More

    ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ಮೋದಿ ತಿಳಿಸಿದ ಆ ಮಹಿಳೆ ಯಾರು ಗೊತ್ತಾ?

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಿಂದ ದೇಶದಾದ್ಯಂತ ಪ್ರಸಿದ್ಧರಾಗಿದ್ದಾರೆ. ಆದರೆ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಮಹಿಳೆಯೊಬ್ಬರ ಭಾಷಣವನ್ನು ತುಂಬಾ ಇಷ್ಟಪಟ್ಟು, ಚುನಾವಣೆಯಲ್ಲಿ ಸ್ಪರ್ಧಿಸಲು ಆಫರ್ ನೀಡಿದರು. ಆ ಮಹಿಳೆಯ ಹೆಸರು ಚಂದಾದೇವಿ. ವಾರಣಾಸಿಯ ರಾಮ್‌ಪುರ ಗ್ರಾಮದ ನಿವಾಸಿ ಚಂದಾ ದೇವಿ ಅವರು ಚುನಾವಣೆಗೆ ಸ್ಪರ್ಧಿಸುವ ಪ್ರಧಾನಿ ಮೋದಿ ಅವರ ಪ್ರಸ್ತಾಪವನ್ನು ತಕ್ಷಣವೇ ನಿರಾಕರಿಸಿದ್ದರೂ, ಈಗ ಅವರ ಹೆಸರು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಚಂದಾದೇವಿ ಯಾರು?

    ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ಮೋದಿ ತಿಳಿಸಿದ ಆ ಮಹಿಳೆ ಯಾರು ಗೊತ್ತಾ?

    ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?
    ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಸ್ಪರ್ಧಿಸಲು ಚಂದಾದೇವಿಗೆ ಆಫರ್ ನೀಡಿದ್ದಾರೆ. ಸೇವಾಪುರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆ ಲಖ್ಪತಿ ದೀದಿ ಕಾರ್ಯಕ್ರಮದಲ್ಲಿ ಚಂದಾದೇವಿ ಭಾಷಣ ಮಾಡಿದರು. ಲಖ್ಪತಿ ದೀದಿ ಕಾರ್ಯಕ್ರಮದ ಅಡಿಯಲ್ಲಿ ಎರಡು ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆಕೆಯ ಭಾಷಣದಿಂದ ಪ್ರಭಾವಿತರಾದ ಪ್ರಧಾನಿ ಮೋದಿ ಅವರು, ತುಂಬಾ ಒಳ್ಳೆಯ ಭಾಷಣ ಮಾಡುತ್ತೀರಿ, ನೀವು ಎಂದಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಾ?’ ಎಂದಿದ್ದಾರೆ. ಇದಕ್ಕೆ ಚಂದಾದೇವಿ ಇಲ್ಲ ಎಂದು ಉತ್ತರಿಸಿದ್ದಾರೆ. ‘ಚುನಾವಣೆಯಲ್ಲಿ ಸ್ಪರ್ಧಿಸುವಿರೇ?’ ಎಂದು ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಚಂದಾದೇವಿ, ‘ಚುನಾವಣೆಗೆ ಸ್ಪರ್ಧಿಸುವ ಯೋಚನೆ ಮಾಡಿಲ್ಲ. ನಿಮ್ಮಿಂದ ಮಾತ್ರ ಸ್ಫೂರ್ತಿ ಪಡೆದಿದ್ದೇವೆ. ನಿಮ್ಮ ಮುಂದೆ ನಿಂತು ವೇದಿಕೆಯ ಮೇಲೆ ಎರಡು ಮಾತು ಹೇಳುವುದು ನನಗೆ ಹೆಮ್ಮೆಯ ವಿಷಯ’ ಎಂದಿದ್ದಾರೆ.

    ಇದನ್ನೂ ಓದಿ: VIDEO | ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೊಬ್ಬರಿಗೆ ಮೋದಿಯವರು ಆಫರ್ ನೀಡಿದಾಗ ಆಕೆ ಪ್ರತಿಕ್ರಿಯಿಸಿದ್ದು ಹೀಗೆ…

    ಪ್ರಧಾನಿ ಮೋದಿ ಮತ್ತು ಚಂದಾದೇವಿ ನಡುವಿನ ಸಂಭಾಷಣೆಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಂದಾದೇವಿಗೆ ಕೇವಲ 35 ವರ್ಷ. ಚಂದಾದೇವಿ 2004ರಲ್ಲಿ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ 2005 ರಲ್ಲಿ ಲೋಕಪತಿ ಪಟೇಲ್ ಅವರನ್ನು ವಿವಾಹವಾದರು. ಮದುವೆಯ ನಂತರ ಓದು ಬಿಟ್ಟರು. ಇದೀಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತನಗೆ ಹೆಚ್ಚು ಓದಲು ಬರುವುದಿಲ್ಲ, ಆದರೆ ತನ್ನ ಮಕ್ಕಳು ಒಳ್ಳೆಯ ಕಾಲೇಜಿನಲ್ಲಿ ಚೆನ್ನಾಗಿ ಓದಬೇಕು ಎಂಬುದು ಚಂದಾದೇವಿಯ ಬಯಕೆ.

    ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದೇಕೆ? 
    ಈ ಕುರಿತು ಮಾತನಾಡಿರುವ ಅವರು, ತನಗೆ ಹಲವು ಕೌಟುಂಬಿಕ ಜವಾಬ್ದಾರಿಗಳಿದ್ದು, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಅತ್ತೆಗೆ 70 ವರ್ಷ, ಅವರು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಕೃಷಿಯಲ್ಲಿಯೂ ಸಹಾಯ ಮಾಡಬೇಕು. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಕುಟುಂಬದಿಂದ ದೂರವಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಬನ್ಸ್, ಖೀರು, ಮುದ್ದೆ…. ಇಂದಿರಾ ಕ್ಯಾಂಟೀನ್​​​​​ ಹೊಸ ಮೆನುನಲ್ಲಿ ಏನೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts