More

    ಅನೀಶ್​ಗೆ ಅಭಿಷೇಕ್​ ಶೆಟ್ಟಿ ಆಕ್ಷನ್-ಕಟ್; ಸದ್ಯದಲ್ಲೇ ಹೊಸ ಚಿತ್ರ ಶುರು

    ಬೆಂಗಳೂರು: ಅನೀಶ್​ ತೇಜೇಶ್ವರ್​ ಅಭಿನಯದ ‘ಬೆಂಕಿ’ ಎಂಬ ಚಿತ್ರ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಬಾಕ್ಸ್​-ಆಫೀಸ್​ನಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡದ ಈ ಚಿತ್ರದ ನಂತರ ಅನೀಶ್​ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅವರು ಹೊಸದೊಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದು, ಈ ಚಿತ್ರವನ್ನು ಅಭಿಷೇಕ್​ ಶೆಟ್ಟ ನಿರ್ದೇಶನ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಅಭಿನಯಕ್ಕೆ ಆಮೀರ್​ ಗುಡ್​ಬೈ? ‘ಚಾಂಪಿಯನ್​’ ಚಿತ್ರದಲ್ಲಿ ನಟಿಸಲು ಹಿಂದೇಟು …

    ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳನ್ನು ನಿರ್ದೇಶಿಸುವುದರ ಜತೆಗೆ, ಆ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು ಅಭಿಷೇಕ್​. ಈ ಚಿತ್ರಗಳಲ್ಲಿನ ಅವರ ಕೆಲಸ ನೋಡಿ ಖುಷಿಯಾಗಿರುವ ಅನೀಶ್​, ಅಭಿಷೇಕ್​ ಜತೆಗೆ ಚಿತ್ರ ಮಾಡುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

    ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಲಿದ್ದು, ಇದರಲ್ಲಿ ಅನೀಶ್ ಹೊಸ ಅವತಾರದಲ್ಲಿ ಕಾಣಸಿಗಲಿದ್ದಾರಂತೆ. ಇದುವರೆಗೂ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ವಿಭಿನ್ನವಾಗಿರಲಿದ್ದು, ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

    ಇದನ್ನೂ ಓದಿ: ‘ವಿಜಯಾನಂದ’ ಸಿನಿಮಾ ಹಾಡಿಗೆ ಅಭಿಮಾನಿಗಳು ಫಿದಾ… 2 ಕೋಟಿ ದಾಟಿದ ವ್ಯೂವ್ಸ್​

    ಇನ್ನೂ ಹೆಸರಿಡದ ಈ ಚಿತ್ರವನ್ನು ‘ಅಕಿರಾ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

    ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts