More

    ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ

    ಎನ್.ಆರ್.ಪುರ: ದೇಶದ ಯುವ ಜನತೆ ರಾಷ್ಟ್ಟದ ಆಸ್ತಿಯಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ನಾಗೇಶಗೌಡ ತಿಳಿಸಿದರು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯುವ ಜನಾಂಗದಿಂದ ಎಲ್ಲಾ ಕ್ಷೇತ್ರಗಳಲ್ಲೂ ಬೆಳವಣಿಗೆ ಹೊಂದುತ್ತದೆ. ರಾಷ್ಟ್ರದ ಅಭಿವೃದ್ಧಿಗೆ ಪ್ರಕೃತಿಯ ಸಂಪನ್ಮೂಲದ ಜತೆಗೆ ಮಾನವ ಸಂಪನ್ಮೂಲವೂ ಅಗತ್ಯ ಎಂದರು.
    ಹೊನ್ನೇಕೊಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಚ್.ರಾಜಪ್ಪ ಮಾತನಾಡಿ, ಪ್ರತಿಲಪೇಕ್ಷೆ ಇಲ್ಲದೆ ಮಾಡುವ ಕೆಲಸವೇ ಸೇವೆ. ನಮ್ಮ ನಾಡಿಗೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು. ಶಿಬಿರದಲ್ಲಿ ಕಲಿತಿರುವ ಶಿಸ್ತನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ಯುವಜನರು ದಿನ ಪತ್ರಿಕೆ ದಿನ ಓದಬೇಕು. ಪತ್ರಿಕೆ ಓದುವುದರಿಂದ ಜ್ಞಾನ ಭಂಡಾರ, ಕನ್ನಡ ಭಾಷಾ ಜ್ಞಾನ ತಿಳಿಯಲಿದೆ. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
    ಎಸ್‌ಡಿಎಂಸಿ ಅಧ್ಯಕ್ಷೆ ಎಚ್.ಟಿ.ಸುಮತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ಶೇಷಣ್ಣಗೌಡ, ಗ್ರಾಪಂ ಸದಸ್ಯರಾದ ಎನ್.ಪಿ.ಅಶೋಕ್, ಕೆ.ಚಿನ್ನಪ್ಪ, ಕೆ.ಎನ್.ಮಂಜುನಾಥ್, ಎನ್‌ಎಸ್‌ಎಸ್ ಶಿಬಿರಾಧಿಕಾರಿಕಾರಿಗಳಾದ ಪ್ರೋ.ರುಖಿಯತ್, ಎಂ.ಎಚ್.ವಿಶ್ವನಾಥ್, ಕೌಶಿಕ್, ಹರ್ಷಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts