More

    ಒಗ್ಗಟ್ಟು-ಪ್ರೀತಿ ಕಲಿಸಿದ ನಮ್ಮ ಬಾಲ್ಯದ ಲೆವೆಲ್ಲೇ ಬೇರೆ ಇತ್ತು: ವಿಜಯವಾಣಿ ಕ್ಲಬ್​ನಲ್ಲಿ ನಟ ನೀನಾಸಂ ಸತೀಶ್​

    ಬೆಂಗಳೂರು: ನಮ್ಮ ಬಾಲ್ಯದ ಲೆವೆಲ್ಲೇ ಬೇರೆ ಇತ್ತು ಎಂದು ಬಾಲ್ಯದ ಕ್ಷಣಗಳನ್ನು ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್ ಸಂವಾದದಲ್ಲಿ ಇದೀಗ ಮಾತನಾಡುತ್ತಿರುವ ನಟ ನೀನಾಸಂ ಸತೀಶ್, ತಾವು ಊರು ಬಿಟ್ಟಿದ್ದೇಕೆ ಎಂಬುದರಿಂದ ಹಿಡಿದು ಹಲವಾರು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಮಂಡ್ಯದ ಎಲಾದಹಳ್ಳಿಯಲ್ಲಿ ಕೆಳ ಮಧ್ಯಮವರ್ಗದಲ್ಲಿ ಹುಟ್ಟಿದ ನನಗೆ ಆ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ತಾಯಿ ತುಂಬಾ ಒತ್ತಡದಲ್ಲಿದ್ದರು. ಆಗ ಮನೆಯಲ್ಲಿ ನೆಮ್ಮದಿ ಇಲ್ಲದೆ ಓದಲೂ ಆಗದೆ ಎಸ್​ಎಸ್​ಎಲ್​ಸಿಯಲ್ಲಿದ್ದಾಗಲೇ ಊರು ಬಿಟ್ಟು ಬೆಂಗಳೂರಿಗೆ ಬಂದೆ. ಇಲ್ಲಿ ಯಶವಂತಪುರದ ಗೋಪಾಲ್ ಥಿಯೇಟರ್​​ನಲ್ಲಿ ಒಂದು ವರ್ಷ ನಾನಾ ಕೆಲಸ ಮಾಡಿ, ನಂತರ ಬೇರೆ ಬೇರೆ ಕಡೆ ಆಫೀಸ್​ ಬಾಯ್​, ಬಸ್​ ಕ್ಲೀನ್​, ಫ್ಲವರ್​ ಡೆಕೋರೇಷನ್​ ಸೇರಿ ಹಲವಾರು ಕೆಲಸಗಳನ್ನು ಮಾಡಿದ್ದೆ. ಹೀಗಿರುವಾಗ ತಾಯಿಯನ್ನು ಬಿಟ್ಟಿರಲು ಆಗುತ್ತಿರಲಿಲ್ಲ.

    ಒಂದು ದಿನ ತಾಯಿ ಬಂದು ಹುಡುಕಿಕೊಂಡು ವಾಪಸ್ ಊರಿಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋದಮೇಲೆ ನೇತಾಜಿ ಯುವಕ ಸಂಘ ಅಂತ ಕಟ್ಟಿದೆವು, ಅಲ್ಲಿಂದ ಹೊಸ ಬದುಕು ಶುರುವಾಯಿತು ಎಂದ ಸತೀಶ್, ನಂತರ ರಂಗಭೂಮಿ, ಕಿರುತೆರೆ, ಹಿರಿತೆರೆಗಳಿಗೆ ಬಂದ ಬಗೆಯನ್ನು ಹೇಳಿಕೊಂಡರು.

    ಇನ್ನು ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿರುವ ಅವರು, ಬಾಲ್ಯದಲ್ಲಿ ಕೊಬ್ರಿ ಮಿಠಾಯಿ, ಒಳ ಪೆಟ್ಲ್ ಸೈಕಲ್​, ಊರಿಗೊಂದೇ ಟಿವಿ ಇದ್ದರೂ ಮಜಾವಾಗಿ ಇದ್ದಿದ್ದನ್ನು ನೆನಪಿಸಿಕೊಂಡರು. ಮಾತ್ರವಲ್ಲ ನಮ್ಮ ಬಾಲ್ಯದ ಲೆವೆಲ್ಲೇ ಬೇರೆ ಇತ್ತು ಎಂದ ಅವರು ಈಗಿನ ಜನರೇಷನ್​ಗೆ ಆ ಥರ ಬಾಲ್ಯ ಸಿಗಲು ಸಾಧ್ಯವಿಲ್ಲ. ನನ್ನ ಬಾಲ್ಯ ಒಗ್ಗಟ್ಟು-ಪ್ರೀತಿ ಎಲ್ಲವನ್ನೂ ಕಲಿಸಿದೆ ಎಂದು ಹೇಳಿದರು.

    ಸಂವಾದ ಕೇಳಲು ಈ ಲಿಂಕ್​ ಕ್ಲಿಕ್ಕಿಸಿ..

    https://www.clubhouse.com/event/xk5EJV1K

    ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts