More

    ಎಚ್ಚೆತ್ತುಕೊಳ್ಳದ ಖಾಸಗಿ ಬಸ್​​: ಅಪಾಯ ಲೆಕ್ಕಿಸದೇ ಬಸ್​​ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

    ಚಿಕ್ಕಬಳ್ಳಾಪುರ: ಇದೇ ವರ್ಷದ ಆರಂಭದಲ್ಲಿ ಪಾವಗಡದಲ್ಲಿ ಸಂಬವಿಸಿದ ಬಸ್​ ದುರಂತದ ಬಳಿಕವೂ ಖಾಸಗಿ ಬಸ್​​ಗಳು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ.

    ಈ ನಡುವೆ ಜಿಲ್ಲಾಡಳಿತ ಕೂಡ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್​​ನಲ್ಲಿ ಸಂಚಸಿರುವಂತಿಲ್ಲ ಎಂಬ ಆದೇಶವನ್ನೂ ನೀಡಿದೆ. ಜಿಲ್ಲಾಡಳಿತದ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಖಾಸಗಿ ಬಸ್​​ಗಳು ಮಾತ್ರ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿವೆ.

    ಎಚ್ಚೆತ್ತುಕೊಳ್ಳದ ಖಾಸಗಿ ಬಸ್​​: ಅಪಾಯ ಲೆಕ್ಕಿಸದೇ ಬಸ್​​ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಖಾಸಗಿ ಬಸ್​ ಟಾಪ್​ ಮೇಲೆ ಕುಳಿತು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರಯಾಣ ಮಾಡುತ್ತಿದ್ದಾರೆ. ಖಾಸಗಿ ಬಸ್​ ಕೂಡ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿವೆ. ಸ್ವಲ್ಪ ಆಯಾತಪ್ಪಿದರೂ ಭಾರೀ ದುರಂತವೇ ಸಂಭವಿಸುವ ಸಾಧ್ಯತೆ ಇದೆ.

    ಇತ್ತ ಸರ್ಕಾರಿ ಬಸ್ ಗಳ ಕೊರತೆಯಿಂದ ವಿಧಿಯಿಲ್ಲದೇ ವಿದ್ಯಾರ್ಥಿಗಳು ಟಾಪ್​​​ನಲ್ಲಿ ಪ್ರಯಾಣ ಮಾಡಬೇಕಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್​ಗಳು ಬರುವುದೇ ವಿರಳ. ಇದನ್ನೇ ಲಾಭ ಮಾಡಿಕೊಂಡಿರುವ ಖಾಸಗಿ ಬಸ್​​ಗಳು ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಿವೆ. ಇತ್ತ ಆರ್​ಟಿಓ ಅಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸಬೇಕಿದೆ. (ದಿಗ್ವಿಜಯ ನ್ಯೂಸ್​)

    ಪಾವಗಡದ ಪಳವಳ್ಳಿ ಕಟ್ಟೆ ಬಸ್ ಅಪಘಾತ ಪ್ರಕರಣ: ಮೃತರ ಸಂಖ್ಯೆ 7ಕ್ಕೇ ಏರಿಕೆ, ಪಿಯು ವಿದ್ಯಾರ್ಥಿ ಸಾವು

    ಸರ್ಜರಿಯಿಂದ ಬ್ರೆಜಿಲ್​ನ ಮಾಡೆಲ್​​ ಸಾವು: 27ನೇ ವಯಸ್ಸಿಗೆ ಬದುಕಿಗೆ ವಿದಾಯ ಹೇಳಿದ ಚೆಲುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts