More

    ಒಂದೇ ತಿಂಗಳಲ್ಲಿ ಹೊಸ ಮನೆ ರೆಡಿ, ವೆಚ್ಚವೂ ಕಡಿಮೆ! ಹೊಸ ಮಾದರಿಯ ಮನೆಗೆ ಇದೀಗ ಫುಲ್​ ಡಿಮ್ಯಾಂಡ್​!

    ಹೈದರಾಬಾದ್​: ಮನೆ ಕಟ್ಟುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿಯೇ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತ ಹಿರಿಯರು ಹೇಳುತ್ತಾರೆ. ಮೇಸ್ತ್ರಿಗಳು, ಕಾರ್ಮಿಕರು, ಬಿಲ್ಡರ್‌ಗಳು, ಇಂಜಿನಿಯರ್‌ಗಳು ಸೇರಿದಂತೆ ದೊಡ್ಡ ವ್ಯವಹಾರವೇ ಇದರಲ್ಲಿ ಇರುತ್ತದೆ. ಮನೆ ಪೂರ್ಣಗೊಳ್ಳಲು ಒಂದು ವರ್ಷವೇ ಬೇಕಾಗುತ್ತದೆ. ಆದರೆ, ಮನೆ ಕಟ್ಟುವವರಿಗೆ ಮಾಸಿಕ ಬಡ್ಡಿ ಮತ್ತು ಇಎಂಐ ಕೂಡ ತುಂಬಾ ದುಬಾರಿಯಾಗಿದೆ. ಮನೆ ನಿರ್ಮಾಣಕ್ಕೆ ಬಳಸುವ ವಸ್ತುಗಳ ಬೆಲೆಯು ಸಹ ಜೇಬು ಸುಡುತ್ತಿದೆ. ಮನೆ ಕಟ್ಟುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಒಂದೇ ತಿಂಗಳಲ್ಲಿ ಮನೆ ಕಟ್ಟಿಕೊಡುತ್ತೇನೆ ಎನ್ನುತ್ತಾರೆ ಶ್ರಾವಂತಿ.

    ಹೈದರಾಬಾದ್‌ ಮೂಲದ ಶ್ರಾವಂತಿ ಎಂಬಾಕೆ ಆರು ವರ್ಷಗಳಿಂದ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಬ್ಯುಸಿನೆಸ್ ಮಹಿಳೆಯಾಗಿ ತನ್ನದೇಯಾದ ವಿಶೇಷ ಗುರುತನ್ನು ಗಳಿಸಿದ್ದಾರೆ. ಶ್ರಾವಂತಿ ಅವರು ಎಂಬಿಎ ಮಾಡಿದ್ದು, ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ಮನೆ ಕಟ್ಟುವ ಸಲುವಾಗಿ ಪ್ರೀ ಫ್ಯಾಬ್ರಿಕೇಟೆಡ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡರು. ಈ ತಂತ್ರಜ್ಞಾನ ಬಳಸಿ ಮನೆಯನ್ನು ಸಹ ನಿರ್ಮಿಸಿದ್ದಾರೆ. ಇದರಲ್ಲಿ ಯಶಸ್ಸು ಕಂಡುಕೊಂಡ ಬಳಿಕ 2018ರಲ್ಲಿ ಹೆವೆನ್ಲಿ ಮೊಬೈಲ್ ಹೌಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು.

    ಈವರೆಗೆ 200 ರಿಂದ 250 ಮನೆಗಳನ್ನು ಶ್ರಾವಂತಿ ನಿರ್ಮಿಸಿಕೊಟ್ಟಿದ್ದಾರೆ. ಈ ಮೊಬೈಲ್ ಮನೆಗಳಿಗೆ ಹೈದರಾಬಾದ್‌ನಲ್ಲಿ ಬೇಡಿಕೆ ಹೆಚ್ಚಿದೆ. ತೋಟದ ಮನೆಗಳು, ಖಾಸಗಿ ಮನೆಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಪೂರೈಕೆ ಮಾಡುತ್ತಿರುವುದು ಕಂಡುಬಂದಿದೆ. ಮಾಮೂಲಿ ಮನೆಗಳಿಗೂ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಅತ್ಯುನ್ನತ ಗುಣಮಟ್ಟದಿಂದ ಮನೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಶ್ರಾವಂತಿ ಹೇಳಿದ್ದಾರೆ.

    ಸಿವಿಲ್ ಮನೆಗಳಿಗೆ ಕಾಂಕ್ರಿಟ್, ಮರಳು, ಸಿಮೆಂಟ್ ಮತ್ತು ಉಕ್ಕನ್ನು ಬಳಸಲಾಗುತ್ತದೆ. ಆದರೆ ಈ ಮೊಬೈಲ್ ಮನೆಗೆ ಸ್ಟೀಲ್ ಅನ್ನು ಸಂಪೂರ್ಣವಾಗಿ ಬಳಸಲಾಗುತ್ತದೆ. ಉಕ್ಕಿನ ಹೊರತಾಗಿ ಗೋಡೆ, ಛಾವಣಿಗೆ ಪ್ರತ್ಯೇಕ ವಸ್ತು ರೂಪಿಸಲಾಗುತ್ತದೆ. ಮೇಸ್ತ್ರಿಗಳು ಕಟ್ಟಿದ ಮನೆ 50, 60 ವರ್ಷಕ್ಕೆ ಹೇಗೆ ಬೆಲೆ ಬಾಳುತ್ತವೇ ಈ ಮನೆಯು ಕೂಡ 60 ವರ್ಷ ಉಳಿಯುತ್ತದೆ ಎಂದು ಶ್ರಾವಂತಿ ಹೇಳಿದರು.

    ಇನ್ನು ಬೇಸಿಗೆಯಲ್ಲಿ ಈ ಮನೆಯೊಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ 10 ಡಿಗ್ರಿ ಕಡಿಮೆ ಇರುತ್ತದೆ. ಚಳಿಗಾಲದಲ್ಲಿಯೂ ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಮನೆಯಲ್ಲಿ ಶಾಖವು ಸ್ವಯಂಚಾಲಿತವಾಗಿ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಕುಕ್ಕಟಪಲ್ಲಿಯಲ್ಲಿ ಕಾರ್ಯಾಗಾರ ಆರಂಭಿಸಲಾಗಿದ್ದು, 40 ಮಂದಿಗೆ ಉದ್ಯೋಗ ನೀಡಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಬಳಸುವ ಸ್ಟೀಲ್​ನಿಂದ ಹಿಡಿದು ಗೋಡೆಗೆ ಬಳಸುವ ಫೈಬರ್​ವರೆಗೆ ಎಲ್ಲದರಲ್ಲೂ ಗುಣಮಟ್ಟದ ಮಾನದಂಡ ಅನುಸರಿಸುತ್ತೇವೆ ಎಂದು ಶ್ರಾವಂತಿ ಹೇಳಿದ್ದಾರೆ.

    ಶ್ರಾವಂತಿ ಅವರ ಬಳಿ 300 ರೀತಿಯ ವಿನ್ಯಾಸಗಳು ಲಭ್ಯವಿವೆ. ಒಂದು ತಿಂಗಳಲ್ಲಿ ಮನೆ ಕಟ್ಟಿಸುವುದಲ್ಲದೆ, ಎಲ್ಲಿಗೆ ಬೇಕಾದರೂ ಸಾಗಿಸುತ್ತೇವೆ ಎನ್ನುತ್ತಾರೆ ಮತ್ತು ಈ ಮನೆಯ ವೆಚ್ಚ ಸಾಮಾನ್ಯ ಜನರ ಕೈಗೆಟುಕುತ್ತದೆ ಎಂದು ಶ್ರಾವಂತಿ ಹೇಳಿದ್ದಾರೆ. (ಏಜೆನ್ಸೀಸ್​)

    ಯುವ ಕ್ರಿಕೆಟಿಗನ ಪ್ರೀತಿಯ ಬಲೆಯಲ್ಲಿ ಬಿದ್ದ ಕಾವ್ಯಾ ಮಾರನ್​!? ಸಾಕ್ಷಿಯೂ ಇದೆ ಅಂದ್ರು ಅಭಿಮಾನಿಗಳು

    ಆರ್​ಸಿಬಿ ತಂಡವನ್ನು ಕೆಣಕಿದ ನಟಿ ಕಸ್ತೂರಿಗೆ ಖಡಕ್​ ತಿರುಗೇಟು ಕೊಟ್ಟ ಅಭಿಮಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts