More

    ರೋಹಿಣಿ ಸಿಂಧೂರಿ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ… ಎಳೆಎಳೆಯಾಗಿ ಬಿಚ್ಚಿಟ್ಟ ಶಿಲ್ಪಾನಾಗ್​

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್​ ಅವರು ಐಎಎಸ್​ ಹುದ್ದೆಗೇ ರಾಜೀನಾಮೆ ಕೊಡುವ ಮೂಲಕ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.

    ಸಿಂಧೂರಿಗೆ ನಡೆಗೆ ಬೇಸತ್ತು ಐಎಎಸ್ ಅಧಿಕಾರಿ ಶಿಲ್ಪಾನಾಗ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸುದೀರ್ಘ ರಾಜೀನಾಮೆ ಪತ್ರ ಬರೆದಿದ್ದಾರೆ. ಬಳಿಕ ಗುರುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಲ್ಪಾನಾಗ್, ರೋಹಿಣಿ ಸಿಂಧೂರಿ ಕೊಟ್ಟ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಅವರೂ ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಐಎಎಸ್ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ? ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ದುರಹಂಕಾರ, ಹೀಗೋದಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಯಾಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು 2014ನೇ ಬ್ಯಾಚ್ ಅಧಿಕಾರಿ. ಅವರು 2009ನೇ ಬ್ಯಾಚ್ ಅಧಿಕಾರಿ. ವೈಯಕ್ತಿಕ ದ್ವೇಷ ಇದ್ದರೆ ನನ್ನ ಮೇಲೆ ಸಾಧಿಸಲಿ. ಅದನ್ನು ಬಿಟ್ಟು ಮೈಸೂರು ಜನರಿಗೆ ತೊಂದರೆ ಕೊಡುವುದು ಬೇಡ. ನನಗೆ ನಿರಂತರವಾಗಿ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟುದಿನ ನಗರದಲ್ಲಿ ಎಲ್ಲರೊಂದಿಗೆ ಸೇರಿ ಒಳ್ಳೆಯ ಕೆಲಸ ಮಾಡಿದ್ದೇನೆ. ಅದಕ್ಕೆ ಜಿಲ್ಲಾಧಿಕಾರಿ ಎಳ್ಳುನೀರು ಬಿಟ್ಟಿದ್ದಾರೆ. ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಶಿಲ್ಪಾನಾಗ್​ ಭಾವುಕರಾದರು. ಇದನ್ನೂ ಓದಿರಿ ಕೋವಿಡ್ ಆಸ್ಪತ್ರೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು! ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕೋದು ಗ್ಯಾರಂಟಿ

    ಒಬ್ಬರ ದುರಾಹಂಕಾರಕ್ಕೆ ಮೈಸೂರು ನಗರ ಬಲಿಯಾಗಬಾರದು. ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಜಿಲ್ಲೆ ಬಿಟ್ಟು ತೊಲಗಿ. ನೀವು ಜಿಲ್ಲಾಧಿಕಾರಿಯಾಗಲು ಲಾಯಕ್ಕಿಲ್ಲ, ಇಲ್ಲಿಂದ ತೊಲಗಿ ಎಂದು ಯಾರಾದರು ಹೇಳಬೇಕಾಗಿತ್ತು. ಆ ಕೆಲಸವನ್ನು ನಾನು ಇಂದು ಮಾಡಿದ್ದೇನೆ. ಜಿಲ್ಲೆಯಲ್ಲಿ ಕೆಲಸ ಮಾಡಲು ವಾತಾವರಣ ಇಲ್ಲ. ಸೋಲನ್ನು ಒಪ್ಪಿ ರಾಜೀನಾಮೆ ನೀಡುತ್ತಿಲ್ಲ. ಇದು ನನ್ನ ಪ್ರತಿಭಟನೆ. ಆ ಕೆಲಸವನ್ನು ನಾನು ಇದೀಗ ಮಾಡಿದ್ದೇನೆ. ಇದು ನೈತಿಕ ನಿಲುವು, ಹೆದರಿಕೊಂಡು ತೆಗೆದುಕೊಂಡ ನಿಲುವು ಅಲ್ಲ ಎಂದು ಶಿಲ್ಪಾನಾಗ್​ ಹೇಳಿದರು.
    ಮೈಸೂರು ನಗರಕ್ಕೆ ನನಗೆ ತುಂಬಾ ಇಷ್ಟ. ಆದರೆ, ಕೆಲಸ ಮಾಡಲುವಾಗದ ಪರಿಸ್ಥಿತಿ ನಿರ್ಮಾಣವಾಯಿತು. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮದು ಕೂಡ ಪ್ರತ್ಯೇಕವಾದ ಸಂಸ್ಥೆ. ನಾನು ಕನ್ನಡದವಳಾದರೂ ನಾನು ಇಂಥದ್ದೇ ಜಾಗದಲ್ಲಿ ಪೋಸ್ಟಿಂಗ್ ಬೇಕೆಂದು ಎಲ್ಲೂ ಕೇಳಲಿಲ್ಲ. ಅವರು ನನ್ನ ಮೇಲೆ ಹಠ, ಹಗೆತನ ಏತಕ್ಕೆ ಸಾಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಷ್ಟೊಂದು ತಾಳ್ಮೆ, ಸೌಮ್ಯವಾಗಿ ಇರುವ ನನಗೆ ಸಹಿಸಿಕೊಳ್ಳೆಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಅಂದರೆ ಕಿರುಕುಳ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀನು, ಹೋಗು ಬಾ ಅಂತ ಅಧಿಕಾರಿಗಳನ್ನು ಏಕವಚನದಲ್ಲಿ ಕೇವಲವಾಗಿ ಮಾತಾಡಿಸುತ್ತಿದ್ದಾರೆ ಎಂದು ರೋಹಿಣಿ ವಿರುದ್ಧ ಶಿಲ್ಪಾನಾಗ್​ ಅಸಮಾಧಾನ ಹೊರಹಾಕಿದರು.

    ಮೈಸೂರು ನಗರದ ಬಹುತೇಕ ವಾರ್ಡ್​​ಗಳು ರೆಡ್ ಝೋನ್​ನಲ್ಲಿವೆ ಎಂದು ಮಾಧ್ಯಮದಲ್ಲಿ ಬಿಂಬಿಸಿ ಜನರಲ್ಲಿ ಭೀತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೇ 31ರ ವರದಿ ಪ್ರಕಾರ ಮೈಸೂರು ನಗರದಲ್ಲಿ ಎರಡು ವಾರ್ಡ್ ಮಾತ್ರ ಕೆಂಪು ವಲಯದಲ್ಲಿ ಇತ್ತು. ಆದರೆ, ದಿಢೀರಾಗಿ ಇಂದು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ಹೊಸ ಕೋವಿಡ್ ಮ್ಯಾಪ್ ನಲ್ಲಿ ಬಹುತೇಕ ಎಲ್ಲ ವಾರ್ಡ್ ಕೆಂಪು ವಲಯದಲ್ಲಿ ಇವೆ. ಆ ಮೂಲಕ ನಗರ ಪಾಲಿಕೆ ಏನೂ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿಲ್ಪಾನಾಗ್​ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿರಿ ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಪ್ರತಿನಿತ್ಯ ಸಂಜೆ 4.30 ರಿಂದ ರಾತ್ರಿ 7.30ವರೆಗೆ ಎಲ್ಲ ಅಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸುತ್ತಾರೆ. ಆ ಸಭೆಗೆ ಯಾವುದೇ ಅಜೆಂಡಾ ಸಹ ಇರುವುದಿಲ್ಲ. ಸಭೆಯಲ್ಲಿ ನಾನೇ ಸುಪ್ರಿಂ ಅನ್ನೋ ರೀತಿಯಲ್ಲಿ ಮಾತನಾಡುತ್ತಾರೆ. ಯಾವ ರೀತಿ ಸೋಂಕು ಕಡಿಮೆ ಮಾಡಬೇಕು ಹಾಗೂ ಸಾವಿನ ಪ್ರಮಾಣ ತಡೆಯಬೇಕೆಂಬ ಕುರಿತು ಅವರು ಯೋಜನೆಯನ್ನೇ ರೂಪಿಸುತ್ತಿಲ್ಲ ಎಂದು ಆರೋಪಿಸಿದ ಶಿಲ್ಪಾನಾಗ್​, ಜಿಲ್ಲಾಧಿಕಾರಿ ಅವರು ನಮ್ಮಿಂದ ದಿನನಿತ್ಯ ಅನಗತ್ಯ ವರದಿಗಳನ್ನು ಪಡೆದು ಅಧಿಕಾರಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ಮೈಸೂರು ನಗರ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದರೂ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಯಾವುದೇ ಜಿಲ್ಲೆಗೆ ಇಂಥ ರೀತಿಯ ಜಿಲ್ಲಾಧಿಕಾರಿ ಸಿಗಬಾರದು. ಜಿಲ್ಲಾಧಿಕಾರಿ ಅವರ ಕಿರುಕುಳದಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದರು.

    ರೋಹಿಣಿ ಸಿಂಧೂರಿ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ... ಎಳೆಎಳೆಯಾಗಿ ಬಿಚ್ಚಿಟ್ಟ ಶಿಲ್ಪಾನಾಗ್​ನಗರದಲ್ಲಿ ತೆರೆದಿರುವ ಕೋವಿಡ್ ಮಿತ್ರಕ್ಕೆ ಜಿಲ್ಲಾಡಳಿತದಿಂದ ಯಾವುದೇ ನೆರವು ದೊರೆತ್ತಿಲ್ಲ. ಹೀಗಿದ್ದರೂ ಸಿಎಸ್ ಆರ್ ನಿಧಿ, ನಗರ ಪಾಲಿಕೆ ಹಾಗೂ ಮುಡಾ ಅನುದಾನ ಬಳಕೆ ಮಾಡಿಕೊಂಡು ಕೋವಿಡ್ ಮಿತ್ರವನ್ನು ಮುನ್ನಡೆಸುತ್ತಿದ್ದೇವೆ. ಅದೇ ರೀತಿ ಟೆಲಿ ಮೆಡಿಷನ್ ಕೇಂದ್ರ ಉತ್ತಮವಾಗಿ ನಡೆಯುತ್ತಿದೆ. ಆದರೆ, ಇದೀಗ ಸಿಎಸ್ ಆರ್ ನಿಧಿ ಬಳಕೆಗೂ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮಗೆ ಸಿಎಸ್ ಆರ್ ನಿಧಿ ಬಳಕೆ ಮಾಡುವ ಅಧಿಕಾರವಿಲ್ಲ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲದೆ ನಗರ ಪಾಲಿಕೆಗೆ ಸಿಎಸ್ ಆರ್ ನಿಧಿ ನೀಬಾರದೆಂದು ಕಂಪನಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ನಾವು ಸಿಎಸ್ ಆರ್ ನಿಧಿ ಬಳಕೆ ಮಾಡಿಕೊಂಡು ಕೋವಿಡ್ ಮಿತ್ರಕ್ಕೆ 16 ಸಾವಿರ ಮೆಡಿಕಲ್ ಕಿಟ್ ಖರೀದಿಸಿದ್ದೇವೆ. ಜಿಲ್ಲಾಡಳಿತ ಈ ರೀತಿ ಅಸಹಕಾರ ತೋರಿದರೆ ಕೋವಿಡ್ ಮಿತ್ರವನ್ನು ನಡೆಸುವುದು ಹೇಗೆ ಎಂದು ಶಿಲ್ಪಾನಾಗ್ ಪ್ರಶ್ನಿಸಿದರು.

    ನಾನು ರಾಜೀನಾಮೆ ಕೊಟ್ಟು ಬೇರೆ ಜೀವನ ನಡೆಸುತ್ತೇನೆ‌. ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗೋದು ಬೇಡ ಅಂತ ಮಕ್ಕಳ ತಜ್ಞರನ್ನು ಒಳಗೊಂಡು ಕಾರ್ಯ ನಿರ್ವಹಣೆ ಮಾಡುತ್ತಿದ್ದೆವು‌. ನಿಮ್ಮ ದುರಂಹಕಾರ ಬಿಡದಿದ್ರೆ ಮೈಸೂರು ಬಿಟ್ಟು ತೊಲಗಿ, ನಾನು ಹೋದರೆ ಮೈಸೂರು ನಗರಕ್ಕೆ ಒಳ್ಳೆಯದು ಆಗುತ್ತದೆ ಅಂದ್ರೆ ಹೋಗುತ್ತೇನೆ. ಆವಾಗ್ಲಾದ್ರೂ ಮೈಸೂರು ನಗರ ಚೆನ್ನಾಗಿರಲಿ ಎಂದು ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.

    ನಾನೇ ಸುಪ್ರೀಂ ಅಂತ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡದೆ ಅಧಿಕಾರಿಗಳನ್ನು ಟಾರ್ಗೆಟ್ ಮಾಡ್ತಾರೆ. ಇಂದು ಕೋವಿಡ್ ಮಿತ್ರ ಪ್ರಧಾನ ಮಂತ್ರಿವರೆಗೂ ಹೋಗಿದೆ. ಯಾರದ್ದೋ ಕಾರ್ಯಕ್ರಮವನ್ನು ನನ್ನ ಕಾರ್ಯಕ್ರಮ ಅಂತ ಹೇಳುತ್ತಾರೆ. ಆದ್ರೆ ಕೋವಿಡ್ ಮಿತ್ರದಲ್ಲಿ ಯಾರು ಹೇಗೆ ಕೆಲಸ ಮಾಡುತ್ತಾರೆ, ಎಲ್ಲಿಂದ ಊಟ ಬರುತ್ತೆ ಅಂತ ಡಿಸಿಗೆ ಗೊತ್ತಿಲ್ಲ‌ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮಾತಿನಲ್ಲೇ ಶಿಲ್ಪಾನಾಗ್​ ಚಾಟಿ ಬೀಸಿದರು.

    ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

    ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

    ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

    ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ವಿದೇಶದಿಂದ ಬೀದರ್​ಗೆ ಬಂದ ಮಗನೂ ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts