More

    ಆಧಾರ್​ ಜೊತೆ ಲಿಂಕ್​ ಮಾಡಿಲ್ಲ ಅಂದ್ರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯ ಆಗುತ್ತೆ; ಡೆಡ್​ಲೈನ್​ ಕೊಟ್ಟ ತೆರಿಗೆ ಇಲಾಖೆ..!

    ನವದೆಹಲಿ: ನೀವು ಇನ್ನೂ ಪ್ಯಾನ್​ ಕಾರ್ಡ್​ ಜೊತೆ ಆಧಾರ್​ ಕಾರ್ಡ್​ ಲಿಂಕ್​ ಮಾಡಿಲ್ಲ ಅಂದ್ರೆ ಈಗಲೇ ಮಾಡಿಸಿಕೊಳ್ಳಿ. ಇಲ್ಲಾ ಅಂದರೆ 2023 ಮಾರ್ಚ್ ಅಂತ್ಯದೊಳಗೆ ಪ್ಯಾನ್ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸಲಾಗುವುದು’ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ.

    ಆದಾಯ-ತೆರಿಗೆ ಕಾಯಿದೆ, 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲರೂ ಪ್ಯಾನ್ ಕಾರ್ಡ್​ 31.3.2023 ರ ಮೊದಲು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 1.04.2023 ರಿಂದ, ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ, ಎಂದು ಆದಾಯ ಮತ್ತು ತೆರಿಗೆ ಇಲಾಖೆ ಅಧಿಕೃತವಾಗಿ ಘೋಷಿಸಿದೆ.

    ಮಾರ್ಚ್ 30 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಹೊರಡಿಸಿದ ಸುತ್ತೋಲೆಯಲ್ಲಿ, ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡರೆ, ಐಟಿ ಕಾಯ್ದೆಯ ಅಡಿಯಲ್ಲಿ ಆ ವ್ಯಕ್ತಿ ಆಗುವ ಎಲ್ಲಾ ಪರಿಣಾಮಗಳಿಗೆ ಹೊಣೆಗಾರನಾಗಿರುತ್ತಾನೆ

    ನಿಷ್ಕ್ರಿಯ ಆಗಿರುವ PAN ಅನ್ನು ಬಳಸಿಕೊಂಡು ವ್ಯಕ್ತಿಯು IT ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಬಾಕಿ ಇರುವ ರಿಟರ್ನ್‌ಗಳ ಪ್ರಕ್ರಿಯೆ ಮುಂದಕ್ಕೆ ಹೋಗುವುದಿಲ್ಲ. ನಿಷ್ಕ್ರಿಯ PAN ಗಳಿಗೆ ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. ಅದಲ್ಲದೇ ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಅದರ ಜೊತೆಗೆ, ತೆರಿಗೆದಾರರು ಬ್ಯಾಂಕ್‌ ಖಾತೆ ತೆರೆಯಲೂ ತೊಂದರೆ ಎದುರಿಸಬೇಕಾಗುತ್ತದೆ. ಏಕೆಂದರೆ ಎಲ್ಲಾ ರೀತಿಯ ಹಣಕಾಸಿನ ವಹಿವಾಟುಗಳಿಗೆ PAN ಪ್ರಮುಖ KYC ಮಾನದಂಡವಾಗಿದೆ. ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts