More

    ಅರೆಶಿರೂರು ಹೆಲಿಪ್ಯಾಡ್​ ಬಳಿ ಆಕಸ್ಮಿಕ ಬೆಂಕಿ: ಸ್ವಲ್ಪದರಲ್ಲೇ ಸಿಎಂ ಬೊಮ್ಮಾಯಿ ಬಚಾವ್​​

    ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಟೆಂಪಲ್​ ರನ್​ ಶುರು ಮಾಡಿದ್ದಾರೆ. ಇಂದು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಅವರಿದ್ದ ಹೆಲಿಕಾಪ್ಟರ್​ ಲ್ಯಾಂಡ್​ ಆಗಬೇಕಿದ್ದ ಹೆಲಿಪ್ಯಾಡ್​ ಬಳಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ಉಂಟಾಯಿತು.

    ಉಡುಪಿಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್​ ಬಳಿ ಸಿಎಂ ಬೊಮ್ಮಾಯಿ ಅವರ ಬೆಂಗಾವಲು ಪಡೆ ವಾಹನ ತೆರಳಿದ ಬಳಿಕ ಹೆಲಿಪ್ಯಾಡ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಕಾರ್ಯಪ್ರವೃತ್ತರಾದ ಬೈಂದೂರು ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಅನಾಹುತವನ್ನು ತಪ್ಪಿಸಿದರು.

    ಈ ಅವಘಡದಿಂದ ಸಿಎಂ ಬೊಮ್ಮಾಯಿ ಅವರು ಬಚಾವ್​ ಆಗಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಸಿಎಂ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಬಯಕೆ ಹೊಂದಿರುವ ಬಸವರಾಜ ಬೊಮ್ಮಾಯಿ ದೇವರ ಮೊರೆ ಹೋಗಿದ್ದಾರೆ.

    ಇದನ್ನು ಓದಿ: ಅಮೂಲ್ ಚಿಲ್ಲರೆ ವಹಿವಾಟು ಸ್ಥಗಿತಗೊಳಿಸಿ: ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಆಗ್ರಹ

    ಈಗಾಗಲೇ ಬಿಜೆಪಿ ಮೊದಲ ಹಂತದಲ್ಲಿ 189 ಮತ್ತು ಎರಡನೇ ಹಂತದಲ್ಲಿ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು 12 ಅಭ್ಯರ್ಥಿಗಳ ಪಟ್ಟಿ ಬಾಕಿದೆ. ಈಗಾಗಲೇ ಟಿಕೆಟ್​ ಸಿಗದವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಇದೆಲ್ಲದರ ನಡುವೆ ಸಿಎಂ ಬೊಮ್ಮಾಯಿ ಟೆಂಪಲ್​ ರನ್​ ಆರಂಭಿಸಿದ್ದಾರೆ.

    ದೇವಸ್ಥಾನಕ್ಕೆ ಸಿಎಂ ಭೇಟಿಯ ವೇಳೆ ನಟ ರಿಷಬ್ ಶೆಟ್ಟಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿತು. ಆದರೆ, ಇದು ಆಕಸ್ಮಿಕ ಭೇಟಿ ಆಗಿದೆ. ಸಿಎಂ ಬೊಮ್ಮಾಯಿ ಅವರನ್ನು ನೋಡುತ್ತಿದ್ದಂತೆ ಅವರ ಬಳಿ ಹೋಗಿ ನಟ ರಿಷಬ್, ಕಾಲು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ರಿಷಬ್ ಅವರ ಬೆನ್ನನ್ನು ತಟ್ಟಿ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

    ಮೊಸಳೆಯ ದವಡೆಯಿಂದ ಗಂಡನ ರಕ್ಷಣೆ: ಪತಿಯ ಪ್ರಾಣಕ್ಕಿಂತ ಯಾವುದೂ ಮುಖ್ಯವಲ್ಲ ಎಂದ ಪತ್ನಿ

    ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಶುರುವಾದ ಕಿರಿಕ್; ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದವರ ಮೇಲೆ ದಾಳಿ!

    ಭಿನ್ನಮತ ಶೀಘ್ರವೇ ಶಮನ ಆಗಲಿದೆ: ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts