More

    ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯ

    ಯಲಬುರ್ಗಾ: ಆಕಸ್ಮಿಕ ಸಂಭವಿಸುವ ಅವಘಡಗಳ ಬಗ್ಗೆ ವಿದ್ಯಾರ್ಥಿಗಳು ಮುಂಜಾಗ್ರತೆ ವಹಿಸುವುದು ಅವಶ್ಯ ಎಂದು ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ವೈ.ಕೆ.ಜಗದೀಶ ಹೇಳಿದರು.

    ಇದನ್ನೂ ಓದಿ: ಮದುವೆ ವಂಚನೆ ತಡೆಯಲು ಸ್ಥಳದಲ್ಲೇ ವಿವಾಹ ನೋಂದಣಿ; ಉತ್ತರಪ್ರದೇಶ ಸರ್ಕಾರದ ಕ್ರಮ

    ಪಟ್ಟಣದ ಮಂಜುನಾಥ ಶಿಕ್ಷಣ ಸಂಸ್ಥೆಯಲ್ಲಿ ಅಗ್ನಿಶಾಮಕ ಠಾಣೆ ಹಮ್ಮಿಕೊಂಡಿದ್ದ ಅಗ್ನಿ ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸೊಮವಾರ ಮಾತನಾಡಿದರು.

    ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಅವಘಡಗಳು, ಆಕಸ್ಮಿಕ ನೀರು, ಬೆಂಕಿ ದುರಂತಗಳಿಂದ ಯಾವ ರೀತಿ ನಮ್ಮನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಾಗ ಅವಘಡ ತಪ್ಪಿಸಲು ಸಾಧ್ಯವಾಗುತ್ತದೆ. ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ಯಾವ ರೀತಿ ಕ್ರಮ ಅನುಸರಿಸಬೇಕು ಎನ್ನುವುದನ್ನು ತಿಳಿಯಬೇಕು ಎಂದರು.

    ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕುರಿತ ಪ್ರಾತ್ಯಕ್ಷಿಕೆ ನಡೆಸಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಾಚಾರ್ಯ ಗಂಗಾಧರ ದಫೇದ, ಮುಖ್ಯಶಿಕ್ಷಕ ಎಸ್.ಕೆ.ಪಾಟೀಲ, ಶಿಕ್ಷಕ ಮಂಜುನಾಥ ಅಕ್ಕಸಾಲಿಗರ, ಅಗ್ನಿಶಾಮಕ ಸಿಬ್ಬಂದಿ ಮಂಜುನಾಥ ಬಂಡಿ, ಮಧು ನಾಯ್ಕ, ಆನಂದ.ಬಿ, ದತ್ತು, ಪ್ರಕಾಶ ರಾಠೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts