More

    ಬೆಂಗಳೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣವಾಗಲಿ: ನಟ-ನಿರ್ದೇಶಕ ರಿಷಬ್ ಶೆಟ್ಟಿ

    ಚೆನ್ನೈ: ರಾಜಧಾನಿ ಬೆಂಗಳೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಆಗಬೇಕು ಎಂಬುದು ಕನ್ನಡ ಚಿತ್ರರಂಗದವರ ಹಾಗೂ ಸಿನಿಮಾಸಕ್ತರ ಕನಸು. ಈ ವಿಚಾರ ಬಹಳ ವರ್ಷಗಳಿಂದ ಆಗಾಗ ಮುನ್ನೆಲೆಗೆ ಬಂದು ಹೋಗುತ್ತಿದ್ದರೂ ಇನ್ನೂ ಇದರ ಬಗ್ಗೆ ಅಂಥ ಯಾವುದೇ ಬೆಳವಣಿಗೆ ಆಗಿಲ್ಲ. ಇದೀಗ ನಟ ನಿರ್ದೇಶಕ ಈ ಬಗ್ಗೆ ಪ್ರಸ್ತಾಪಿಸುವ ಮೂಲಕ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಗಿದೆ.

    ಇದನ್ನೂ ಓದಿ: ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್

    ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಚೆನ್ನೈನಲ್ಲಿ ಹಮ್ಮಿಕೊಂಡಿದ್ದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ನ್ಯಾಷನಲ್ ಕಾನ್​ಕ್ಲೇವ್​ನಲ್ಲಿ ಯುವಪೀಳಿಗೆಯನ್ನು ಉದ್ದೇಶಿಸಿ ಮಾತನಾಡಲು ಪ್ಯಾನೆಲಿಸ್ಟ್ ಆಗಿ ಆಗಮಿಸಿದ್ದ ರಿಷಬ್ ಈ ವಿಷಯವನ್ನು ಪ್ರಸ್ತಾಪಿಸಿದರು.

    ಇದನ್ನೂ ಓದಿ: ಸೂಕ್ತ ರಸ್ತೆ ಇಲ್ಲ ಅಂತ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ; ಮಗುವನ್ನು ಬೈಕಲ್ಲಿ ಕರೆದೊಯ್ದ ತಾಯಿ; ಆದ್ರೂ ಮಗು ಸಾವು

    ‘ಯುವ ಶಕ್ತಿ: ಗಾಲ್ವನೈಸಿಂಗ್ ಇಂಡಿಯಾ’ ಎಂಬುದು ಈ ವರ್ಷದ ಸಮಾವೇಶದ ಥೀಮ್ ಆಗಿದ್ದು, ಇದರಲ್ಲಿ ಆರು ಮಂದಿ ಪ್ಯಾನೆಲಿಸ್ಟ್ ಆಗಿ ಪಾಲ್ಗೊಂಡಿದ್ದರು. ಆ ಪೈಕಿ ಸಿನಿಮಾ ಮತ್ತು ಮನರಂಜನಾ ಕ್ಷೇತ್ರದ ಏಕೈಕ ಪ್ರತಿನಿಧಿಯಾಗಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು.

    ಇದನ್ನೂ ಓದಿ: ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!

    ಚಿತ್ರೋದ್ಯಮ ಸರ್ಕಾರದಿಂದ ಹೇಗೆ ಬೆಂಬಲ ಪಡೆಯುತ್ತಿದೆ ಎಂಬುದರ ಬಗ್ಗೆ ರಿಷಬ್ ಇಲ್ಲಿ ಮಾತನಾಡಿದ್ದಲ್ಲದೆ, ಬೆಂಗಳೂರಿನಲ್ಲಿ ಫಿಲ್ಮ್ ಸಿಟಿಯನ್ನು ಹೊಂದುವ ಆಶಯವನ್ನು ಪ್ರಸ್ತಾಪಿಸಿದರು. ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲು ಮತ್ತು ನಾವು ಸರ್ಕಾರದಿಂದ ಬೆಂಬಲವನ್ನು ಪಡೆಯುತ್ತಿದ್ದೇವೆ. ಆದರೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಹೊಂದುವ ಅಗತ್ಯವೂ ಇದೆ ಎಂದು ರಿಷಬ್ ಅಭಿಪ್ರಾಯ ವ್ಯಕ್ತಪಡಿಸಿದರು. – ಏಜೆನ್ಸೀಸ್

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಲಾರಿಯೊಳಕ್ಕೇ ಸಿಲುಕಿತು ಅರ್ಧ ಕಾರು, 6 ಮಂದಿ ಸ್ಥಳದಲ್ಲೇ ಸಾವು: ಭೀಕರತೆಗೆ ಎದೆ ನಲುಗಿತು ಎಂದ ಸಿಎಂ, ಪರಿಹಾರ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts