More

    ಇನ್ನೆರಡು ದಿನಗಳಲ್ಲಿ ಶುರುವಾಗಲಿದೆ ಶೇ.45 ಆರ್ಥಿಕ ಚಟುವಟಿಕೆ, ಕಂಟೈನ್​ಮೆಂಟ್​ ಝೋನ್​ಗಳಲ್ಲಷ್ಟೇ ನಿರ್ಬಂಧ

    ನವದೆಹಲಿ: ಮೇ 3ರವರೆಗೆ ಲಾಕ್​ಡೌನ್​ ವಿಧಿಸಿದ್ದರೂ, ಏಪ್ರಿಲ್​ 20ರಿಂದ ಹಲವು ನಿರ್ಬಂಧಗಳು ತೆರವಾಗಲಿವೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸೂಚಿಸಿದೆ. ಅದಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

    ಕೃಷಿ ವಲಯ ಹಾಗೂ ಗ್ರಾಮೀಣ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ. ಸರಕು ಸಾಗಣೆ, ಅತ್ಯಾವಶ್ಯಕವಲ್ಲದ ವಸ್ತುಗಳ ಮಾರಾಟಕ್ಕೂ ಇದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಇದಲ್ಲದೇ, ಐಟಿ-ಬಿಟಿ ಕಂಪನಿಗಳು ಶೇ.50 ಉದ್ಯೋಗಿಗಳೊಂದಿಗೆ ಕೆಲಸ ಆರಂಭಿಸಬಹುದು ಎಂದು ಸೂಚಿಸಲಾಗಿದೆ. ಈ ಮೂಲಕ ಏಪ್ರಿಲ್​ 20ರ ನಂತರ ಶೇ.45 ಆರ್ಥಿಕ ಚಟುವಟಿಕೆಗಳು ಶುರುವಾಗಲಿವೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಅಗತ್ಯ ವಸ್ತುಗಳ ವಹಿವಾಟಿಗಷ್ಟೇ ಅನುಮತಿ ನೀಡಿದ್ದರಿಂದ ಮೊದಲು ನಡೆಯುತ್ತಿದ್ದ ಆರ್ಥಿಕ ಚಟುವಟಿಕೆಗಳ ಪ್ರಮಾಣ ಶೇ.25 ಆಗಿತ್ತು.

    ಏನೆಲ್ಲ ಶುರುವಾಗಲಿದೆ? ಸರಕು ಸಾಗಣೆಗೆ ಅವಕಾಶ ಸಿಗಲಿದೆ. ಇದರಿಂದ ಹೆದ್ದಾರಿಗಳಲ್ಲಿ ನಿಂತಿರುವ ಲಕ್ಷಾಂತರ ವಾಹನಗಳು ಸಂಚಾರ ಆರಂಭಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿರುವ ಕಾರ್ಖಾನೆಗಳು ಆರಂಭವಾಗಲಿವೆ. ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ನಡೆಸಬಹುದು. ಅಲ್ಲದೇ, ಇವನ್ನು ಶುರು ಮಾಡಲು ಹೆಚ್ಚಿನ ಸಿದ್ಧತಾ ಸಮಯ ಬೇಕಿಲ್ಲ. ಇದು ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವವರಿಗೆ ಅನುಕೂಲ ಕಲ್ಪಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

    ಆನ್​ಲೈನ್​ನಲ್ಲಿ ಮೊಬೈಲ್​, ಟಿವಿ, ರೆಫ್ರಿಜರೇಟರ್​ ಸೇರಿ ಎಲ್ಲ ವಸ್ತುಗಳ ಖರೀದಿಸಬಹುದು. ಹೆದ್ದಾರಿ ಬದಿಗಳಲ್ಲಿರುವ ಡಾಬಾಗಳನ್ನು ತೆರೆಯಬಹುದು. ವಾಹನ ದುರಸ್ತಿ ಕೇಂದ್ರಗಳು ಕೆಲಸ ಮಾಡಲಿವೆ.

    ಸಾರ್ವಜನಿಕ ಸಾರಿಗೆ ಸ್ಥಗಿತಗೊಳಿಸಲಾಗಿದ್ದರೂ, ಖಾಸಗಿ ವಾಹನಗಳ ಬಳಕೆಗೆ ಅವಕಾಶವಿರಲಿದೆ. ಭಾಗಶಃ ನಿರ್ಬಂಧ ಸಡಿಲಿಸಿದ್ದರೂ, ಇದು ಆರ್ಥಿಕತೆಯ ಬಹುದೊಡ್ಡ ವಲಯಕ್ಕೆ ಚಾಲನೆ ನೀಡಲಿದೆ.

    ಪ್ರಸ್ತುತ ದೇಶದ 170 ಜಿಲ್ಲೆಗಳು ಹಾಟ್​ಸ್ಪಾಟ್​ ಅಥವಾ ಕಂಟೇನ್​ಮೆಂಟ್​ ವಲಯಗಳನ್ನು ಹೊಂದಿವೆ. ದೇಶದ ಒಟ್ಟು ಜಿಡಿಪಿಯ ಶೇ.37 ಆರ್ಥಿಕ ಚಟುವಟಿಕೆಗಳು ಈ ಪ್ರದೇಶದಲ್ಲಿ ನಡೆಯುತ್ತವೆ. ಹೀಗಾಗಿ ಉಳಿದ ಶೇ.63 ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಏಪ್ರಿಲ್​ 20ರ ಬಳಿಕ ಹಂತಹಂತವಾಗಿ ಇವು ತೆರೆದುಕೊಳ್ಳಲಿವೆ. ದೇಶದ ಸಂಪೂರ್ಣ ಆರ್ಥಿಕ ಚಟುವಟಿಕೆಗಳು ಹಳಿಗೆ ಬರಲು ಇನ್ನೂ ಹೆಚ್ಚು ಸಮಯ ಬೇಕಾಗಬಹುದು. ಅದರಲ್ಲೂ ಸೋಂಕು ವ್ಯಾಪಿಸುವ ಪ್ರಮಾಣ ಎಷ್ಟರಮಟ್ಟಿಗೆ ಹತೋಟಿಗೆ ಬಂದಿದೆ ಎಂಬುದು ಕೂಡ ಮುಖ್ಯವಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.

    ಚೀನಾ ಪ್ರಯೋಗಾಲಯದ ಎಡವಟ್ಟು ಇಡೀ ವಿಶ್ವಕ್ಕೆ ದುಬಾರಿಯಾಗಿದ್ದು ಹೇಗೆ? ತನಿಖೆ ಶುರು ಮಾಡಿದೆ ಅಮೆರಿಕ

    ದೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts