More

    ಮಮತಾ ದೀದಿಯ ಉತ್ತರಾಧಿಕಾರಿಯಾಗಿ ಸೋದರಳಿಯನಿಗೇ ಪಟ್ಟಾಭಿಷೇಕ!

    ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದಕ್ಕೆ ಸೋಮವಾರ ಅಧಿಕೃತವಾಗಿಯೇ ಉತ್ತರ ದೊರೆತಿದೆ.

    ಮಮತಾ ದೀದಿಯ ಸೋದರಳಿಯನೇ ಉತ್ತರಾಧಿಕಾರಿ ಆಗಲಿದ್ದಾನೆ.

    ಮಮತಾ ಅವರ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಅವರೇ ಮಮತಾ ನಂತರದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಅವರೇ ಸೋಮವಾರ ಘೋಷಿಸಿದ್ದಾರೆ.

    ಹೂಗ್ಲಿ ಜಿಲ್ಲೆಯ ಚುಚುರಾದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಘೋಷ್, ಮಮತಾ ಬ್ಯಾನರ್ಜಿ ಅವರು 2036 ರವರೆಗೆ ಸೇವೆ ಸಲ್ಲಿಸುತ್ತಾರೆ. ತದನಂತರ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

    “ನಾವು ಮಮತಾ ದೀದಿ ಅವರ ನಾಯಕತ್ವದಲ್ಲಿ ಸ್ಪರ್ಧಿಸುತ್ತೇವೆ ಮತ್ತು ಅಭಿಷೇಕ್ ಬ್ಯಾನರ್ಜಿ ಜನರಲ್ (ದಂಡನಾಯಕ) ಆಗಿರುತ್ತಾರೆ ಎಂದು ನಾವು ಖಚಿತಪಡಿಸುತ್ತಿದ್ದೇವೆ. ಮಮತಾ ಅವರು 2036 ರವರೆಗೆ ಸಿಎಂ ಆಗಿರುತ್ತಾರೆ. ನಂತರ ಅಧಿಕಾರವನ್ನು ಅಭಿಷೇಕ್ ಅವರಿಗೆ ನೀಡಲಾಗುವುದು” ಎಂದು ಟಿಎಂಸಿ ವಕ್ತಾರರು ತಿಳಿಸಿದ್ದಾರೆ.

    ಪ್ರತಿಪಕ್ಷಗಳ ಮೇಲೆ ಕಟುವಾದ ವಾಗ್ದಾಳಿ ನಡೆಸಿದ ಘೋಷ್, “ಪಶ್ಚಿಮ ಬಂಗಾಳವನ್ನು ವಶಪಡಿಸಿಕೊಳ್ಳಲು ಹಗಲುಗನಸು ಕಾಣುವವರೆಲ್ಲರೂ ಅವರ ಗುರಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.

    “ಟಿಎಂಸಿಯು ಅವಿಭಜಿತ ಘಟಕವಾಗಿದೆ. ಆದರೆ, ಬಂಗಾಳದ ಬಿಜೆಪಿಯ ನೇತೃತ್ವವನ್ನು ಯಾರು ವಹಿಸುತ್ತಾರೆ?ಪ್ರತಿಪಕ್ಷದ ನಾಯಕ ಸುವೆಂದು ಅಧಿಕಾರಿ, ಸುಕಾಂತ ಮಜುಂದಾರ್, ದಿಲೀಪ್ ಘೋಷ್ ಇವರಲ್ಲಿ ಯಾರು ಬಿಜೆಪಿ ಹೋರಾಟವನ್ನು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸಬೇಕು. ಆದರೆ, ಟಿಎಂಸಿಯು ಒಂದು ಅವಿಭಜಿತ ಪಕ್ಷವಾಗಿ ಯುದ್ಧಭೂಮಿಗೆ ಪ್ರವೇಶಿಸುತ್ತದೆ ಎಂದು ಬಿಜೆಪಿಯವರು ತಿಳಿದಿರಬೇಕು” ಎಂದು ಘೋಷ್ ಹೇಳಿದರು.

    ಯಾರು ಅಭಿಷೇಕ್​?:

    ಎರಡು ಬಾರಿ ಸಂಸದ ಮತ್ತು ಟಿಎಂಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಅಭಿಷೇಕ್ ಬ್ಯಾನರ್ಜಿ.
    “ರಾಜಕೀಯ ಅಥವಾ ಇತರ ಯಾವುದೇ ಕ್ಷೇತ್ರವಾಗಲಿ, ಹೆಚ್ಚಿನ ವಯಸ್ಸಿನ ಮಿತಿ ಇರಬೇಕು ಎಂದು ನಾನು ನಂಬುತ್ತೇನೆ. ಒಬ್ಬ ವ್ಯಕ್ತಿಯು 30 ನೇ ವಯಸ್ಸಿನಲ್ಲಿ ಮಾಡುವ ಕೆಲಸ, 35, ಅಥವಾ 50 ಸಹ ಮಾಡಬಹುದು, 80 ವರ್ಷ ವಯಸ್ಸಿನ ವ್ಯಕ್ತಿಗೆ ಸಾಧ್ಯವಿಲ್ಲ.” ಎಂದು ಅಭಿಷೇಕ್​ ಹೇಳಿದ್ದರು. ಆದರೆ, ಬಳಿಕ ಸ್ಪಷ್ಟನೆ ನೀಡಿದ ಅವರು, ‘ನಾನು ಯಾರನ್ನೂ ದೂಷಿಸುತ್ತಿಲ್ಲ, ಅನುಭವಿಗಳು, ಹಿರಿಯರು ಬಹಳ ಮುಖ್ಯ’ ಎಂದಿದ್ದರು.

    ಅಭಿಷೇಕ್ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, ಪಕ್ಷದೊಳಗೆ ವಯಸ್ಸು ಅಡ್ಡಿಯಲ್ಲ. ಪಕ್ಷದಲ್ಲಿ ಹಿರಿಯರಿಗೆ ಯುವ ಪೀಳಿಗೆ ಗೌರವ ನೀಡಬೇಕು. ರಾಜಕಾರಣಿಗಳು ಯುವಕರನ್ನು ಸ್ವಾಗತಿಸಬೇಕು ಎಂದಿದ್ದರು.

    ಭಾರತೀಯ ಷೇರು ಮಾರುಕಟ್ಟೆಗೆ 2023 ಐತಿಹಾಸಿಕ ವರ್ಷ: ಬಿಎಸ್​ಇ, ನಿಫ್ಟಿ ಸೂಚ್ಯಂಕದ ಪ್ರಮುಖ ಷೇರುಗಳು ಗಳಿಸಿದ್ದೆಷ್ಟು?

    ದಾವೂದ್ ಇಬ್ರಾಹಿಂ ವಿಷ ಸೇವಿಸಿಲ್ಲ; ಸತ್ತಿಲ್ಲ: ಹೀಗೆಂದು ಹೇಳುವವರು ಯಾರು? ಪಾಕ್​ನಲ್ಲಿ ಇಂಟರ್​ನೆಟ್ ಸ್ಥಗಿತವಾಗಿದ್ದೇಕೆ?

    ಕೋವಿಡ್ ಪ್ರಕರಣ ಹೆಚ್ಚಳ; JN.1 ರೂಪಾಂತರದ ಪ್ರಕರಣ ಪತ್ತೆ: ಜಾಗರೂಕತೆ ವಹಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts