More

    ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ.. ಕೋವಿಡ್ ಕೇರ್ ಸೆಂಟರ್ ಮಾಡ್ರಿ… ಕೈ ಮುಗಿತೀವಿ

    ಹುಬ್ಬಳ್ಳಿ: ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ. ಕೋವಿಡ್ ಕೇರ್ ಸೆಂಟರ್ ಮಾಡ್ರಿಪಾ…

    ಸಾರ್ವಜನಿಕರಿಂದ ಹೀಗೊಂದು ಭಿನ್ನಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಗರದಲ್ಲಿ 4 ಅಂತಸ್ತಿನ ಸಿಬಿಟಿ ಕಟ್ಟಡವನ್ನು ನಿರ್ವಿುಸಲಾಗಿದೆ. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

    ಈಗೀಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ 7 ಸರ್ಕಾರಿ ಹಾಗೂ 30 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಕಾಡಲಾರಂಭಿಸಿದೆ. ಇಂತಹ ದೊಡ್ಡ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದರಿಂದ ರೋಗಿಗಳ ಆರೈಕೆ ಸುಗಮವಾಗಿ ನಡೆಯಲಿದೆ. ಅಲ್ಲದೆ ಕಟ್ಟಡವೂ ಬಳಕೆಯಾಗಲಿದೆ. ಇಲ್ಲವಾದರೆ, ಇದ್ದ ಕಟ್ಟಡವೂ ನಿರ್ವಹಣೆ ಕೊರತೆಯಿಂದ ಮತ್ತಷ್ಟು ಹಾಳಾಗಲಿದೆ ಎಂಬುದು ಸಾರ್ವಜನಿಕರ ಆಕ್ರೋಶ.

    ಬೆಡ್​ಗಳಿಲ್ಲದೆ ಜನರು ಬೀದಿಗೆ ಬೀಳುವ ಮುನ್ನ ಸಚಿವ ಜಗದೀಶ ಶೆಟ್ಟರ್ ಅವರು ಎಚ್ಚೆತ್ತುಕೊಳ್ಳಬೇಕು. ಇಂತಹ ಕಟ್ಟಡ ಬಳಕೆಗೆ ಶೀಘ್ರವೇ ಆದೇಶ ಮಾಡಬೇಕು. ಇಲ್ಲವಾದರೆ ನಿಮ್ಮ ಆಡಳಿತ ದುರಾವಸ್ಥೆಗೆ ಹಿಡಿದ ಕೈಗನ್ನಡಿಯಾಗಲಿದೆ ಎಂದು ಸಾರ್ವಜನಿಕರು ಸಿಟ್ಟು ಹೊರಹಾಕಿದ್ದಾರೆ.

    VIDEO| ಕಾರಿನ ಮುಂದೆ ‘ಕೋವಿಡ್ ಡ್ಯೂಟಿ’ ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!

    ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

    ಲಾಕ್​ಡೌನ್ ಇದ್ರೂ ಕಾಲೇಜು ಓಪನ್! ಒಳಗೆ ಲೆಕ್ಚರರ್​ನ ಬಿಟ್ಟು ಗೇಟ್​ ಮುಂದೆ ನಿಂತ ಪ್ರಿನ್ಸಿಪಾಲ್​

    ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts