More

    ತಂದೆಯಿಲ್ಲದ ಮುಸ್ಲಿಂ ಯುವತಿ ಮದುವೆಗೆ ಸುದೀಪ್​ ನೆರವು: ಕರೊನಾ ಕಷ್ಟದಲ್ಲಿ ಬಡಕುಟುಂಬದ ಕೈಹಿಡಿದ ಕಿಚ್ಚ

    ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ಬಡ ಜನರ ನೆರವಿಗೆ ನಿಂತಿರುವ ಸಹೃದಯಿ ಕಿಚ್ಚ ಸುದೀಪ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಬಾರಿ ಮುಸ್ಲಿಂ ಯುವತಿಯ ಮದುವೆಗೆ ಸುದೀಪ್​ ಧನ ಸಹಾಯ ಮಾಡಿದ್ದಾರೆ.

    ಆಟೋಚಾಲಕ ರಿಯಾಜ್​ ಲಾಕ್​ಡೌನ್​ಗೂ ಮೊದಲೇ ತಂಗಿಯ ಮದುವೆ ನಿಗದಿಪಡಿಸಿದ್ದರು. ಆದರೆ, ದೇಶಕ್ಕೆ ಕಾಲಿಟ್ಟ ಮಹಾಮಾರಿ ಕರೊನಾ ವೈರಸ್​ನಿಂದಾಗಿ ದಿಢೀರನೇ ಲಾಕ್​ಡೌನ್​ ಹೇರಲಾಯಿತು. ಇಡೀ ದೇಶವೇ ಸ್ತಬ್ಧವಾಗಿದ್ದರಿಂದ ಮದುವೆ ಖರ್ಚಿಗೆ ಹಣ ಹೊಂದಿಸುವುದು ಆಟೋ ಚಾಲಕನಿಗೆ ಕಷ್ಟವಾಗಿತ್ತು.

    ಇದನ್ನೂ ಓದಿ: ಅಧಿಕೃತ ವಾಹನದಲ್ಲೇ ಸೆಕ್ಸ್ ಮಾಡಿದ ಉದ್ಯೋಗಿಗಳಿಬ್ಬರಿಗೆ ವಿಶ್ವಸಂಸ್ಥೆ ಶಾಕ್!

    ತುಂಬಾ ಕಷ್ಟದಲ್ಲಿದ್ದ ರಿಯಾಜ್​, ಬಳಿಕ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೊರೆ ಹೋಗಿದ್ದರು. ಇದೀಗ ಮದುವೆ ಖರ್ಚನ್ನು ಭರಿಸಲು ತಮ್ಮ ಟ್ರಸ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದಾರೆ. ಇದೀಗ ಸುದೀಪ್ ಸೂಚನೆಯ ಮೇರೆಗೆ ಟ್ರಸ್ಟ್​ ಇಂದು ರಿಯಾಜ್​ ಕುಟುಂಬಕ್ಕೆ ಹಣ ಹಸ್ತಾಂತರಿಸಿದೆ.

    ಸುದೀಪ್ ಸಹಾಯ ನೆನೆದು ಭಾವುಕರಾದ ಯುವತಿ ನಸ್ರಿನ್, ಧನ್ಯವಾದಗಳು ಸುದೀಪ್​ ಸರ್​, ನನ್ನ ಮದುವೆಗೆ ಫಂಕ್ಷನ್​ ಹಾಲ್​ ಕೊಡಿಸಿದ್ದಾರೆ. ಅಲ್ಲದೆ, ಮದುವೆಗೆ ಅಗತ್ಯವಾದ ವಸ್ತುಗಳನ್ನು ಕೊಳ್ಳಲು ಒಂದಿಷ್ಟು ಹಣದ ನೆರವನ್ನು ನೀಡಿದ್ದಾರೆ. ನನಗೆ ತಂದೆಯಿಲ್ಲ. ನಮ್ಮಣ್ಣನೇ ನಿಂತು ನನಗೆ ಮದುವೆ ಮಾಡಿಸುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಳು ಎಂದಿದ್ದಾರೆ.

    ಇದನ್ನೂ ಓದಿ: ಮಹಾಮಾರಿ ಕರೊನಾ ನಿರ್ನಾಮವಾಗುತ್ತಾ? ಕೋಡಿಮಠ ಶ್ರೀಗಳು ನುಡಿದ ಭವಿಷ್ಯವೇನು?

    ಇನ್ನು ಕಳೆದ ವಾರವಷ್ಟೇ ಮೈಸೂರಿನ ಹುಡುಗನೊಬ್ಬನ ಚಿಕಿತ್ಸೆಗೆ ಸುದೀಪ್​ ಸ್ಪಂದಿಸಿದ್ದರು. ಅಲ್ಲದೆ, ಕೆಲವು ದಿನಗಳ ಹಿಂದೆ ತಂದೆಯಿಲ್ಲದ ಬಾಲಕಿಯ ನೆರವಿಗೆ ಧಾವಿಸಿದ ಸುದೀಪ್​, ಆಕೆಯ ಇಡೀ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ ಮೊದಲು ಮಾನವನಾಗು ಎಂಬ ಸಂದೇಶವನ್ನು ಸುದೀಪ್​ ಕರೊನಾ ಸಂಕಷ್ಟ ಕಾಲದಲ್ಲಿ ಸಾರುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts