More

    ಹೆದ್ದಾರಿಯಿಂದ ಹೋಟೆಲ್​ಗೇ ನುಗ್ಗಿದ ವಾಹನ; ಗ್ಯಾಸ್​ ಒಲೆಗೇ ಡಿಕ್ಕಿ..

    ಕೊಪ್ಪಳ: ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿದ್ದು, ಟೆಂಪೊ ಪ್ಯಾಸೆಂಜರ್ ವಾಹನವೊಂದು ಹೆದ್ದಾರಿಯಿಂದ ಹೋಟೆಲ್​ಗೆ ನುಗ್ಗಿ ಗ್ಯಾಸ್ ಒಲೆಗೇ ಡಿಕ್ಕಿ ಹೊಡೆದ ಪ್ರಕರಣ ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಹೆದ್ದಾರಿಯ ಆ ಕಡೆಯಿಂದ ಟೆಂಪೊ ಪ್ಯಾಸೆಂಜರ್ ವಾಹನ ಏಕಾಏಕಿ ಹೋಟೆಲ್​ನತ್ತ ನುಗ್ಗಿ ಬಂದಿದೆ. ಇದನ್ನು ತಕ್ಷಣ ಗಮನಿಸಿದ್ದ ಅಲ್ಲಿದ್ದವರು ಕೂಡಲೇ ಎದ್ದು ಪಕ್ಕಕ್ಕೆ ಓಡಿದ್ದರು. ಅದಾಗ್ಯೂ ವೇಗವಾಗಿಯೇ ಬಂದ ವಾಹನ ಹೋಟೆಲ್​ಗೇ ನುಗ್ಗಿದ್ದು ಗ್ಯಾಸ್​ ಒಲೆಗೆ ಡಿಕ್ಕಿ ಹೊಡೆದಿದೆ.

    ಹೋಟೆಲ್​ಗೆ ನುಗ್ಗುವ ಮೊದಲು ಈ ವಾಹನ ಬೈಕ್​ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕ್ಷಣಮಾತ್ರದಲ್ಲಿ ಹೋಟೆಲ್​ಗೆ ನುಗ್ಗಿತ್ತು. ಅಲ್ಲಿದ್ದ ಜನರು ತಕ್ಷಣ ಎದ್ದು ಪಕ್ಕಕ್ಕೆ ಓಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೆದರಿದ ಗ್ರಾಹಕರು-ಸಿಬ್ಬಂದಿ ಎದ್ದುಬಿದ್ದು ಓಡಿಹೋಗಿದ್ದಾರೆ. ಈ ಅಪಘಾತದಲ್ಲಿ ಟೆಂಪೊ ಪ್ಯಾಸೆಂಜರ್ ವಾಹನ ಸಂಪೂರ್ಣ ಜಖಂಗೊಂಡಿದೆ. 2-3 ಬೈಕ್ ಮತ್ತು ಹೋಟೆಲ್​ ಪೀಠೋಪಕರಣಗಳು ಹಾನಿಗೀಡಾಗಿವೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts