More

    ಒತ್ತಡ ಸಹಿಸದೆ ಪುಸ್ತಕ ಕೊಡುವ ನೆಪದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಪುನೀತ್​! ಮೋದಿ ಮಾತಿಗೆ ಮುಗುಳ್ನಕ್ಕ ಅಪ್ಪು…

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರನ್ನು ರಾಜಕೀಯಕ್ಕೆ ಕರೆತರಲು ಬಿಜೆಪಿ ನಾಯಕರು ತುಂಬಾ ಪ್ರಯತ್ನ ಪಟ್ಟಿದ್ದರು. ಸ್ವತಃ ಪ್ರದಾನಿ ನರೇಂದ್ರ ಮೋದಿ ಅವರೇ ಆಹ್ವಾನಿಸಿದರೂ ರಾಜಕೀಯಕ್ಕೆ ಅಪ್ಪು ನೋ ಎಂದಿದ್ದರು ಎಂಬ ಮಾತು ಇದೀಗ ಭಾರಿ ಸದ್ದು ಮಾಡುತ್ತಿದೆ.

    ವ್ಯಕ್ತಿ ಸತ್ತಾಗಲೇ ಅವರ ಸಂಪಾದನೆ ಗೊತ್ತಾಗೋದು ಅನ್ನುವ ಮಾತಿದೆ. ಆ ಮಾತಿಗೆ ತಕ್ಕಂತೆ ನಟ ಪುನೀತ್​ ಮಾಡಿರುವ ಸಂಪಾದನೆ ನೋಡಿ ಭಾರತೀಯ ಚಿತ್ರರಂಗವೇ ಕಂಬಿನಿ ಮಿಡಿದಿದೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರವೇ ಇದನ್ನು ಸಾರಿ ಸಾರಿ ಹೇಳಿದೆ. ಅಪ್ಪು ಸಮಾಧಿ ನೋಡಲು ನಿತ್ಯ ಜನ ಸಾಗರವೇ ಹರಿದುಬರುತ್ತಿದೆ. ಪುನೀತ್​ ನೆನಪಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಪುನೀತ್​ ಅವರು ಅನೇಕ ಸರ್ಕಾರಿ ಕಾರ್ಯಕ್ರಮಗಳಿಗೂ ಹಣ ಪಡೆಯದೇ​ ರಾಯಭಾರಿಯಾಗಿದ್ದರು. ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ನಮ್ಮನ್ನು ಅಗಲಿದ್ದರೂ ಅವರ ಸಾಧನೆ ಮಾತ್ರ ಜೀವಂತವಾಗಿದೆ. ಅಪ್ಪು ಕುರಿತ ಆಸಕ್ತಿಕರ ಮಾಹಿತಿ ನಿತ್ಯ ಒಂದಿಲ್ಲೊಂದು ಹೊರಬರುತ್ತಲೇ ಇವೆ. ಇದೀಗ ಪುನೀತ್​ರನ್ನು ರಾಜಕೀಯಕ್ಕೆ ತರಬೇಕೆಂದು ಬಿಜೆಪಿ ನಾಯಕರು ನಡೆಸಿದ್ದ ಸಾಕಷ್ಟು ಪ್ರಯತ್ನಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಆಹ್ವಾನಿಸಿದ್ದರು ಎಂಬುದು ಬಹಿರಂಗವಾಗಿದೆ.

    ಕಳೆದ ಲೋಕಸಭಾ ಚುನಾವಣೆಗೂ ಮುನ್ನ ರೆಡ್​ ಕಾರ್ಪೆಟ್​ ಹಾಕಿ ಪುನೀತ್​ ರಾಜ್​ಕುಮಾರ್​ ಅವರನ್ನ ರಾಜಕೀಯಕ್ಕೆ ಆಹ್ವಾನಿಸಲು ಬಿಜೆಪಿ ಯತ್ನಿಸಿತ್ತಾದರೂ ಅಪ್ಪು ಮಾತ್ರ ಓಕೆ ಅನ್ನಲಿಲ್ಲ. ಬಿಜೆಪಿ ಕೊಟ್ಟಂತಹ ಆಹ್ವಾನವನ್ನು ಪುನೀತ್​ ರಾಜ್​ಕುಮಾರ್​ ಅವರು ನಯವಾಗಿಯೇ ತಿರಸ್ಕರಿದ್ದರು. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಂಗಳವಾರ ಮಾತನಾಡಿದ ಅಪ್ಪು ಅವರ ಆಪ್ತ, ಪ್ರೊಡಕ್ಷನ್​ ಮ್ಯಾನೇಜರ್​ ಎನ್​.ಎಸ್​. ರಾಜ್​ಕುಮಾರ್​​, ‘ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ನಟ ಜಗ್ಗೇಶ್​, ಸಿನಿಮಾ ನಿರ್ಮಾಪಕ ಎಚ್​.ವಿ.ಬಾಬು ಅವರು ಪುನೀತ್​ರನ್ನ ಭೇಟಿ ಮಾಡಿ ರಾಜಕೀಯಕ್ಕೆ ಬನ್ನಿ, ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದ್ದರು. ಈ ಆಹ್ವಾನವನ್ನು ತಿರಸ್ಕರಿಸಿದ್ದ ಅಪ್ಪು, ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನ್ನ ತಂದೆ ಹಾಕಿಕೊಟ್ಟ ದಾರಿಯಲ್ಲೇ ನಡೆಯುವೆ’ ಎಂದಿದ್ದರು ಎಂದು ವಿವರಿಸಿದರು.

    ಒತ್ತಡ ಸಹಿಸದೆ ಪುಸ್ತಕ ಕೊಡುವ ನೆಪದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಪುನೀತ್​! ಮೋದಿ ಮಾತಿಗೆ ಮುಗುಳ್ನಕ್ಕ ಅಪ್ಪು...

    ‘ಬಿಜೆಪಿ ನಾಯಕರ ಪ್ರಯತ್ನ ಇಷ್ಟಕ್ಕೆ ನಿಲ್ಲಲಿಲ್ಲ. ಕೆಲ ದಿನಗಳ ಬಳಿಕ ಬಿಜೆಪಿ ಮುಖಂಡರಾದ ಗುಜರಾತ್​ನ ಬಿ.ವಿ.ಎಸ್​.ಶರ್ಮಾ, ಆಂಧ್ರದ ಸೋಮು ಮತ್ತು ನಿರ್ಮಾಪಕ ಎಸ್​.ವಿ.ಬಾಬು ಅವರು ನನ್ನನ್ನು ಭೇಟಿಯಾಗಿ ಪುನೀತ್​ ಅವರನ್ನು ರಾಜಕೀಯಕ್ಕೆ ಬರುವಂತೆ ಒಪ್ಪಿಸಿ ಎಂದು ಕೇಳಿಕೊಂಡರು. ಸಾಧ್ಯವೇ ಇಲ್ಲ. ಅವರು ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ನಾನು ಅವರಿಗೆಲ್ಲ ಹೇಳಿ ಕಳುಹಿಸಿದೆ. ಕೊನೆಗೆ ಬಿಜೆಪಿ ಕಾರ್ಯದರ್ಶಿ ಆಗಿದ್ದ ಅನಿಲ್​ ಎಂಬುವರು ”ನೀವು ರಾಜಕೀಯಕ್ಕೆ ಬರುವುದೇನು ಬೇಡ. ಒಂದು ಬಾರಿ ಪ್ರದಾನಿ ಅವರನ್ನ ದೆಹಲಿಗೆ ಬಂದು ಭೇಟಿ ಆಗಿ ಮನವಿ ಮಾಡಿದ್ದರು. ಆಗಲೂ ಅಪ್ಪು ನಿರಾಕರಿಸಿಬಿಟ್ಟರು. ಒತ್ತಡ ಹೆಚ್ಚಾಗುತ್ತಿದ್ದಂತೆ ನಾನು ಅವರಿಗೊಂದು ಸಲಹೆ ಕೊಟ್ಟಿದ್ದೆ. ನೀವು ಮೋದಿ ಅವರನ್ನು ಬಿಜೆಪಿ ನಾಯಕರು ಎಂದು ಭೇಟಿ ಆಗಬೇಡಿ. ದೇಶದ ಪ್ರಧಾನಿ ಎಂದು ಭೇಟಿ ಆಗಿ ಅವರಿಗೆ ಅಪ್ಪಾಜಿ ಕುರಿತ(ರಾಜ್​ಕುಮಾರ್​: ದಿ ಪರ್ಸನ್​ ಬಿಹೈಂಡ್​ ದಿ ಪರ್ಸನಾಲಿಟಿ) ಪುಸ್ತಕ ಕೊಡಿ ಎಂದೆ. ಇದಕ್ಕೆ ಒಪ್ಪಿದ ಅಪ್ಪು ಪತ್ನಿ ಅಶ್ವಿನಿ ಜತೆ ಎಚ್​ಎಎಲ್​ ಏರ್​ಪೋರ್ಟ್​ ಟ್ರಾನ್ಸಿಟ್​ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸುಮಾರು 7 ನಿಮಷ ಮಾತುಕತೆ ನಡೆಸಿದರು. ಆ ವೇಳೆ ನಾನೂ ಅಪ್ಪು ಜತೆಯಲ್ಲೇ ಇದ್ದೆ. ”ನಿಮ್ಮಂಥವಹರು ಬಂದ್ರೆ ದೇಶಕ್ಕೆ ಒಳ್ಳೆಯದಾಗುತ್ತೆ ಬನ್ನಿ” ಎಂದು ಪ್ರಧಾನಿ ಹೇಳಿದರು. ಮುಗುಳ್ನಕ್ಕ ಅಪ್ಪು ವಂದನೆ ಸಲ್ಲಿಸಿ ತೆರಳಿದರು. ಮೋದಿ ಅವರು ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಹೇಳಲಿಲ್ಲವಾದರೂ ಪರೋಕ್ಷವಾಗಿ ಕರೆದಿದ್ದರು’ ಎಂದು ಪ್ರೊಡಕ್ಷನ್​ ಮ್ಯಾನೇಜರ್​ ಎನ್​.ಎಸ್​. ರಾಜ್​ಕುಮಾರ್​​ ವಿವರಿಸಿದರು.

    ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ… ಈಗಲೇ ಇದೆಲ್ಲಾ ಬೇಕಿತ್ತಾ? ಸುಮಲತಾ ಅಂಬರೀಷ್​ ಬೇಸರ

    ಮಾಡಬಾರದ್ದು ಮಾಡಿ ಪುನೀತ್​ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ

    ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts