More

    ಅಮೋಘ ನೆನಪಿನ ವಿಹಾನ್​

    ಎಲ್ಲ ಮಕ್ಕಳಲ್ಲಿಯೂ ಹುಟ್ಟುತ್ತಲೇ ಇರುತ್ತದೆ. ಪಾಲಕರು ಅದನ್ನು ಗಮನಿಸಿ, ಬಾಲ್ಯದಿಂದಲೇ ಮಕ್ಕಳ ಚಿತ್ತವನ್ನು ಉತ್ತಮ ಚಟುವಟಿಕೆಗಳತ್ತ ಹರಿಸಿದರೆ ಅದು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುತ್ತದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಹೆಸರು ದಾಖಲಿಸಿಕೊಂಡಿರುವ ಈ ಇಬ್ಬರು ಪುಟಾಣಿಗಳು.

    ಈ ಪುಟಾಣಿಗೆ ಇನ್ನೂ ಮೂರು ವರ್ಷ ತುಂಬಿಲ್ಲ. ತನ್ನ ತೊದಲು ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುವ ಇವನ ಹೆಸರು ಮಾತ್ರ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ! ಈತನ ಅದ್ಭುತ ನೆನಪಿನ ಶಕ್ತಿಯೀಗ ದಾಖಲೆಯಾಗಿದೆ. ಶಿವಮೊಗ್ಗದ ಈ ಪುಟ್ಟ ಪ್ರತಿಭೆಯ ಹೆಸರು ವಿಹಾನ್ ಮುತ್ಯಾಲ್.

    ಬರುವ ಮಾರ್ಚ್​ಗೆ ಮೂರು ವರ್ಷ ತುಂಬುತ್ತದೆ. ವಿರೂಪಾಕ್ಷ ಮುತ್ಯಾಲ ಮತ್ತು ನಂದಿನಿ ಪಿ. ಅವರ ಪುತ್ರ. ಮಗನಿಗೆ 7 ತಿಂಗಳು ಇರುವಾಗಲೇ ನಂದಿನಿಯವರು ಪುಸ್ತಕ ತಂದು ಕೊಡುತ್ತಿದ್ದರು. ಅದಾಗಲೇ ವಿಹಾನ್ ವಸ್ತುಗಳನ್ನು ಗುರುತಿಸುವ ಕಲೆ ರೂಢಿಸಿಕೊಂಡ. ಹಂತ ಹಂತವಾಗಿ ಯಾರೂ ನಿರೀಕ್ಷಿಸಲಾರದ ರೀತಿಯಲ್ಲಿ ತಾಯಿ ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸುತ್ತಾ ಹೋದ. ಒಂದು ವರ್ಷ ಎಂಟು ತಿಂಗಳಿಂದ ದೇಶದ 29 ರಾಜ್ಯಗಳ ರಾಜಧಾನಿಗಳನ್ನು ಪಟಪಟನೆ ಹೇಳಲಾರಂಭಿದ. 13 ಇಂಗ್ಲಿಷ್ ರೈಮ್್ಸ ಗಳನ್ನು ನಿರಂತರವಾಗಿ ಹೇಳುತ್ತಾನೆ. 14 ಬಣ್ಣಗಳ ಹೆಸರುಗಳನ್ನು, 14 ಆಕೃತಿಗಳನ್ನು, ಇಂಗ್ಲಿಷ್ ಶಬ್ದಗಳನ್ನು ಗುರುತಿಸುತ್ತಾನೆ.

    ಪಜಲ್ಸ್ ಈತನಿಗೆ ಅಚ್ಚುಮೆಚ್ಚು. 15 ವಸ್ತುಗಳ ಎರಡು ತುಂಡು ಭಾಗಗಳನ್ನು ಗುರುತಿಸಿ ಅದನ್ನು ಜೋಡಿಸುವಲ್ಲಿ ಈತ ನಿಪುಣ. ಇನ್ನೂ ಶಾಲೆಗೆ ಸೇರದ ಈ ಮಗುವಿನ ಅಗಾಧ ಶಕ್ತಿಯನ್ನು ಕಂಡ ಈತನ ಪಾಲಕರು ‘ಇಂಡಿಯ ಬುಕ್ ಆಫ್ ರೆಕಾರ್ಡ್ಸ್’ನ ನಿಯಮಗಳಂತೆ ಮಗುವಿನ ಎಲ್ಲ ವಿಡಿಯೋಗಳನ್ನು ಸಿದ್ಧಪಡಿಸಿ ಸಂಸ್ಥೆಗೆ ಕಳಿಸಿಕೊಟ್ಟಿದ್ದಾರೆ. ಮಗುವಿನ ನೆನಪಿನ ಶಕ್ತಿಗೆ ಮೆಚ್ಚಿ 2019ರ ಡಿಸೆಂಬರ್ 19ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದೆ. ಈತನನ್ನು ಇದೇ ಜೂನ್ ತಿಂಗಳಿನಲ್ಲಿ ಶಾಲೆಗೆ ಸೇರಿಸುವ ತಯಾರಿಯಲ್ಲಿ ಪಾಲಕರಿದ್ದಾರೆ.

    ಬಸಾಪುರ ಬಸವರಾಜ ಹೊಸಪೇಟೆ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts