More

    ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಮ್ಮಿ ಸರ್ಕಾರ: ಆಮ್​ ಆದ್ಮಿ ಪಕ್ಷ

    ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ ಪರಿಹಾರ ಕೊಡುವುದರಲ್ಲಿ, ಆಡಳಿತದಲ್ಲಿ ಮಾತ್ರ ಸೋತಿಲ್ಲ, ಬದಲಿಗೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ. ಅಕ್ರಮ ಮತ್ತು ಅನಾಚಾರಗಳಲ್ಲಿ ಮಿಂದೆದ್ದಿದೆ. ತಾವು ಮಾಡಿರುವ ಅಚಾತುರ್ಯಗಳಿಗೆ ಜವಾಬು ಕೊಡಲಾಗದೇ, ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಕುತಂತ್ರಗಳನ್ನು ಅನುಸರಿಸಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ.

    ಇದೊಂದೇ ಕಾರಣಕ್ಕೆ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನು ತಂದಿರುವುದು. ಇಂಥದ್ದೇ ಬಿಲ್​ಗಳನ್ನು ತಾನು ಅಧಿಕಾರದಲ್ಲಿರುವ ಇತರ ಜಿಲ್ಲೆಗಳಲ್ಲಿ ಬಿಜೆಪಿ ತಂದಿತ್ತು. ಆದರೆ ಅಲ್ಲಿನ ನ್ಯಾಯಾಲಯಗಳು ಛೀಮಾರಿ ಹಾಕಿ, ಅದನ್ನು ತಡೆಹಿಡಿದಿದ್ದವು. ಜನಾಂಗಗಳ ಮಧ್ಯೆ ವಿಷಬೀಜ ಬಿತ್ತುತ್ತ ವೈಷಮ್ಯ ಹೆಚ್ಚಿಸುವುದು ಬಿಟ್ಟರೆ, ಇದಕ್ಕೆ ಬೇರೆ ಕಾರಣವೇ ಇಲ್ಲ. ಗುಜರಾತ್ ನ್ಯಾಯಾಲಯವು ಈ ಕಾಯ್ದೆಯನ್ನು ತಡೆದಿತ್ತು, ಅದರ ಅನುಷ್ಠಾನಕ್ಕೆ ಬಿಡದೆ ಕಾರಣಗಳನ್ನು ನೀಡಿತ್ತು. ನಮ್ಮ ಸಂವಿಧಾನವೇ ಹೇಳುವ ಪ್ರಕಾರ ಒಬ್ಬ ಪ್ರಜೆಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಕ್ಕು ಇದೆ, ಅಲ್ಲದೆ ಬಲವಂತದ ಮತಾಂತರ ತಡೆಯಲು ಈಗಾಗಲೇ ಕಾನೂನು ದೇಶದಲ್ಲಿ ಇದೆ, ಅದನ್ನು ಜಾರಿ ಮಾಡಲು ಇಚ್ಛಾಶಕ್ತಿ ಇರಬೇಕಷ್ಟೆ ಎಂದು ಆಪ್​ ಅಸಮಾಧಾನ ವ್ಯಕ್ತಪಡಿಸಿದೆ.

    ಶಾಸಕ ಗೂಳಿಹಟ್ಟಿ ಶೇಖರ್ ಪ್ರಕರಣ ಹೊರತುಪಡಿಸಿದರೆ ಇಲ್ಲಿಯವರೆಗೂ ಬಲವಂತವಾಗಿ ಮತಾಂತರಗೊಂಡಿರುವ ಒಂದೇ ಒಂದು ಪ್ರಕರಣದ ಉದಾಹರಣೆ ಸರ್ಕಾರದ ಮುಂದಿಲ್ಲ. ಸರ್ಕಾರವೇ ತಹಶೀಲ್ದಾರರ ಮೂಲಕ ನಡೆಸಿದ ವಿಚಾರಣೆಯಲ್ಲೂ ಬಲವಂತದ ಮತಾಂತರ ಆಗಿದೆ ಎಂಬುದು ಸಾಬೀತಾಗಿಲ್ಲ. ಅದನ್ನು ಒಪ್ಪದ ಬಿಜೆಪಿ ಸರ್ಕಾರ ಆ ತಹಶೀಲ್ದಾರನನ್ನೇ ವರ್ಗಾವಣೆ ಮಾಡಿತ್ತು.

    ಇದರಿಂದ ಸರ್ಕಾರದ ಆಲೋಚನೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಇವರಿಗೆ ಶೋಷಣೆ ತಡೆಯುವುದು ಬೇಕಿಲ್ಲ, ಮತಾಂತರ ನಿಲ್ಲಿಸುವುದು ಬೇಕಿಲ್ಲ. ಬದಲಾಗಿ ತಮ್ಮಿಷ್ಟದ ಮತಾಂತರ ಆದವರನ್ನೂ ಶಿಕ್ಷಿಸಲು ಅಸ್ತ್ರವೊಂದು ಬೇಕಷ್ಟೇ. ಇದರಿಂದ ಧರ್ಮಗಳ ನಡುವೆ ಘರ್ಷಣೆಗಳನ್ನು ಸೃಷ್ಟಿಸಲು ಪ್ರೊತ್ಸಾಹ ನೀಡಿದಂತಾಗಿದೆ. ಆದರೆ, ನಮ್ಮ ದುರದೃಷ್ಟಕ್ಕೆ, ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಚರ್ಚೆ ಮಾಡಲು ಈ ಜಟಿಲ ಸಮಸ್ಯೆಗಳು ರಾಜ್ಯದಲ್ಲಿವೆ ಎಂದು ಆಪ್ ಈ ಕೆಳಗಿನ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದೆ.

    • ಶೇ. 40 ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರು ರಾಜ್ಯದ ಶಾಸಕರು-ಮಂತ್ರಿಗಳ ವಿರುದ್ಧ ಪ್ರಧಾನಿಗೇ ಪತ್ರ ಬರೆದಿದ್ದಾರೆ.
    • ಭೂ ಹಗರಣದಲ್ಲಿ ಬಡವರ ಜಮೀನನ್ನು ಕಬ್ಜ ಮಾಡಿರುವ ಬಿಜೆಪಿಯ ಪ್ರಭಾವಿ ಮಂತ್ರಿ ಬೈರತಿ ಬಸವರಾಜ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿದೆ.
    • ಬೆಲೆ ಏರಿಕೆ ಮತ್ತು ರೈತರ ಸಮಸ್ಯೆ
    • ಪ್ರವಾಹ ಮತ್ತು ಬರದ ಪರಿಹಾರಗಳು
    • ರಸ್ತೆಗುಂಡಿಗಳಿಂದ ಪ್ರಾಣ ಕಳೆದುಕೊಂಡವರ ಬಗ್ಗೆ
    • ಸರ್ಕಾರಿ ಶಾಲೆಗಳ ದುರವಸ್ಥೆ ಮತ್ತು ಖಾಸಗಿ ಶಾಲೆಗಳ ದರ್ಬಾರ್
    • ಸರ್ಕಾರಿ ಆಸ್ಪತ್ರೆಗಳ ಶೋಚನೀಯ ಸ್ಥಿತಿಗಳು

    ಇವೇ ಮುಂತಾದ ನಿಜವಾದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಮಾಡುವುದು ಬಿಟ್ಟು ಅನಗತ್ಯ ಬಿಲ್ ತರುವುದರ ಬಗ್ಗೆ ಚರ್ಚೆ ಮಾಡುತ್ತಿವೆ. ಸರ್ಕಾರವು ಜಟಿಲ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆದು ಮೋಸ ಮಾಡುವುದು ಬಿಟ್ಟು, ನಾಡಿನ ಕಷ್ಟಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಮತ್ತು ಜನರ ಕಷ್ಟಕ್ಕೆ ಸ್ಪಂದಿಸಲು ಈಗಲಾದರೂ ಶುರುಮಾಡಬೇಕು ಎಂದು ಆಮ್​ ಆದ್ಮಿ ಪಕ್ಷದ ಕರ್ನಾಟಕ ಅಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್ಕೇರಿಸಲು ‘ಓಲ್ಡ್​ ಮಾಂಕ್’ ಕೊಡಲು ಸಜ್ಜಾದ ಶ್ರೀನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts