More

    ‘ವೀ ಆರ್​ ವಿದ್​ ಯೂ VR..’ ಅಂದ್ರು ಸಲ್ಮಾನ್​ ಖಾನ್​; ಬಹಿರಂಗವಾಯ್ತು ಬಿಗ್​ ಅಸೋಸಿಯೇಷನ್​..

    ಬೆಂಗಳೂರು: ಕನ್ನಡದ ಮತ್ತೊಂದು ಬಹುನಿರೀಕ್ಷಿತ ಅದ್ದೂರಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಕುರಿತು ನಾಳೆ ದೊಡ್ಡದೊಂದು ಘೋಷಣೆ ಮಾಡಲಿದ್ದೇವೆ ಎಂದು ಚಿತ್ರತಂಡ ನಿನ್ನೆ ಹೇಳಿಕೊಂಡಿತ್ತು. ಅಂದಹಾಗೆಯೇ ಅದೇನು ಎಂಬುದನ್ನು ಇಂದು ಚಿತ್ರತಂಡ ಇದೀಗ ಹೇಳಿಕೊಂಡಿದೆ. ಆ ಮೂಲಕ ವಿಕ್ರಾಂತ್ ರೋಣ ಕುರಿತ ಬಿಗ್ ಅಸೋಸಿಯೇಷನ್ ಬಹಿರಂಗಗೊಂಡಿದೆ.

    ಶಾಲಿನಿ ಮಂಜುನಾಥ್, ಜ್ಯಾಕ್​ ಮಂಜುನಾಥ್ ನಿರ್ಮಾಣ, ಅನೂಪ್​ ಭಂಡಾರಿ ನಿರ್ದೇಶನ ಹಾಗೂ ಕಿಚ್ಚ ಸುದೀಪ್, ಜಾಕ್ವೆಲಿನ್​ ಫೆರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್, ಮುಂತಾದ ಘಟಾನುಟಿಗಳ ಅಭಿನಯದಲ್ಲಿ ವಿಕ್ರಾಂತ್ ರೋಣ ಬಹುಭಾಷೆಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ, ಇದೀಗ ಬಿಗ್ ಅಸೋಸಿಯೇಷನ್​ನಿಂದಾಗಿ ಅದನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

    ಜುಲೈ 28ರಂದು ಐದು ಭಾಷೆಗಳಲ್ಲಿ ತೆರೆಗಪ್ಪಳಿಸಲಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಇದೀಗ ಬಾಲಿವುಡ್​ನ ಖ್ಯಾತ ನಟ ಸಲ್ಮಾನ್​ ಖಾನ್​, ‘ವೀ ಆರ್​ ವಿದ್ ಯೂ VR’ ಎಂದು ಹೇಳಿದ್ದಾರೆ. ಅರ್ಥಾತ್, ವಿಕ್ರಾಂತ್ ರೋಣ ಚಿತ್ರದ ಜತೆ ಸಲ್ಮಾನ್​ ಖಾನ್​ ಫಿಲ್ಸ್ಮ್ ಕೈಜೋಡಿಸಿದೆ. ಅಂದರೆ ವಿಕ್ರಾಂತ್ ರೋಣವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್​ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಪ್ರಸ್ತುತಿ ಪಡಿಸಲಿದ್ದಾರೆ.

    ಈ ಪ್ಯಾನ್ ವರ್ಲ್ಡ್ 3D ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಮತ್ತು ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್, ಇಂಗ್ಲಿಷ್ ಇತ್ಯಾದಿ ಭಾಷೆಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಕೂಡ ಇದೆ.

    ವಿವಾದಕ್ಕೆ ಕಾರಣವಾಯ್ತು ಸೊಳ್ಳೆ ಸಾಯಿಸುವ ಬ್ಯಾಟ್​!; ಐಎಎಸ್​ ಅಧಿಕಾರಿ ವಿರುದ್ಧ ಕ್ರಿಕೆಟಿಗನ ಅಸಮಾಧಾನ

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts