ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಕಡೂರು: ತವರಿಂದ ಗಂಡನ ಮನೆಗೆ ಹೊರಟ ಮಹಿಳೆ ಯಗಟಿಪುರದ ಚೆಕ್​ಡ್ಯಾಂ ಬಳಿ ವೇದಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಶವ ಸಿಕ್ಕ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿ ಮತ್ತು ಧರ್ಮಸ್ಥಳದ ಪ್ರಸಾದದ ಬ್ಯಾಗಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಒಂದು ದಿನದ ಅಂತರದಲ್ಲಿ ಪರಪುರಷನ ಶವದ ಜತೆಗೆ ಭಯಾನಕ ರಹಸ್ಯ ಬಯಲಾಗಿದೆ.

ಬೆಂಗಳೂರಿನ ಕರಿಓಬನಹಳ್ಳಿ ನಿವಾಸಿ ಕೆ.ಎಂ.ಲೋಕೇಶ್​ ಎಂಬುವರ ಪತ್ನಿ ಲತಾ(36) ಮತ್ತು ಲೋಕೇಶ್​ ಜತೆ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀಕಾಂತ್​(31) ಮೃತರು. ಲೋಕೇಶ್​ ಮತ್ತು ಲತಾ 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 13 ವರ್ಷದ ಮಗಳಿದ್ದಾಳೆ. ಲೋಕೇಶ್​ ಪ್ಲಂಬಿಂಗ್​ ಗುತ್ತಿಗೆದಾರನಾಗಿದ್ದು, ಇವರ ಜತೆ ಲಕ್ಷ್ಮೀಕಾಂತ್​ ಕೆಲಸ ಮಾಡುತ್ತಿದ್ದ. ಅಲ್ಲದೆ ಲೋಕೇಶ್​ ಮನೆಯಲ್ಲೇ 4 ವರ್ಷದಿಂದ ಲಕ್ಷ್ಮೀಕಾಂತ್​ ವಾಸವಿದ್ದ.

ಕೆಲಸದ ಜತೆಗೆ ಆಶ್ರಯಕೊಟ್ಟ ಮಾಲೀಕನ ಪತ್ನಿ ಜತೆ ಸಲುಗೆ ಬೆಳೆಸಿಕೊಂಡ ಲಕ್ಷ್ಮೀಕಾಂತ್​, ಅಕ್ರಮ ಸಂಬಂಧಕ್ಕೂ ದಾರಿ ಮಾಡಿಕೊಂಡಿದ್ದ. ಇತ್ತೀಚಿಗೆ ಇವರಿಬ್ಬರ ಅಕ್ರಮ ಸಂಬಂಧ ಲೋಕೇಶ್​ಗೆ ತಿಳಿದಿದ್ದು, ಮನಯಲ್ಲಿ ಜಗಳವಾಗಿತ್ತು. ನಂತರ ತವರು ಮನೆ ಭಾಗಮಂಡಲಕ್ಕೆ ಲತಾ ಜ.28ರಂದು ತೆರಳಿದ್ದಳು. ಮನೆಯಲ್ಲಿ ನಡೆದ ಘಟನೆ ಬಗ್ಗೆ ಪ್ರಿಯಕರ ಲಕ್ಷ್ಮೀಕಾಂತ್​ಗೆ ಫೋನ್​ನಲ್ಲಿ ತಿಳಿಸಿದ್ದಳು.

ಲತಾ ಫೆ.7ರಂದು ವಾಪಸ್​ ಗಂಡನ ಮನೆಗೆ ಹೋಗುತ್ತೇನೆಂದು ತವರು ಮನೆಯಿಂದ ಹೊರಟವಳು ಬೆಂಗಳೂರಿಗೆ ಹೋಗದೆ ಧರ್ಮಸ್ಥಳಕ್ಕೆ ತೆರಳಿದ್ದು, ಅಲ್ಲಿ ಲಕ್ಷ್ಮೀಕಾಂತ್​ ಭೇಟಿಯಾಗಿದ್ದಾನೆ. ಇಬ್ಬರೂ ದೇವರ ದರ್ಶನ ಪಡೆದು ಕಡೂರು ಮಾರ್ಗವಾಗಿ ಬೆಲಗೂರಿಗೆ ಹೊರಟ್ಟಿದ್ದರು. ಆದರೆ ಇಬ್ಬರೂ ಹೆದರಿ ಫೆ.8ರ ರಾತ್ರಿ ಯಗಟಿಪುರದ ಬಳಿಯ ವೇದಾ ಚೆಕ್​ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆ.9ರಂದು ಲತಾಳ ಶವ ನದಿ ನೀರಲ್ಲಿ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಗಮನಿಸಿ ಯಗಟಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಪಿಎಸ್​ಐ ಶಶಿಕುಮಾರ್​ ಮತ್ತು ಸಿಬ್ಬಂದಿ ಶವ ತೆಗೆದರು. ಆ ಸ್ಥಳದಲ್ಲೇ ಪುರುಷನ ಪಾದರಕ್ಷೆ ಮತ್ತು ಧರ್ಮಸ್ಥಳದ ಪ್ರಸಾದ ಬ್ಯಾಗ್​ಗಳು ಪತ್ತೆಯಾಗಿದ್ದವು. ಹಾಗಾಗಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ ಪೊಲೀಸರು ಬುಧವಾರವೇ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿದರೂ ಮತ್ತೊಂದು ಶವ ಪತ್ತೆಯಾಗಿರಲಿಲ್ಲ. ಇದು ಮತ್ತಷ್ಟು ಅನುಮಾನ ಹುಟ್ಟುಹಾಕಿತ್ತು.

ಕೊನೆಗೆ ಮಲ್ಪೆಯ ತಜ್ಞ ಈಜುಗಾರರನ್ನು ಕರೆಸಿ ಗುರುವಾರ ಪರಿಶೀಲಿಸಿದಾಗ ನೀರಿನಡಿಯ ರಾಡ್​ಗೆ ಸಿಲುಕಿದ್ದ ಲಕ್ಷ್ಮೀಕಾಂತ್​ನ ಶವ ಪತ್ತೆಯಾಗಿದೆ. ಶವ ರಾಡ್​ಗೆ ಸಿಕ್ಕಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಗೋಚರಿಸಿರಲಿಲ್ಲ. ಎರಡೂ ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಹಾವೇರಿಯಲ್ಲಿ ಭೀಕರ ಅಪಘಾತ: ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು, ಕಾರಲ್ಲಿದ್ದ ಶಿಕ್ಷಕ ದುರ್ಮರಣ

ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

ನಗ್ನಚಿತ್ರ ನೋಡುವ ಗೀಳು… ಪ್ರೇಯಸಿಯ ತಾಯಿ ಮೊಬೈಲ್​ಗೆ ವಿಡಿಯೋ ಕಳಿಸಿ ಆತ ಕೊಟ್ಟ ಕಾಟ ಅಷ್ಟಿಷ್ಟಲ್ಲ

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…