More

    ಕೂಡಲೇ ಬಸ್‌ ಸೇವೆ ಆರಂಭಿಸಿ; ಮುಷ್ಕರನಿರತ ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ

    ಬೆಂಗಳೂರು: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮುಷ್ಕರ ಹೂಡುವುದು ಸರಿಯಲ್ಲ, ಅದರಿಂದ ಸಾರ್ವಜನಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೂಡಲೇ ಸೇವೆ ಆರಂಭಿಸುವಂತೆ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೂಚಿಸಿದೆ.

    ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

    ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸಾರಿಗೆ ನೌಕರರ ಮುಷ್ಕರವನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದ್ದು, ಕಾರ್ಮಿಕ ನ್ಯಾಯಾಲಯದಲ್ಲಿ ಈ ಸಂಬಂಧ ದಾವೆ ಹೂಡಲಾಗಿದೆ. ನೌಕರರ ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಆದರೆ, ಅವರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

    ಬಸ್ ಸೇವೆಗಳ ವ್ಯತ್ಯಯದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸದ್ಯ ಶೇ.44 ಬಸ್​ ಮಾತ್ರ ಸಂಚಾರ ನಡೆಸಿವೆ. ಕೋವಿಡ್‌ನಿಂದ ಈಗಾಗಲೇ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಲಸಿಕೆ ಕೇಂದ್ರಗಳಿಗೂ ಜನ ತೆರಳಲು ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಜನರ ಕೈಗೆಟುಕುವ ದರದ ಸರ್ಕಾರಿ ಬಸ್‌ಗಳ ಸೇವೆ ಅಗತ್ಯವಿದೆ. ಮುಷ್ಕರ ಹೂಡುವುದಕ್ಕೆ ಇದು ಸೂಕ್ತ ಕಾಲವಲ್ಲ. ಮುಷ್ಕರದಿಂದ ಜನಸಾಮಾನ್ಯರ ಮೂಲಭೂತ ಹಕ್ಕಿಗೆ ದಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಮುಷ್ಕರ ನಿರತ ನೌಕರರು ತಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಬೇಕು ಎಂದು ಸೂಚಿಸಿತು.

    ಅಂತಿಮವಾಗಿ ಪಿಐಎಲ್‌ಗಳ ಸಂಬಂಧ ಕೆಎಸ್‌ಆರ್‌ಟಿಸಿ, ಎನ್‌ಇಕೆ‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಬಿಎಂಟಿಸಿ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠ, ಏ.22ರ ಬೆಳಗ್ಗೆ 11.40ಕ್ಕೆ ವಿಚಾರಣೆ ನಿಗದಿಪಡಿಸಿತು.

    ಪ್ರತಿಭಟನಾನಿರತ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದ ಪೊಲೀಸರು

    ಆಸ್ಪತ್ರೆ ಬಾಗಿಲಲ್ಲಿ ಕೂತರೂ ಚಿಕಿತ್ಸೆ ಸಿಗಲಿಲ್ಲ, ಹೆಂಡತಿ-ಮಗನ ಕಣ್ಣೆದುರಲ್ಲೇ ನರಳಾಡಿ ಪ್ರಾಣಬಿಟ್ಟ ಕರೊನಾ ಸೋಂಕಿತ!

    ಯುಗಾದಿ ಹಬ್ಬಕ್ಕೆ ತವರು ಮನೆಗೆ ಬಂದ ಮಗಳು-ಅಳಿಯನ ಬದುಕಲ್ಲಿ ದುರಂತ! ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts