More

    VIDEO| ಮಹಿಳೆಯ ಹೈಡ್ರಾಮಕ್ಕೆ ಪೊಲೀಸರೇ ತಬ್ಬಿಬ್ಬು: ವಾಕಿ-ಟಾಕಿ ಕಸಿದು, ಪೇದೆಯನ್ನೇ ನೂಕಿ ರಂಪಾಟ

    ಹೈದರಾಬಾದ್​: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾರನ್ನು ಲಾಕ್​ ಮಾಡಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬರು ಟ್ರಾಫಿಕ್​ ಪೊಲೀಸರ ವಿರುದ್ಧ ಕಿರುಚಾಡಿ, ಸ್ಥಳದಲ್ಲೇ ಹೈಡ್ರಾಮ ಮಾಡಿರುವ ಘಟನೆ ಬುಧವಾರ (ಸೆ.21) ಹೈದರಾಬಾದ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೋಠಿ ಪ್ರದೇಶದ ಸುಲ್ತಾನ್​ ಬಜಾರ್​ನ ಜನನಿಬಿಡ ಪ್ರದೇಶದಲ್ಲಿರುವ ನೋ ಪಾರ್ಕಿಂಗ್​ ವಲಯದಲ್ಲಿ ಪಾರ್ಕ್​ ಮಾಡಿದ್ದ ಕಾರನ್ನು ಹೈದರಾಬಾದ್​ ಟ್ರಾಫಿಕ್​ ಪೊಲೀಸರು ಸೀಜ್​ ಮಾಡಿದರು. ಟ್ರಾಫಿಕ್​ ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ನೋ ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸ್​ ಸಿಬ್ಬಂದಿ ಟೋಯಿಂಗ್​ ಮಾಡುತ್ತಿದ್ದರು. ಈ ವೇಳೆ ಕಾರೊಂದರ ಚಕ್ರಗಳನ್ನು ಟೋಯಿಂಗ್​ ಮಾಡಲು ಮುಂದಾದಾಗ ಅದನ್ನು ನೋಡಿದ ಕಾರಿನ ಮಾಲಕಿ ವಿರೋಧ ವ್ಯಕ್ತಪಡಿಸಿದರು.

    ಕಾರನ್ನೇಕೆ ಸೀಜ್​ ಮಾಡುತ್ತೀರಾ? ಎಂದು ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿಯ ಮೇಲೆಯೇ ಮಹಿಳೆ ಕೂಗಾಡಿದಳು. ಅಲ್ಲದೆ, ಮಿತಿ ಮೀರಿ ವರ್ತಿಸಿದ ಮಹಿಳೆ ಒಂದು ಹಂತದಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರ ವಾಕಿ-ಟಾಕಿಯನ್ನು ಕಸಿದುಕೊಂಡು, ಅವರನ್ನು ನೂಕಿದರು. ಅವಾಚ್ಯ ಪದಗಳಿಂದ ನಿಂದಿಸುತ್ತಾ ಸ್ಥಳದಲ್ಲೇ ಭಾರೀ ಹೈಡ್ರಾಮವನ್ನು ಸೃಷ್ಟಿಸಿದರು. ಮಹಿಳೆಯ ಕೂಗಾಟವನ್ನು ನೋಡಿ ಪೊಲೀಸರು ಒಂದು ತಬ್ಬಿಬ್ಬಾದರು.

    ಆದರೆ, ಮಹಿಳೆಯ ಕಿರುಚಾಟಕ್ಕೆ ಕ್ಯಾರೆ ಎನ್ನದ ಪೊಲೀಸರು ಕಾರನ್ನು ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿದ್ದಕ್ಕೆ ದಂಡ ವಿಧಿಸಿದರು ಮತ್ತು ಕರ್ತವ್ಯನಿರತ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ: 100ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರ ಬಂಧನ

    ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?

    ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ: ಭಯೋತ್ಪಾದಕರ ತಯಾರಿಕಾ ಕಾರ್ಖಾನೆ ಮಲೆನಾಡು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts