More

    ರಮೇಶ್​ ಜಾರಕಿಹೊಳಿಗೆ ಸೆಡ್ಡು ಹೊಡೆದು ಸಹೋದರನನ್ನು ಗೆಲ್ಲಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್​!

    ಬೆಳಗಾವಿ: ವಿಧಾನ ಪರಿಷತ್​ ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಹಾಗೂ ಹೈವೋಲ್ಟೇಜ್​ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದ ಬೆಳಗಾವಿ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಯ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ 3718 ಮತ ಪಡೆದು ಮೊದಲ ಪ್ರಾಶಸ್ತ್ಯದಲ್ಲೇ ಗೆದ್ದು ಬೀಗಿದ್ದಾರೆ.

    ಮತ ಎಣಿಕೆ ಆರಂಭದಲ್ಲೇ ಬೆಳಗ್ಗೆಯಿಂದ ದೇವಸ್ಥಾನ ಮತ್ತು ಪೂಜೆಯಲ್ಲಿ ತೊಡಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಸಹೋದರನ ಗೆಲುವಿನ ಸುದ್ದಿ ಕೇಳುತ್ತಿದ್ದಂತೆ ಒಂದು ಲೋಟ ಹಾಲು‌ ಕುಡಿದು ಸಿಹಿ ತಿಂದು ಸಂಭ್ರಮಿಸಿದರು. ಬಳಿಕ ಪಕ್ಷದ ಕಚೇರಿಗೆ ಆಗಮಿಸಿ ಸತೀಶ್​ ಜಾರಕಿಹೊಳಿ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.

    ರಮೇಶ್​ ಜಾರಕಿಹೊಳಿಗೆ ಸೆಡ್ಡು ಹೊಡೆದು ತನ್ನ ಸಹೋದರನನ್ನು ಗೆಲ್ಲಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್, ಈ ಗೆಲುವು ಕಾಂಗ್ರೆಸ್​ ಕಾರ್ಯಕರ್ತರಿಗೆ ಸೇರಿದ್ದು. ಆಡಳಿತ ಪಕ್ಷದವರು ಏನು ಬೇಕಾದ್ರೂ ಹೇಳಬಹುದು. ಅಂತಿಮವಾಗಿ ಜನರ, ದೇವರ ತೀರ್ಮಾನವೇ ನಡೆಯೋದು. ಈಗ ಚುನಾವಣೆ ಗೆದ್ದಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೇ ಗೆಲುವು ಲಭಿಸಿದೆ. ಈ ಗೆಲುವಿನಲ್ಲಿ ಕಾಣದ ಕೈಗಳೂ ಇವೆ. ಅವರಿಗೆಲ್ಲ ಧನ್ಯವಾದ ಸಲ್ಲಿಸುವೆ ಎಂದರು.

    ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ 2454 ಮತ ಪಡೆದರೆ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳನ್ನು ಪಡೆದಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಈ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಸಂಜೆ ವೇಳೆಗೆ ನಿರ್ಧಾರ ಆಗಿಲಿದೆ.

    ಷಡ್ಯಂತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದಂತೆ ನನ್ನನ್ನೂ ಸೋಲಿಸಿದ್ರು: ಅಪ್ಪಾಜಿಗೌಡ

    ಮಾರ್ಗಮಧ್ಯೆ ಕಾರಲ್ಲಿ ಯುವತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಗಂಡ! ಆ ದಿನ ಗಂಡ, ಹೆಂಡತಿ, ಅವಳು…

    ಬೆಂಗಳೂರಲ್ಲಿ ಸಾವಿರ ಕೋಟಿ ಒಡೆಯ ಕೆಜಿಎಫ್​ ಬಾಬುಗೆ ಸೋಲು! ಪರಿಷತ್​ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts