More

    ‘ಪ್ರಣಯರಾಜ’ನಾಗಿ 21 ನಟಿಯರೊಂದಿಗೆ ಭುವನ್ ಪೊನ್ನಣ್ಣ ರೊಮ್ಯಾನ್ಸ್!

    ಬೆಂಗಳೂರು: ನಟ ಭುವನ್​ ಪೊನ್ನಣ್ಣ ರಾಂಧವ ಬಳಿಕ ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ. ಆ ಚಿತ್ರಕ್ಕೆ ಪ್ರಣಯರಾಜ ಎಂದು ಹೆಸರನ್ನೂ ಇಡಲಾಗಿದೆ. ಅಂದಹಾಗೆ ಶೀರ್ಷಿಕೆಗೆ ತಕ್ಕಂತೆ ಈ ಸಿನಿಮಾದಲ್ಲಿ ಭುವನ್​ಗೆ ಬರೋಬ್ಬರಿ 21 ಮಂದಿ ನಾಯಕಿಯರು!

    ಇದನ್ನೂ ಓದಿ: ಶಾಹಿದ್​ ಕಪೂರ್- ವಿಜಯ್​ ಸೇತುಪತಿ ಕಾಂಬಿನೇಷನ್​ ವೆಬ್​ಸಿರೀಸ್​ಗೆ ಶೀರ್ಷಿಕೆ ಅಂತಿಮ

    ಹೌದು, ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿರುವ ಭುವನ್, ಸ್ಯಾಂಡಲ್​ವುಡ್​ನ ಪ್ರಣಯರಾಜ ಎಂದೇ ಖ್ಯಾತಿ ಪಡೆದಿರುವ ಶ್ರೀನಾಥ್ ಅವರಿಂದ ಚಿತ್ರದ ಶೀರ್ಷಿಕೆ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ದಾರೆ. ಇತ್ತ ಡಿ. 30ರಂದು ಭುವನ್ ಜನ್ಮದಿನದ ಆಚರಿಸಿಕೊಳ್ಳಲಿದ್ದು, ಚಿತ್ರದ ಟೀಸರ್ ಸಹ ಬಿಡುಗಡೆ ಆಗಲಿದೆ. ಅಂದಹಾಗೆ ಈ ಚಿತ್ರವನ್ನು ಟಿ. ಸುದರ್ಶನ್ ಚಕ್ರ ನಿರ್ದೇಶಿಸಲಿದ್ದಾರೆ.

    ಇದನ್ನೂ ಓದಿ: ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ

    ಅಂದಹಾಗೆ, 21 ಮಂದಿ ನಾಯಕಿಯರ ಪೈಕಿ ಕರ್ನಾಟಕದವರು ಸೇರಿ ಪಶ್ಚಿಮ ಬಂಗಾಳ, ಮುಂಬೈಯಿಂದಲೂ ಹಲವು ನಟಿಯರು ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಲಿಕ್ರಾ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ವಿಕಾಸ್​ ರಾಜ್ ವಸಿಷ್ಟ ಸಂಗೀತ ನೀಡಿಲಿದ್ದಾರೆ. ರಾಜ ಶಿವಶಂಕರ್​ ಛಾಯಾಗ್ರಹಣ ನಿಭಾಯಿಸಲಿದ್ದಾರೆ. ಜನವರಿಯಲ್ಲಿ ಚಿತ್ರದ ಶೂಟಿಂಗ್​ ಶುರುವಾಗಲಿದೆ.

    ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts