More

    ಬಿಜೆಪಿ ಸೋಲಿಸುವ ಗುರಿ ಇಟ್ಟಿದ್ದ ರಮೇಶ್​ ಜಾರಕಿಹೊಳಿ ಡಿ-ಕೋಡಿಂಗ್ ರೀತಿ ಪ್ಲ್ಯಾನ್ ಮಾಡಿದ್ರು: ಸತೀಶ್​ ಜಾರಕಿಹೊಳಿ‌

    ಬೆಳಗಾವಿ: ರಮೇಶ್​ ಜಾರಕಿಹೊಳಿಗೆ ಬಿಜೆಪಿಯನ್ನು ಸೋಲಿಸುವ ಗುರಿ ಇತ್ತು. ಡಿ- ಕೋಡಿಂಗ್ ರೀತಿ ಪ್ಲ್ಯಾನ್ ಮಾಡಿದ್ರು ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್​ ಜಾರಕಿಹೊಳಿ‌ ಹೇಳಿದ್ದಾರೆ.

    ಭಾರೀ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬೆಳಗಾವಿ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಯ ಹಟ್ಟಿಹೊಳಿ ಮೊದಲ ಪ್ರಾಶಸ್ತ್ಯದಲ್ಲೇ ಗೆದ್ದು ಬೀಗಿದ್ದಾರೆ. ಎರಡನೇ ಪ್ರಾಶಸ್ತ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲುಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿಗೆ ಬಿಜೆಪಿಯನ್ನು ಸೋಲಿಸುವ ಗುರಿ ಇತ್ತು. ಹೀಗಾಗಿ ನಮ್ಮ ಹೆಸರು ಹೇಳುತ್ತಿದ್ದರು. ಅವರ ಲೆಕ್ಕಾಚಾರ ಯಾರಿಗೂ ಗೊತ್ತಾಗಲ್ಲ. ಮಿಲ್ಟ್ರಿಯಲ್ಲಿ ಡಿ- ಕೋಡಿಂಗ್ ರೀತಿ ರಮೇಶ ಪ್ಲ್ಯಾನ್ ಇತ್ತು. ಬಿಜೆಪಿ ಅಭ್ಯರ್ಥಿ ಸೋಲಿಸಿ ಪಕ್ಷದಲ್ಲಿ ಅಧಿಪತ್ಯದ ಸಾಧಿಸಲು ಪ್ಲ್ಯಾನ್ ಅವರದ್ದಾಗಿತ್ತು ಎಂದರು.

    ‌ನಿರೀಕ್ಷೆಯಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಕಾಂಗ್ರೆಸ್​ಗೆ ನಮ್ಮ ನಿರೀಕ್ಷೆಗಿಂತ 300 ಮತಗಳು ಹೆಚ್ಚು ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ವೇಗ ಕಡಿಮೆ ಇರಬಹುದು ಆದರೇ ನಿಲ್ಲಲ್ಲ. 2023ರ ವಿಧಾನ ಸಭೆ ಚುನಾವಣೆಗೆ ಪಕ್ಷ ಸಂಘಟನೆ ಹೆಚ್ಚಾಗಿದೆ ಎಂದು ಸತೀಶ್​ ಹೇಳಿದರು.

    ವಿಧಾನ ಪರಿಷತ್​ ಚುನಾವಣೆ: 25 ಸ್ಥಾನಕ್ಕೆ ಆಯ್ಕೆ ಆದವರ ಲಿಸ್ಟ್​ ಇಲ್ಲಿದೆ

    ಮಾರ್ಗಮಧ್ಯೆ ಕಾರಲ್ಲಿ ಯುವತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಗಂಡ! ಆ ದಿನ ಗಂಡ, ಹೆಂಡತಿ, ಅವಳು…

    ರಮೇಶ್​ ಜಾರಕಿಹೊಳಿಗೆ ಸೆಡ್ಡು ಹೊಡೆದು ಸಹೋದರನನ್ನು ಗೆಲ್ಲಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್​!

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts