More

    ಕೋವಿಡ್ ಬಂದಿದ್ದು ಹೇಗೆ? ಕಳಿಸೋದು ಹೇಗೆ?

    ಕರೊನಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಹಲವರು ಕಳೆದ ಎರಡು ತಿಂಗಳುಗಳಿಂದ ತಮ್ಮದೇ ರೀತಿಯಲ್ಲಿ ಹಾಡುಗಳನ್ನು, ಕಿರುಚಿತ್ರಗಳನ್ನು ಮಾಡುತ್ತಲೇ ಇದ್ದಾರೆ. ಮನೆಯಲ್ಲೇ ಇದ್ದು, ಜನರಿಗೆ ಜಾಗೃತಿ ಮೂಡಿಸುವುದರ ಜತೆಗೆ, ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

    ಇದನ್ನೂ ಓದಿ: ಜೆನಿಲಿಯಾ ಡಿಸೋಜಾ ಬಗ್ಗೆ ಈ ಸುದ್ದಿ ಕೇಳಿದಿರಾ?

    ಕನ್ನಡ ಚಿತ್ರರಂಗದ ಜನಪ್ರಿಯ ಸಿನಿಮಾ ಪ್ರಚಾರ ಸಂಸ್ಥೆಯಾದ ಶ್ರೀ ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ಅವರ ಮಗ ಪವನ್ ಸಹ, ತಮ್ಮದೇ ತಂಡ ಕಟ್ಟಿಕೊಂಡು ‘ಕರೊನಾ – ಕರಾಳ ರೋಗ ನಾಶ’ ಎಂಬ ನಾಲ್ಕು ನಿಮಿಷದ ಕಿರುಚಿತ್ರವನ್ನು ಮಾಡಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

    ‘ಕರೊನಾ – ಕರಾಳ ರೋಗ ನಾಶ’ ಕಿರುಚಿತ್ರವು ಕೋವಿಡ್-19ರ ವಿವಿಧ ಮಜಲುಗಳನ್ನು ಸೆರೆಹಿಡಿಯಲಾಗಿದೆ. ಈ ಕಿರುಚಿತ್ರವನ್ನು ಒಂದೇ ಕೋಣೆಯಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಕೊರೋನಾ ತಡೆಯುವುದು ಹೇಗೆ ಎನ್ನುವ ವಿವರ ಇದರಲ್ಲಿದ್ದು, ತಾತ ಮತ್ತು ಮೊಮ್ಮೊಗನ ಪಾತ್ರಗಳ ಮೂಲಕ ಅದು ಅನಾವರಣಗೊಂಡಿದೆ. ತಾತ ಮತ್ತು ಮೊಮ್ಮಗನ ನಡುವಿನ ಸಂಭಾಷಣೆ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಿರುಚಿತ್ರವನ್ನು ನೋಡಿದರೆ ಕೊರೋನಾ ಹರಡಲು ಕಾರಣ ಮತ್ತು ಅದನ್ನು ನಿಯಂತ್ರಿಸುವ ವಿಧಾನ ಎರಡೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

    ಇದನ್ನೂ ಓದಿ: ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ಯಾಕೆ ಬೇಸರ?

    ಪವನ್ ಈ ಕಿರುಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ತಾತನ ಪಾತ್ರದಲ್ಲಿ ಜಯಸಿಂಹ ಕಾಣಿಸಿಕೊಂಡರೆ, ಮೊಮ್ಮಗನ ಪಾತ್ರದಲ್ಲಿ ಸುಧೀಂದ್ರ (ಖ್ಯಾತ ಪಚಾರಕರ್ತ ಡಿ.ವಿ. ಸುಧೀಂದ್ರ ಅವರ ಮೊಮ್ಮಗ) ನಟಿಸಿದ್ದಾನೆ. ಇನ್ನು ಮನೋಜ್ ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಅರುಣ್ ಛಾಯಾಗ್ರಹಣ ಮಾಡಿದ್ದಾರೆ.

    ದರ್ಶನ್​ ಅಭಿಮಾನಿಗಳಿಗೆ ಸಿಗ್ತು ಹೊಸ ಗಿಫ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts