More

    ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭ ಯಾವಾಗ? ಸರ್ಕಾರ ಹೇಳಿದ್ದೇನು?

    ನವದೆಹಲಿ: ಕರೊನಾದ ಒಮಿಕ್ರಾನ್​ ರೂಪಾಂತರಿಯ ಭೀತಿ ಹುಟ್ಟಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಗಳ ನಿಯಮಿತ ಸಂಚಾರವನ್ನು ಪುನರಾರಂಭಿಸುವ ನಿರ್ದಿಷ್ಟ ದಿನಾಂಕವನ್ನು, ಮುಂದಿನ ದಿನಗಳಲ್ಲಿ, ಪರಿಸ್ಥಿತಿಗಳಿಗನುಸಾರವಾಗಿ ನಿರ್ಧರಿಸಿ ತಿಳಿಸಲಾಗುವುದು ಎಂದು ಭಾರತದ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್​ನ ಪ್ರಕಟಣೆ ತಿಳಿಸಿದೆ.

    ಅನ್ಯದೇಶಗಳಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಅನ್ಯದೇಶಗಳಿಗೆ ಹೋಗುವ ಷೆಡ್ಯೂಲ್ಡ್​ ಕಮರ್ಷಿಯಲ್​ ಇಂಟರ್​​ನ್ಯಾಷನಲ್​ ಪ್ಯಾಸೆಂಜರ್​ ವಿಮಾನಗಳ ಸೇವೆಗಳನ್ನು 2020ರ ಮಾರ್ಚ್​ 23ರಿಂದ ಅಮಾನತ್ತಿನಲ್ಲಿರಿಸಲಾಗಿದೆ. ಜುಲೈ 2020ರಿಂದ 31 ದೇಶಗಳೊಂದಿಗೆ ರೂಪಿಸಲಾಗಿರುವ ಏರ್​ ಬಬಲ್​ ವ್ಯವಸ್ಥೆಯಡಿ ವಿಶೇಷ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮಾತ್ರ ಸಂಚರಿಸುತ್ತಿವೆ.

    ಇದನ್ನೂ ಓದಿ: ಏರುತ್ತಿದೆ ಪರಿಷತ್ ಚುನಾವಣೆ ಕಾವು: ಅನ್ಯಪಕ್ಷಗಳ ಮತ ಸೆಳೆಯಲು ಕೈ ಕಸರತ್

    ಈ ಮುನ್ನ ಕೇಂದ್ರ ಸರ್ಕಾರವು ಡಿಸೆಂಬರ್ 15 ರಿಂದ ಎಲ್ಲಾ ನಿಗದಿತ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಆದೇಶ ಹೊರಡಿಸಿತ್ತು. ಆದರೆ, ಸುಮಾರು 20 ದೇಶಗಳಲ್ಲಿ ಒಮಿಕ್ರಾನ್​ ಸೋಂಕು ಕಂಡುಬಂದಿರುವುದು ಅಂತಾರಾಷ್ಟ್ರೀಯ ಪ್ರಯಾಣಿಕರಿಂದಾಗಿ ಕರೊನಾ ಉಲ್ಬಣಿಸುವ ಆತಂಕ ಉಂಟುಮಾಡಿದೆ. ಹೀಗಾಗಿ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದು, ಸಂಬಂಧಿತ ವಲಯಗಳೊಂದಿಗೆ ಚರ್ಚೆ ನಡೆಸಿ ಮತ್ತೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

    ‘ಪವರ್​ಫುಲ್​ ವುಮೆನ್​​ 2021’ ಪಟ್ಟಿಯಲ್ಲಿ ನೀತಾ ಅಂಬಾನಿ ಹೆಸರು; ಕರೊನಾ ಸಂಕಷ್ಟಕ್ಕೆ ಮಿಡಿದ ಹೃದಯಕ್ಕೆ ಸಂದ ಗೌರವ

    ಕತ್ರೀನಾ-ವಿಕಿ ಮದುವೆ ಯಾವತ್ತು? ಎಲ್ಲಿ? ವೆಡ್ಡಿಂಗ್​​​ ಸೂಟ್​ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts