಟ್ಟಿಸಿಕೊಳ್ಳಬಹುದು ’ ಎಂದು ಹೇಳಿಕೊಳ್ಳುತ್ತಿವೆ. ಈ ವಿಚಾರ ವಿಜಯ್​ ದೇವರಕೊಂಡ ಗಮನಕ್ಕೆ ಬಂದಿದ್ದು, ಅಂಥ ಸಂಸ್ಥೆಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

    ‘ಕೆಲ ನಿರ್ಮಾಪಕರು ವಿಜಯ್​ ದೇವರಕೊಂಡ ಹೆಸರಲ್ಲಿ ನವ ನಟ, ನಟಿಯರಿಗೆ ವಂಚಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಜಾಹೀರಾತು ನೀಡುತ್ತಿವೆ. ಅಂಥ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದ್ದೇವೆ. ಒಂದು ವೇಳೆ ಸಿನಿಮಾ ಮಾಡುವುದೇ ನಿಜವಾದರೆ, ಆ ವಿಚಾರವನ್ನು ಸ್ವತಃ ವಿಜಯ್​ ಅವರೇ ಘೋಷಣೆ ಮಾಡಲಿದ್ದಾರೆ’ ಎಂದು ವಿಜಯ್​ ಅವರ ಸೋಷಿಯಲ್​ ಮೀಡಿಯಾ ಟೀಮ್​ ಪ್ರಕಟಣೆ ಹೊರಡಿಸಿದೆ.

    ಇದನ್ನೂ ಓದಿ: ನ್ಯಾಯ ಸಿಗುವ ನಿರೀಕ್ಷೆ ಎಂದ ಕಂಗನಾ

    ಸದ್ಯ ಪುರಿ ಜಗನ್ನಾಥ್​ ಜತೆಗೆ ಫೈಟರ್​ ಚಿತ್ರದಲ್ಲಿ ವಿಜಯ್​ ಬಿಜಿಯಾಗಿದ್ದು, ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದೆ. ಇನ್ನುಳಿದಂತೆ ವಿ ಚಿತ್ರ ನಿರ್ಮಾಣ ಮಾಡಿದ್ದ ಮೋಹನ್​ ಕೃಷ್ಣ ಅವರ ಸಿನಿಮಾದಲ್ಲಿಯೂ ವಿಜಯ್​ ನಟಿಸಲಿದ್ದಾರೆ. (ಏಜೆನ್ಸೀಸ್​)

    ಕೆಲಸದ ವಿಷಯದಲ್ಲಿ ಪತ್ನಿ ದೀಪಿಕಾಳನ್ನೇ ಹಿಂಬಾಲಿಸಿದ ರಣವೀರ್​ ಸಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts