More

    ಆಧಾರ್​ಗೆ ಸರ್ಟಿಫಿಕೇಷನ್​ ಸೋಗಲ್ಲಿ 3.24 ಲಕ್ಷ ರೂ. ಎಗರಿಸಿದ ಸೈಬರ್​ ಖದೀಮರು..!

    ಬೆಂಗಳೂರು: ಮೊಬೈಲ್​ ಸಿಮ್​ ಕಾರ್ಡ್​, ಆಧಾರ್​, ಪಾನ್​, ಕ್ರೆಡಿಟ್​, ಡೆಬಿಟ್​ ಕಾರ್ಡ್​ ಡಿಆಕ್ಟಿವೇಟ್​ ಆಗುತ್ತವೆ ಎಂದು ಹೆದರಿಸಿ ಆಕ್ಟೀವ್​ ಮಾಡುವ ಸೋಗಲ್ಲಿ ಸೈಬರ್​ ಕಳ್ಳರು ಹಣ ವಸೂಲಿ ಮಾಡುವ ದಂಧೆ ಬಿಟ್ಟಿಲ್ಲ. ಜನರಲ್ಲಿಯೂ ಈ ಬಗ್ಗೆ ಇನ್ನೂ ಅರಿವು ಮೂಡಿಲ್ಲ. ಇಲ್ಲೊಬ್ಬರಿಗೆ ಆಧಾರ್​ ಕಾರ್ಡ್​ ಪರಿಶೀಲನೆ ನೆಪದಲ್ಲಿ ಸೈಬರ್​ ಕಳ್ಳರು ಬರೋಬ್ಬರಿ 3.24 ಲಕ್ಷ ರೂ. ವಂಚನೆ ಮಾಡಿದ್ದಾರೆ.

    ಯಲಹಂಕದ ಬಿ.ಅರ್​. ರಘುನಂದನ್ ​ (69) ಹಣ ಕಳೆದುಕೊಂಡವರು. ಜೂನ್​ 8ರಂದು ಸೈಬರ್​ ಕಳ್ಳ ಕರೆ ಮಾಡಿ ನಿಮ್ಮ ಆಧಾರ್​ ಕಾರ್ಡ್​ ಪರಿಶೀಲನೆ ಮಾಡಿ ಸರ್ಟಿಫಿಕೇಷನ್​ ಮಾಡಬೇಕು. ಇಲ್ಲವಾದರೆ 24 ಗಂಟೆಯಲ್ಲಿ ಡಿಆಕ್ಟೀವೆಟ್​ ಆಗಲಿದೆ ಎಂದು ಹೆದರಿಸಿದ್ದಾನೆ. ಇದನ್ನು ನಂಬಿದ ರಘುನಂದನ್​, ಅದಕ್ಕೆ ಏನು ಮಾಡಬೇಕೆಂದು ಕೇಳಿದ್ದಾರೆ. ಆಗ ಸೈಬರ್​ ಕಳ್ಳ, ಆಧಾರ್​ ಪರಿಶೀಲನೆ ಶುಲ್ಕವೆಂದು 13.90 ರೂ. ಪಾವತಿ ಮಾಡಬೇಕು. ನಿಮ್ಮ ಮೊಬೈಲ್​ ವಾಟ್ಸ್​ಆ್ಯಪ್​ಗೆ ಒಂದು ಲಿಂಕ್​ ಕಳುಹಿಸುತ್ತೆನೆ. ಡೆಬಿಟ್​ ಕಾರ್ಡ್​ಗಳ ವಿವರ ನಮೂದಿಸಿ ಹಣವನ್ನು ಆನ್​ಲೈನ್​ ವರ್ಗಾವಣೆ ಮಾಡುವಂತೆ ಹೇಳಿದ್ದಾನೆ.

    ಅದನ್ನು ನಂಬಿದ ರಘುನಂದನ್​, ತಮ್ಮ ವಾಟ್ಸ್​ಆ್ಯಪ್​ಗೆ ಬಂದ ಲಿಂಕ್​ ಮೇಲೆ ಒತ್ತಿ ಎರಡು ಡೆಬಿಟ್​ ಕಾರ್ಡ್​ಗಳ ವಿವರ ನಮೂದಿಸಿ 13.90 ರೂ. ವರ್ಗಾವಣೆ ಮಾಡಿದ್ದಾರೆ. ಆನಂತರ ಆರೋಪಿ, ಹಂತ ಹಂತವಾಗಿ 3.24 ಲಕ್ಷ ರೂ.ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.

    ವಾಪಸ್​ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ದಿಕ್ಕು ತೋಚದೆ ಈಶಾನ್ಯ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಅಕ್ಕನ ಮದುವೆ ವೇದಿಕೆ ಮೇಲೆ ಭಾವನಿಗೇ ಕಿಸ್ ಕೊಟ್ಟ ನಾದಿನಿ! ವೈರಲ್ ಆಯ್ತು ವಿಡಿಯೋ

    ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಯುವತಿಗೆ ಕೋಟಿ ಕೋಟಿ ಹಣ ನೀಡಲು ಮುಂದಾದ ಆ್ಯಪಲ್ ಸಂಸ್ಥೆ

    ನೀನು ಬೇಡ, ಮಗುವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎನ್ನುತ್ತಿದ್ದಾರೆ ಪತಿ- ನನ್ನ ಗತಿಯೇನು ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts