More

    ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ ಮಂಸೋರೆ; ಚಿತ್ರಮಂದಿರಕ್ಕೆ ಬರಲು ಸಜ್ಜಾಯ್ತು ‘ಆ್ಯಕ್ಟ್ 1978’ ಸಿನಿಮಾ

    ಬೆಂಗಳೂರು: ಕಳೆದ ಏಳು ತಿಂಗಳಿಂದ ಸಿನಿಮಾ ಮಂದಿರಗಳು ಸ್ಥಗಿತಗೊಂಡಿದ್ದವು. ಕಳೆದೊಂದು ತಿಂಗಳಿಂದ ಸೀಮಿತ ಸೀಟುಗಳ ಆಧಾರದ ಮೇಲೆ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಅದರಂತೆ ಅಂದಿನಿಂದ ಇಂದಿನವರೆಗೂ ಒಂದೇ ಒಂದು ಹೊಸ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡಿಲ್ಲ. ಕೇವಲ ಮರುಬಿಡುಗಡೆ ಚಿತ್ರಗಳೇ ಪ್ರೇಕ್ಷಕರನ್ನು ಸೆಳೆಯುವ ಸಾಹಸಕ್ಕಿಳಿದ್ದಿದ್ದವು. ಆದರೆ, ಪ್ರೇಕ್ಷಕ ಮಾತ್ರ ಹೊಸ ಸಿನಿಮಾಗಳ ನಿರೀಕ್ಷೆಯಲ್ಲಿದ್ದ. ಅದರಂತೆ ಇದೀಗ ಕನ್ನಡದಲ್ಲಿ ಮಂಸೋರೆ ನಿರ್ದೇಶನದ ಆ್ಯಕ್ಟ್ 1978 ಸಿನಿಮಾ ಆ ಸ್ಥಾನವನ್ನು ತುಂಬಲು ಆಗಮಿಸುತ್ತಿದೆ.

    ಇದನ್ನೂ ಓದಿ: ಮಜಾಭಾರತ ಮತ್ತೆ ಶುರು: ನವೆಂಬರ್ 7ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ

    ಹೌದು, ಮಂಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರ ಇತ್ತೀಚೆಗಷ್ಟೇ ಪುನೀತ್ ರಾಜ್​ಕುಮಾರ್​ ನೇತೃತ್ವದಲ್ಲಿ ಚಿತ್ರದ ಟ್ರೇಲರ್​ ಲಾಂಚ್ ಮಾಡಿಕೊಂಡಿತು. ಟ್ರೇಲರ್​ನಿಂದಲೇ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿರುವ ಚಿತ್ರ, ಆವತ್ತೇ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿಕೊಳ್ಳುವ ಭರದಲ್ಲಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಯಿತು. ಇದೀಗ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ನ. 20ರ ಶುಕ್ರವಾರ ರಾಜ್ಯಾದ್ಯಂತ ಹಲವು ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್​ಗಳಲ್ಲಿ ಚಿತ್ರ ತೆರೆಕಾಣಲಿದೆ.

    ಒಟ್ಟು 30 ದಿನಗಳ ಅವಧಿಯಲ್ಲಿ ಒಂದೇ ಶೆಡ್ಯೂಕ್​ನಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ ಆ್ಯಕ್ಟ್​ 1978 ಚಿತ್ರ, ಮಾರ್ಚ್​ನಲ್ಲಿಯೇ ಬಿಡುಗಡೆ ಆಗಬೇಕಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತಡವಾಗಿತ್ತು. ಇದೀಗ ಲಾಕ್ಡೌನ್​ ಬಳಿಕ ಚಿತ್ರದ ನಿರ್ಮಾಪಕರಾದ ದೇವರಾಜ್​ ಬಿಡುಗಡೆಯ ಸಾಹಸಕ್ಕಿಳಿದಿದ್ದಾರೆ.

    ಇದನ್ನೂ ಓದಿ: ಹೊಸ ಆಕ್ಷನ್​ ಥ್ರಿಲ್ಲರ್​ನಲ್ಲಿ ಕ್ಯಾಬ್​ ಡ್ರೈವರ್​ ಆಗಿ ಪ್ರಜ್ವಲ್​

    ಶ್ರುತಿ, ಸಂಚಾರಿ ವಿಜಯ್, ಪ್ರಮೋದ್​ ಶೆಟ್ಟಿ ಸೇರಿ 52ಕ್ಕೂ ಅಧಿಕ ಮುಖ್ಯ ಕಲಾವಿದರಿದ್ದಾರೆ. ಕಥೆ, ನಿರ್ದೇಶನವನ್ನು ಮಂಸೋರೆ ಮಾಡಿದರೆ, ಸತ್ಯ ಹೆಗಡೆ ಛಾಯಾಗ್ರಹಣ, ಚಿತ್ರಕಥೆ- ಸಂಭಾಷಣೆ ಟಿ.ಕೆ ದಯಾನಂದ್, ವೀರಣ್ಣ ಮಲ್ಲಣ್ಣ, ಸಂಕಲನ ನಾಗೇಂದ್ರ, ಸಾಹಿತ್ಯ ಜಯಂತ್ ಕಾಯ್ಕಿಣಿ, ಸಂಗೀತ ರೋನಾಡ ಬಕ್ಕೇಶ್​ ರಾಹುಲ್ ಶಿವಕುಮಾರ್ ಮಾಡಿದ್ದಾರೆ.

    ಪೊಗರು ಬಳಿಕ ‘ದುಬಾರಿ’ ಆಗೋಕೆ ಹೊರಟ್ರು ಧ್ರುವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts