More

    ವಾಟ್ಸ್ಯಾಪ್​ನಲ್ಲಿ ತಪ್ಪಿ ‘Delete For Me’ ಮಾಡಿದ್ರೆ ಇನ್ನು ಚಿಂತೆ ಮಾಡಬೇಕಾಗಿಲ್ಲ…!

    ನವದೆಹಲಿ: ಯಾವತ್ತಾದ್ರು ತಪ್ಪಿ ಕಳಿಸಬಾರದ ಮೆಸೇಜ್​ ಕಳಿಸಿ ಡಿಲೀಟ್ ಫಾರ್ ಮೀ ಕೊಟ್ಟು ಮುಜುಗರ ಅನುಭವಿಸಿದ್ದೀರಾ? ಇನ್ನು ಆ ಸಮಸ್ಯೆ ಎದುರಿಸಬಕಾಗಿಲ್ಲ! ಹೌದು ವಾಟ್ಸ್ಯಾಪ್​ ಈಗ ಅದಕ್ಕೂ ಪರಿಹಾರ ಕಂಡುಹಿಡಿದಿದೆ.

    ಇನ್ನು ಕಳಿಸಬಾರದ ಮೆಸೇಜ್​ ಕಳಿಸಿ ಡಿಲೀಟ್​ ಫಾರ್ ಮಿ ಕೊಟ್ಟು ಮುಜುಗರ ಅನುಭವಿಸ ಬೇಕಾಗಿಲ್ಲ. ವಾಟ್ಸ್ಯಾಪ್​ ಈಗ ಅದಕ್ಕೂ ಪರಿಹಾರ ಕಂಡು ಹಿಡಿದಿದ್ದು ಸದ್ಯದಲ್ಲೇ ಹೊಸ ಅಪ್ಡೇಟ್​ನಲ್ಲಿ ಈ ಫೀಚರ್ ಲಭ್ಯವಾಗಲಿದೆ.

    ಈ ಹೊಸ ಫೀಚರ್​ಅನ್ನು ಬಳಸೋದು ಹೇಗೆ ಎಂದು ಚಿಂತೆ ಮಾಡುತ್ತೀರಾ? ತೀರಾ ಸುಲಭ. ಸಂದೇಶ ಡಿಲೀಟ್​ ಆದ ತಕ್ಷಣ ಅಲ್ಲೇ UNDO ಬಟನ್ ಕಾಣಲಿದೆ. ಅದನ್ನು ಒತ್ತಿದ ಕೂಡಲೇ ಆ ಮೆಸೇಜ್​ ಮತ್ತೆ ಕಾಣಿಸಲಿದೆ. ನಂತರ ಅದನ್ನು ಡಿಲೀಟ್​ ಫಾರ್​ ಆಲ್​ ಮಾಡಿಕೊಳ್ಳಬಹುದು. ಈ ಹೊಸ ಫೀಚರ್ ಅನೇಕರನ್ನು ಮುಜುಗರದ ಸನ್ನಿವೇಶಗಳಿಂದ ಕಾಪಾಡೋದಂತು ಸತ್ಯ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts