More

    ಏ.1ರಿಂದ ತಿರುಪತಿ-ಚೆನ್ನೈಗೆ ಪುನರಾರಂಭ

    ಶಿವಮೊಗ್ಗ: ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗಿದ್ದ ರೈಲನ್ನು ಕರೊನಾ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಏ.1ರಿಂದ ತಿರುಪತಿ-ಚೆನ್ನೈಗೆ ರೈಲು ಸೇವೆ ಪುನರಾರಂಭಗೊಳಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸೋಮವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಬಂಧ ದೆಹಲಿಯಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಿದ್ದು ಎಡಿಎಂಆರ್ ಕ್ರಮ ಜರುಗಿಸಬೇಕು ಎಂದು ರಾಘವೇಂದ್ರ ಸೂಚಿಸಿದರು. ತಿರುಪತಿಗೆ ವಿಮಾನ ಸೇವೆ ಆರಂಭಗೊಂಡಿರುವುದರಿಂದ ರೈಲು ಸೇವೆ ಸ್ಥಗಿತಗೊಳಿಸುವುದು ಬೇಡ ಎಂದು ಹೇಳಿದರು.
    ಮೊದಲ ಹಂತದಲ್ಲಿ 24.8 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಟೌನ್, 26.44 ಕೋಟಿ ರೂ. ವೆಚ್ಚದಲ್ಲಿ ಸಾಗರ ಮತ್ತು 27.86 ಕೋಟಿ ರೂ. ವೆಚ್ಚದಲ್ಲಿ ತಾಳಗುಪ್ಪ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. 2ನೇ ಹಂತದಲ್ಲಿ ಭದ್ರಾವತಿ ನಿಲ್ದಾಣವನ್ನು ಆಯ್ಕೆ ಮಾಡಿ ಮೇಲ್ದರ್ಜೆಗೇರಿಸಲಾಗುವುದು. ನಂತರ ಗ್ರಾಮೀಣ ಭಾಗದ ಅರಸಾಳು ಮತ್ತು ಆನಂದಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದರು.
    ಸ್ವಾತಂತ್ರ್ಯ ನಂತರ 5 ನಗರಗಳಲ್ಲಿ 248 ಕಿ.ಮೀ. ಮಾತ್ರ ಮೆಟ್ರೋ ಸೇವೆ ಇತ್ತು. ಆದರೆ ಕಳೆದ 9 ವರ್ಷದಲ್ಲಿ 878 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಗೊಂಡಿದೆ. ಕರ್ನಾಟಕದಲ್ಲಿ ರೈಲ್ವೆ ಯೋಜನೆಗೆ 47,336 ಕೋಟಿ ರೂ. ವೆಚ್ಚದಲ್ಲಿ ನಾನಾ ಕಾಮಗಾರಿಗಳು ಅನುಷ್ಠಾನಗೊಂಡಿವೆ. ಕಳೆದ ಬಜೆಟ್‌ನಲ್ಲಿ ಮತ್ತೆ 7,524 ಕೋಟಿ ರೂ. ನೀಡಲಾಗಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ದೇಶದ ಎಲ್ಲ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts