More

    ಟ್ಯೂಷನ್​ ಹೇಳಿಕೊಡುವ ನೆಪದಲ್ಲಿ ರೇಪ್​ ಮಾಡ್ತಿದ್ದ; 3 ತಿಂಗಳು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತೆ

    ವಡೋದರಾ: ಟ್ಯೂಷನ್​ ಹೇಳಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಮೂರು ತಿಂಗಳ ಕಾಲ ಸತತವಾಗಿ ಅತ್ಯಾಚಾರವೆಸಗಿರುವ ಘಟನೆ ಗುಜರಾತ್​ನ ವಡೋದರಾದಲ್ಲಿ ನಡೆದಿದೆ. ಎರಡು ವರ್ಷದ ಹಿಂದಿನ ಪ್ರಕರಣದ ತೀರ್ಪು ಇದೀಗ ಬಂದಿದ್ದು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಇದನ್ನೂ ಓದಿ: ಮತ್ತೆ ಶುರುವಾದ ಖಾತೆ ಕ್ಯಾತೆ: ಸಂಪುಟ ಸಭೆಗೂ ಬರದ ಸಚಿವರು; ಸ್ಫೋಟಿಸುವುದೇ ಭಿನ್ನಮತ?

    ವಿನು ಕಟಾರಿಯಾ ಇದೀಗ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತ ತನ್ನ ಮನೆಯಲ್ಲೇ ಟ್ಯೂಷನ್​ ಹೇಳಿಕೊಡುವುದಾಗಿ 16 ವರ್ಷದ ಬಾಲಕಿಯನ್ನು 2018ರಲ್ಲಿ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಾಲಕಿಯನ್ನು ರೇಪ್​ ಮಾಡಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದ. ಜನವರಿಯಿಂದ ಮಾರ್ಚ್​ ತಿಂಗಳಲ್ಲಿ ಅಹಮದಾಬಾದ್, ಸೂರತ್​​ ಮತ್ತು ಪಾದ್ರಾ ನಗರಗಳ ಹೋಟೆಲ್​ಗಳಿಗೆ ಬಾಲಕಿಯನ್ನು ಕರೆಸಿಕೊಂಡು ರೇಪ್​ ಮಾಡಿದ್ದಾನೆ. ನೀನು ಬರದೇ ಇದ್ದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ಹೆದರಿದ ಬಾಲಕಿ ಆತ ಹೇಳಿದಂತೆ ಮಾಡಿದ್ದಾಳೆ.

    ಇದನ್ನೂ ಓದಿ: ಅಪ್ಪ ಅಮ್ಮನನ್ನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟ ಕ್ರೂರಿ ಮಗ-ಸೊಸೆ; ಹಸಿವಿನಿಂದ ತಂದೆ ಸಾವು

    ಇದೀಗ ನ್ಯಾಯಾಲಯದ ಎದುರು ಆರೋಪಿಯ ವಿರುದ್ಧದ ಎಲ್ಲ ಸಾಕ್ಷಿ ಮಂಡಿಸಲಾಗಿದೆ. ಅಪರಾಧ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. (ಏಜೆನ್ಸೀಸ್​)

    ಅಂಗಡಿಯಿಂದ ಬರಲು ತಡವಾದುದಕ್ಕೆ ಮಗನನ್ನು ಬೆಂಕಿಹಚ್ಚಿ ಕೊಂದ ಪಾಪಿ ತಂದೆ!

    ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts