More

    ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್​ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!

    ತಿರುವನಂತಪುರಂ: ಅರೆಬೆತ್ತಲೆ ದೇಹದ ಮೇಲೆ ತನ್ನ ಮಕ್ಕಳ ಕೈಯಿಂದಲೇ ಚಿತ್ರ ಬಿಡಿಸಿಕೊಂಡ ಹೋರಾಟಗಾರ್ತಿ ರೆಹನಾ ಫಾತಿಮಾ ವಿರುದ್ಧ ಕೇರಳದ ಪತ್ತನಂತಿಟ್ಟ ಜಿಲ್ಲೆ ತಿರುವಳ್ಳ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬಂಧಿಸುವ ಸಾಧ್ಯತೆ ಇದೆ.

    ರೆಹನಾ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾರಂತೆ. ಇದನ್ನೂ ಓದಿ: 4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

    ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್​ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!

    ಪುರುಷರ ದೇಹಕ್ಕೆ ಹೋಲಿಸಿದರೆ ಮಹಿಳೆಯರ ದೇಹ ಮತ್ತು ಆಕೆಯ ಬೆತ್ತಲೆ ಸ್ಥಿತಿಯು 55 ಕೆ.ಜಿಗಿಂತ ಹೆಚ್ಚು ಮಾಂಸವನ್ನು ಹೊಂದಿರುತ್ತದೆ. ಮಹಿಳೆಯ ಕಾಲುಗಳನ್ನು ನೋಡುವಾಗ ಲೆಗ್ಗಿಂಗ್‌ಗಳು ಪ್ರಚೋದಿಸಲ್ಪಡುತ್ತವೆ. ಮೊಣಕಾಲುಗಳೊಂದಿಗೆ ನಿಂತಿರುವ ವ್ಯಕ್ತಿಯೊಬ್ಬ ತನ್ನ ಎದೆ ಮತ್ತು ಕಾಲುಗಳ ಮೇಲೆ ಅರ್ಧ ಬೆತ್ತಲೆಯಾಗಿ ಬಾಗಿದಾಗ, ಪುರುಷರು ಮತ್ತು ಮಹಿಳೆಯರ ದೇಹವನ್ನು ಸಮೀಪಿಸಲು ಒತ್ತಾಯಿಸುತ್ತದೆ. ಇದು ಪ್ರಸ್ತುತ ಸಮಾಜಕ್ಕೆ ನೀಡಲಾಗುತ್ತಿರುವ ಸುಳ್ಳು ಲೈಂಗಿಕ ಪ್ರಜ್ಞೆಯಾಗಿದ್ದು, ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವಂತೆಯೇ, ನೋಡುವವರ ದೃಷ್ಟಿಯಲ್ಲಿಯೇ ಅಶ್ಲೀಲತೆಯೂ ಇದೆ ಎಂದು ರೆಹನಾ ಬರೆದುಕೊಂಡಿದ್ದಾರೆ.

    ಇನ್ನು ರೆಹನಾ ಅವರು ಪೋಸ್ಟ್​ ಮಾಡಿರುವ ವಿಡಿಯೋ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೊಂದು ಮಕ್ಕಳ ದೌರ್ಜನ್ಯ ಎಂದು ಕೆಲವರು ಜರಿದಿದ್ದಾರೆ. ಒಂದು ವೇಳೆ ತಂದೆ ಮಗಳ ಜತೆ ಇದೇ ರೀತಿಯಾಗಿ ಮಾಡಿದರೆ ರೆಹನಾರಿಗೆ ಸರಿ ಎನಿಸುತ್ತದೆಯೋ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!

    ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್​ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!

    ಇನ್ನು ಪ್ರಕರಣ ಬಗ್ಗೆ ಮಾತನಾಡಿರುವ ತಿರುವಳ್ಳ ಪೊಲೀಸ್​ ಅಧಿಕಾರಿ, ಬಿಜಪಿ ನಾಯಕ ಎ.ವಿ. ಅರುಣ್​ ಪ್ರಕಾಶ್​ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರೆಹನಾ ವಿರುದ್ಧ ಕೇರಳ ಪೊಲೀಸ್​ ಕಾಯ್ದೆ, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

    ಅಂದಹಾಗೆ ರೆಹನಾ ಅವರು ಬಿಎಸ್​ಎನ್​ಎಲ್​ ಮಾಜಿ ಉದ್ಯೋಗಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್​ಬುಕ್​ ಪೋಸ್ಟ್​ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್​ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು. (ಏಜೆನ್ಸೀಸ್​) ಇದನ್ನೂ ಓದಿ: ನಾ ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ, ಕ್ಷಮಿಸಿ ಎಂದು ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ: ಡೆತ್​ನೋಟ್​ ಪತ್ತೆ

    ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್​ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!

    ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts