More

    ನಾನು ಮಗು ತರಹ…; ಚೆನ್ನಾಗಿ ಇಟ್ಕೊಂಡ್ರೆ ಚೆನ್ನಾಗೇ ಇರ್ತೀನಿ..

    ಬೆಂಗಳೂರು: ಹಾಗಾದರೆ, ಇಷ್ಟು ದಿನ ನಿರ್ವಪಕರು ದರ್ಶನ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದರ್ಥವಾ? ಆಗಷ್ಟೇ ‘ರಾಬರ್ಟ್’ ಚಿತ್ರದ ಸಂತೋಷಕೂಟ ಮುಗಿದಿತ್ತು. ವೇದಿಕೆಯ ಮೇಲೆ ದರ್ಶನ್ ಚಿತ್ರದ ಯಶಸ್ಸಿನ ಬಗ್ಗೆ, ಪೈರಸಿ ಬಗ್ಗೆ, ವಿತರಕರು ಇಷ್ಟು ದಿನ ಹೇಗೆ ಯಾಮಾರಿಸುತ್ತಿದ್ದರು ಎಂಬ ಬಗ್ಗೆ ಮಾತನಾಡಿದ್ದರು. ಆ ನಂತರ ಮಾಧ್ಯಮದವರ ಜತೆಗೆ ಸಂವಾದ ಮುಂದುವರೆದಾಗ, ಇಂಥದ್ದೊಂದು ಪ್ರಶ್ನೆ ಅವರ ಮುಂದಿಡುವುದಕ್ಕೂ ಒಂದು ಪ್ರಮುಖ ಕಾರಣವಿತ್ತು. ದರ್ಶನ್ ಯಾವತ್ತೂ ತಮ್ಮ ಚಿತ್ರಗಳ ವಿತರಣೆ, ಪ್ರಮೋಷನ್ ಮತ್ತು ಬಿಡುಗಡೆಯಲ್ಲಿ ಈ ಮಟ್ಟದಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೆ, ‘ರಾಬರ್ಟ್’ ವಿಚಾರದಲ್ಲಿ ಮಾತ್ರ ಹಾಗಾಗಲಿಲ್ಲ. ಚಿತ್ರತಂಡದವರ ಬೆನ್ನಿಗೆ ನಿಂತು, ಅವರ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ಮಾಡಿದ್ದರು. ಈ ಹಿಂದೆ ಯಾಕೆ ಇದು ಸಾಧ್ಯವಾಗಿರಲಿಲ್ಲ? ನಿರ್ವಪಕರೇ ದರ್ಶನ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವಾ? ಅವರನ್ನು ದೂರ ಇಡಲಾಗುತ್ತಿತ್ತಾ ಎಂಬ ಪ್ರಶ್ನೆ ಬರುವುದು ಸಹಜ.

    ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಸರಿಯಾಗಿ ಬಳಸಿಕೊಂಡಿಲ್ಲ ಅಂದರೆ, ಚಿತ್ರದಲ್ಲಿ ಸಂಭಾವನೆಯಾಗಿ ಒಂದು ರೇಟ್ ಮಾತಾಡಿರುತ್ತೀವಿ. ಬಿಜಿನೆಸ್ ವಿಷಯದಲ್ಲಿ ತೊಡಗಿಸಿಕೊಂಡರೆ, ಎಲ್ಲಿ ದರ್ಶನ್ ಪಾಲು ಕೇಳುತ್ತಾನೋ, ಎಲ್ಲಿ ಮುಂದಿನ ಚಿತ್ರಗಳಿಗೆ ಹೈಪ್ ಮಾಡಿಕೊಳ್ಳುತ್ತಾನೋ ಎಂಬ ಭಯವಿರಬಹುದು. ನನ್ನನ್ನು ಕರೆದರೆ ಬರುವುದಿಲ್ಲ ಅಂತ ಯಾವತ್ತೂ ಹೇಳಿಲ್ಲ. ಯಾರು ಕರೆಯುವುದಿಲ್ಲವೋ, ಅಲ್ಲಿಗೆ ಹೋಗುವುದಿಲ್ಲ. ಇಲ್ಲಿ ಕರೆದರು, ಬಂದೆ ಅಷ್ಟೇ’ ಎನ್ನುತ್ತಾರೆ ದರ್ಶನ್. ಅಹಂ ಬಿಟ್ಟರೆ ಎಲ್ಲ ವಿಷಯಗಳಲ್ಲೂ ಸಲೀಸು ಎನ್ನುವ ದರ್ಶನ್, ‘ಬರೀ ಬಿಡುಗಡೆ ಅಥವಾ ಪ್ರಚಾರವಷ್ಟೇ ಅಲ್ಲ. ಕೆಲವು ನಿರ್ದೇಶಕರಿಗೆ, ಇವನ ಹತ್ತಿರ ಏನು ಚರ್ಚೆ ಅಂತಿರತ್ತೆ. ಹಾಗಾದಾಗ, ನಾನು ಸಹ ಯಾಕೆ ಬೇಕು ಎಂದು ಸುಮ್ಮನಿರುತ್ತೇನೆ. ಅಹಂ ಬಿಟ್ಟು ಬಂದರೆ ಎಲ್ಲವೂ ಚೆನ್ನಾಗಿರುತ್ತದೆ. ಇಗೋ ಇಟ್ಟುಕೊಂಡು ಬಂದರೆ ಇನ್ನೇನೋ ಆಗುತ್ತದೆ. ನನಗೂ ವಯಸ್ಸಾಯ್ತು. ನಾನು ಮಗು ತರಹ. ನೀವು ಚೆನ್ನಾಗಿಟ್ಟುಕೊಂಡರೆ ನಾನು ಚೆನ್ನಾಗಿರುತ್ತೇನೆ. ಉಲ್ಟಾ ಹೊಡೆದರೆ ನಾನೂ ಉಲ್ಟಾ ಹೊಡೆಯುತ್ತೇನೆ’ ಎನ್ನುತ್ತಾರೆ ದರ್ಶನ್.

    ಇಲ್ಲೇ ಮಾಡಿ ಕಳಿಸುತ್ತೇನೆ: ‘ರಾಬರ್ಟ್’ ಚಿತ್ರದ ತೆಲುಗು ಅವತರಣಿಕೆಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಮೊದಲ ವಾರ ಆರೇಳು ಕೋಟಿ ಕಲೆಕ್ಷನ್ ಆಗಿದೆ. ಇನ್ನುಮುಂದೆ ದರ್ಶನ್ ಅವರು ತೆಲುಗಿನಲ್ಲೂ ಚಿತ್ರ ಮಾಡುತ್ತಾರಾ ಎಂಬ ಪ್ರಶ್ನೆ ಸಹಜವೇ. ಈ ಕುರಿತು ಮಾತನಾಡುವ ಅವರು, ‘ಅಲ್ಲಿಗೆ ಹೋಗಿ ಯಾಕೆ ಮಾಡಲಿ? ಇಲ್ಲಿಂದಲೇ ಮಾಡಿ ಕಳಿಸುತ್ತೇನೆ’ ಎನ್ನುವ ಮೂಲಕ ಕನ್ನಡದಲ್ಲಿ ಚಿತ್ರ ಮಾಡಿ, ತೆಲುಗಿಗೆ ಡಬ್ ಮಾಡುವ ಟ್ರೆಂಡ್ ಮುಂದುವರೆಯುತ್ತದೆ ಎಂದು ಪರೋಕ್ಷವಾಗಿ ಹೇಳುತ್ತಾರೆ.

    ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

    ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts