More

    ವಿದ್ಯಾರ್ಥಿಗಳ ಉಪಾಹಾರದಲ್ಲಿ ಹಾವು ಪತ್ತೆ! ಯಾದಗಿರಿಯಲ್ಲಿ 52 ಮಕ್ಕಳು ಅಸ್ವಸ್ಥ

    ಯಾದಗಿರಿ: ವಿದ್ಯಾರ್ಥಿಗಳ ಉಪಾಹಾರದಲ್ಲಿ ಹಾವು ಪತ್ತೆಯಾಗಿದ್ದು, 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

    ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಗುರುವಾರ ಉಪಾಹಾರಕ್ಕೆಂದು ಉಪ್ಪಿಟ್ಟು ತಯಾರಿಸಲಾಗಿತ್ತು. ಆದರೆ ಈ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಬಿದ್ದಿದೆ. ಇದರ ಬಗ್ಗೆ ಅರಿವಿರದ ವಸತಿ ಶಾಲೆಯ ಮಕ್ಕಳು ಉಪ್ಪಿಟ್ಟನ್ನು ಸೇವಿಸುತ್ತಿದ್ದರು. ಈ ವೇಳೆ ಪಾತ್ರೆಯಿಂದ ಮತ್ತಷ್ಟು ಉಪ್ಪಿಟ್ಟನ್ನು ಮಕ್ಕಳ ತಟ್ಟೆಗೆ ಬಡಿಸುವಾಗ ಅದರಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿದೆ.

    ಉಪಾಹಾರ ಸೇವಿಸಿದ್ದ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಪಾಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಗೊಂಡಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಟಿಎಚ್​ಒ ಹಣಮಂತರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಸದ್ಯದ ಮಾಹಿತಿ ಪ್ರಕಾರ ವಿದ್ಯಾರ್ಥಿಗಳ ಪ್ರಾಣಕ್ಕೆ ತೊಂದರೆ ಇಲ್ಲ ಎನ್ನಲಾಗಿದೆ. ಇನ್ನು ವಸತಿ ಶಾಲೆಯಲ್ಲಿ ಅಡುಗೆ ತಯಾರಿ ವೇಳೆ ಬೇಜವಾಬ್ದಾರಿ ತೋರಿದವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ರಾಮನಗರದಲ್ಲಿ ಧಾರಾಕಾರ ಮಳೆ: ಹೂತಿಟ್ಟಿದ್ದ ಶವ ಕಣ್ವ ನೀರಲ್ಲಿ ತೇಲಿ ಬಂತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts