More

    ಕಣ್ಣೂರು-ಬೆಂಗಳೂರು ಎಕ್ಸ್​ಪ್ರೆಸ್​ ರೈಲು ಅಪಘಾತ: ಹಳಿತಪ್ಪಿದ 5 ಬೋಗಿ, ಅಪಾಯದಿಂದ ಪ್ರಯಾಣಿಕರು ಪಾರು

    ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್​ಪ್ರೆಸ್​ ರೈಲು(Train No. 07390 Kannur- Bengaluru Express) ಮಾರ್ಗಮಧ್ಯೆ ಹಳಿ ತಪ್ಪಿದ್ದು, ಕೆಲಕಾಲ ಆತಂಕ ಮೂಡಿಸಿತ್ತು. ಗುರುವಾರ ಸಂಜೆ 6.05ರ ಸುಮಾರಿಗೆ ಕಣ್ಣೂರಿನಿಂದ ಬೆಂಗಳೂರಿಗೆ ಈ ರೈಲು ಹೊರಟಿತ್ತು, ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಬೆಂಗಳೂರು ರೈಲ್ವೆ ವ್ಯಾಪ್ತಿಯ ತೊಪ್ಪೂರು-ಶಿವಾಡಿ ಮಾರ್ಗದಲ್ಲಿ ಈ ರೈಲು ಬರುತ್ತಿತ್ತು. ಈ ವೇಳೆ ರೈಲ್ವೆ ಹಳಿಯ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲಿನ 5 ಬೋಗಿಗಳು ಹಳಿತಪ್ಪಿದವು.

    ಅದೃಷ್ಟವಶಾತ್​ ಪ್ರಾಣಹಾನಿ ಸಂಭವಿಸಿಲ್ಲ. ರೈಲಿನಲ್ಲಿದ್ದ 2,348 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತೊಪ್ಪೂರಿನಿಂದ ವಿವಿಧ ಕಡೆಗೆ 15 ಬಸ್​ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಗಕರು ತಲುಪಬೇಕಿದ್ದ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.

    ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

    ತೆಪ್ಪೂರು-ಶಿವಾಡಿ ಮಾರ್ಗವಾಗಿ ಸಂಚರಿಸಲಿದ್ದ ರೈಲುಗಳ ಓಡಾಟದಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ. ಕೆಎಸ್​ಆರ್​ ಬೆಂಗಳೂರು-ಎರ್ನಾಕುಲಂ ಸೂಪರ್​ ಫಾಸ್ಟ್​ ಬೈಯಪ್ಪಹಳ್ಳಿ, ಬಂಗಾರಪೇಟೆ ಮತ್ತು ತಿರುಪತ್ತೂರ್​ ಮೂಲಕ ಸಂಚರಿಸಲಿವೆ.

    ಮದ್ವೆಗೂ ಮುನ್ನ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ, ಈಗ ಹಿಂಸಿಸುತ್ತಿದ್ದಾನೆ… ಕಿರುತೆರೆ ನಟಿ ದೂರು

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ಮಗು ಅಪಹರಣ ಕೇಸ್​: ತನಿಖೆಗೆ ಹೆದರಿ ವಿಷ ಕುಡಿದ ಒಂದೇ ಕುಟುಂಬದ ಐವರಲ್ಲಿ ಒಬ್ಬರೂ ಬದುಕಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts