More

    ಸಮುದ್ರದಲ್ಲಿ ಪತ್ತೆಯಾಯ್ತು ದೈತ್ಯ ಜೀವಿ, ಇದಕ್ಕೂ ಭೂಕಂಪಕ್ಕೂ ಇದೆ ಕನೆಕ್ಷನ್!​​ ಇಲ್ಲಿದೆ ವಿವರ

    ಚಿಲಿ: ಸಮುದ್ರದಲ್ಲಿ ಬಲೆ ಬೀಸಿದ ಮೀನುಗಾರರಿಗೆ ಅಚ್ಚರಿ​ ಕಾದಿತ್ತು, ಬಲೆಯನ್ನು ದಡಕ್ಕೆ ತಂದು ನೋಡಿದಾಗಲೇ ತಿಳಿದಿದ್ದು ದೈತ್ಯ ಜೀವಿಯೊಂದು ಬಲೆಗೆ ಬಿದ್ದಿರುವುದು. ಅಂದಹಾಗೆ ತೀರಅ ವಿರಳವಾಗಿರುವ ಈ ಜೀವಿಯು ಹಲವು ಅನಾಹುತಗಳಿಗೂ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.

    ಸದ್ಯ ಇದನ್ನು ಕ್ರೇನ್​ ಸಹಾಯದಿಂದ ಹೊರತೆಗೆಯಲಾಗಿದ್ದು, ಇದು ಬರೋಬ್ಬರಿ 16 ಅಡಿ ಉದ್ದವಿದೆ. ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಮೀನನ್ನು ನೋಡಿದ ಮೀನುಗಾರರೇ ಶಾಕ್​ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಅಂದಹಾಗೆ.. ಅಪರೂಪದಲ್ಲಿ ಅಪರೂಪವಾಗಿರುವ ಈ ಮೀನನ್ನು ಒರಾ​​ ಫಿಶ್​ ಎಂದೇ ಕರೆಯಲಾಗುತ್ತದೆ. ಇದು ಸಿಗುವುದು ತೀರಾ ವಿರಳ.

    ಅಷ್ಟು ಸುಲಭವಾಗಿ ಸಿಗದ ಈ ಮೀನು ಮೀನುಗಾರರಿಗೆ ಸಿಕ್ಕಿದೆ. ಸದ್ಯ ಸಿಕ್ಕಿರುವ ಈ ಮೀನಿಗೂ ಸಮುದ್ರದಲ್ಲಾಗುವ ಭೂಕಂಪಕ್ಕೂ ಸಂಪರ್ಕ ಇದೆಯಂತೆ. ಸಮುದ್ರದಲ್ಲಾಗುವ ಭೂಕಂಪನಗಳಿಗೆ ಇದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಓರಾ ಮೀನುಗಳು ಆಳವಾದ ಸಮುದ್ರದಲ್ಲಿ ಮಾತ್ರ ಕಂಡುಬರುತ್ತವೆ. ಬಹಳ ಅಪರೂಪವಾಗಿ ಕೆಲವು ಕಡಲ ತೀರಗಳಲ್ಲಿ ಸತ್ತಂತೆ ಕಂಡುಬರುತ್ತವೆ. ಆದರೆ ಅವು ಜೀವಂತವಾಗಿರುತ್ತವೆ. ಸಮುದ್ರ ಮಟ್ಟಕ್ಕಿಂತ ಸುಮಾರು 1640 ಅಡಿ ಆಳದಲ್ಲಿ ವಾಸಿಸುತ್ತವೆ. ಇವು ಏಕೆ ಅಷ್ಟು ಆಳದಲ್ಲಿರುತ್ತವೆ ಎಂಬುದು ನಿಗೂಢವಾಗಿದೆ. ಕಡಲತೀರಕ್ಕೆ ಇವು ಎರಡೇ ಕಾರಣಕ್ಕೆ ಒಂದು ಗಾಯಗೊಂಡು, ಇಲ್ಲ ಆಹಾರ ಅರಸಿ ಬರುತ್ತದೆ ಎಂದು ಹೇಳುತ್ತಾರೆ.

    ಇಷ್ಟು ಆಳದಲ್ಲಿ ಜೀವಿಸುವ ಇವು ಸಮುದ್ರದ ಕಂಪನಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಭೂಕಂಪ ಹಾಗೂ ಸುನಾಮಿಗಳನ್ನು ಇವುಗಳೇ ಸೃಷ್ಟಿಸುವಂತೆ ಮಾಡುತ್ತದೆ ಎಂದು ಇಲ್ಲಿನ ಜನರು ಹಿಂದಿನಿಂದಲೂ ನಂಬಿದ್ದಾರೆ ಆದರೆ ವಿಜ್ಞಾನದಿಂದ ಇದನ್ನೂ ದೃಢಪಡಿಸಲಾಗಿಲ್ಲ. (ಏಜೆನ್ಸೀಸ್​)

    ಮಕ್ಕಳು ಬೆಳಗ್ಗೆ 7 ಗಂಟೆಗೇ ಶಾಲೆಗೆ ಹೋಗುವುದಾದರೆ, ವಕೀಲರು, ನ್ಯಾಯಾಧೀಶರು ಏಕೆ ಬೇಗ ಬರಲು ಸಾಧ್ಯವಿಲ್ಲ: ನ್ಯಾ.ಲಲಿತ್​

    ಹಾರಾಟ ನಡೆಸಿದ ಕೆಲವೇ ಕ್ಷಣದಲ್ಲಿ ಅಲುಗಾಡಿತು ವಿಮಾನದ ಇಂಜಿನ್​, ಪೈಲೆಟ್​​ ಜಾಗರೂಕತೆಯಿಂದ ತಪ್ಪಿತು ಭಾರೀ ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts