More

    ‘ಸಿನಿಮಾ-ಗಿನಿಮಾ ಬೇಡ’ ಅಂದುಕೊಂಡಿದ್ದ ಅಪ್ಪು ಹೀರೋ ಆಗಿದ್ದೇ ರೋಚಕ…

    ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಅವರಿಗೂ ಮೊದಲೇ ಪುನೀತ್​ ತೆರೆಮೇಲೆ ಕಾಣಿಸಿಕೊಂಡವರು. 1989ರವೆರೆಗೆ ಬಾಲನಟನಾಗಿದ್ದ ಪುನೀತ್​, ಆ ನಂತರ ಸಿನಿಮಾ-ಗಿನಿಮಾ ಎಲ್ಲ ಬೇಡ. ಏನಾದರೂ ವ್ಯಾಪಾರ ಮಾಡಿಕೊಂಡಿರಬೇಕು ಎಂದು ನಿರ್ಧರಿಸಿದ್ದರು. ಆದರೆ ಅವರು ಮತ್ತೆ ಸಿನಿಮಾಕ್ಕೆ ಬಂದಿದ್ದೇ ಅಚಾನಕ್​ ಅಂತೆ!

    ‘ಬಾಲನಟನಾಗಿ ನನ್ನ ಕೊನೇ ಚಿತ್ರ ಪರಶುರಾಮ, ನನಗಾಗ 13 ವರ್ಷ. ಆಮೇಲೆ ಸಿನಿಮಾ-ಗಿನಿಮಾ ಎಲ್ಲ ಬೇಡ. ಏನಾದರೂ ವ್ಯಾಪಾರ ಮಾಡಿಕೊಂಡಿರೋಣ. ಇಲ್ಲ, ಚಲನಚಿತ್ರ ಹಂಚಿಕೆದಾರನಾಗೋಣ ಎಂದುಕೊಂಡೆ. ಅದ್ಯಾವುದೂ ವರ್ಕೌಟ್​ ಆಗದಿದ್ದಾಗ, ಮತ್ತೆ ನಟನಾಗಿ ಒಂದು ಕೈ ನೋಡೇಬಿಡೋಣ… ಎಂದು ಹೀರೋ ಆದೆ’ ಎಂದು ಹಲವು ಬಾರಿ ಖುಷಿ ಹಂಚಿಕೊಂಡಿದ್ದರು ಪುನೀತ್​. ‘ಐ ಲವ್​ ಸಿನಿಮಾ, ಇದೊಂದು ಸಾಗರ, ಇಲ್ಲಿ ಕಲಿಕೆಗೆ ಕೊನೇನೆ ಇಲ್ಲ’ ಎನ್ನುತ್ತಿದ್ದ ಅಪ್ಪು, ‘ಈಗ ಹೀರೋ ಆಗಿದ್ದೇನೆ. ಡೈರೆಕ್ಟರ್​ ಹೇಳಿದ್ದನ್ನು ಕೇಳಿ ಅಭಿನಯಿಸುತ್ತೇನೆ. 60-65 ವರ್ಷವಾದ ಮೇಲೆ ಅಪ್ಪನ ಪಾತ್ರ ಮಾಡಬೇಕಾಗಿ ಬರಬಹುದು. ಆಗಲೂ ಡೈರೆಕ್ಟರ್​ ಬಂದು ಹೀಗೆ ಮಾಡಬೇಕು ಅಂತ ಹೇಳುತ್ತಾರೆ. ಅದನ್ನು ತಿಳಿದುಕೊಂಡೇ ಮಾಡಬೇಕಾಗುತ್ತೆ’ ಎಂದು ಕಲಾವಿದರಾದವರು ಸದಾ ಒಂದಿಲ್ಲೊಂದು ಕಲಿಯುತ್ತಲೇ ಇರಬೇಕು ಎನ್ನುವುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಿದ್ದರು.

    'ಸಿನಿಮಾ-ಗಿನಿಮಾ ಬೇಡ' ಅಂದುಕೊಂಡಿದ್ದ ಅಪ್ಪು ಹೀರೋ ಆಗಿದ್ದೇ ರೋಚಕ...

    ಡಾ. ರಾಜಕುಮಾರ್​ ತಮ್ಮ ವೃತ್ತೀಜಿವನದಲ್ಲಿ ಅದೆಷ್ಟೇ ಅದ್ಭುತ ಅಭಿನಯವನ್ನು ಮಾಡಿದರೂ, ಅವರಿಗೆ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬರಲಿಲ್ಲ ಎಂಬ ಬೇಸರ ಕನ್ನಡಿಗರಿಗಿದೆ. ಡಾ. ರಾಜಕುಮಾರ್​ ಅವರಿಗೆ ರಾಷ್ಟ್ರ ಮಟ್ಟದಲ್ಲಿ ನಟನೆಗೆ ಪ್ರಶಸ್ತಿ ಬರದಿದ್ದರೂ, ಪುನೀತ್​ ಮಾತ್ರ ಬಹಳ ಚಿಕ್ಕವಯಸ್ಸಿನಲ್ಲೇ ಆ ಹೆಗ್ಗಳಿಕೆಗೆ ಪಾತ್ರರಾದರು. ‘ಬೆಟ್ಟದ ಹೂವು’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್​ ರಾಜಕುಮಾರ್​ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬಾಲನಟರೆನಿಸಿಕೊಂಡರು. ಬರೀ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲೂ ಅವರು ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪುನೀತ್​ ತಮ್ಮ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಪಡೆದಿರುವ ನಾಲ್ಕು ಪ್ರಶಸ್ತಿಗಳ ಪೈಕಿ, ಎರಡು ಪ್ರಶಸ್ತಿಗಳು ಬಾಲನಟನಾಗಿ ಪಡೆದಿದ್ದಾರೆ. “ಚಲಿಸುವ ಮೋಡಗಳು’ ಮತ್ತು ‘ಎರಡು ನಕ್ಷತ್ರಗಳು’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪುನೀತ್​ ಎರಡು ಬಾರಿ ಬಾಲನಟ ಪ್ರಶಸ್ತಿ ಪಡೆದರೆ, ‘ಮಿಲನ’ ಮತ್ತು “ಜಾಕಿ’ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇದಲ್ಲದೆ, ಹಲವು ಖಾಸಗೀ ಪ್ರಶಸ್ತಿಗಳು, ಪುನೀತ್​ ಅವರ ಅತ್ಯುತ್ತಮ ಅಭಿನಯಕ್ಕೆ ಸಂದಿವೆ.

    'ಸಿನಿಮಾ-ಗಿನಿಮಾ ಬೇಡ' ಅಂದುಕೊಂಡಿದ್ದ ಅಪ್ಪು ಹೀರೋ ಆಗಿದ್ದೇ ರೋಚಕ...

    ಬಾಲನಟನಾಗಿ ನಟಿಸಿದ್ದ ಪುನೀತ್​, ನಾಯಕನಾಗಿ ಎಂಟ್ರಿ ಕೊಡುತ್ತಾರೆ ಎಂಬ ಮಾತು 2000ದಿಂದಲೇ ಕೇಳಿಬಂದಿತ್ತು. ಅದು ನಿಜವಾಗಿದ್ದು 2001ರಲ್ಲಿ. 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಫುಲ್​ಪ್ಲೆಡ್ಜ್​ ಹೀರೋ ಆಗಿ ಹೊರ ಹೊಮ್ಮಿದರು. ಈ ಚಿತ್ರ ಬಿಡುಗಡೆಯಾಗಿದ್ದು 2002ರಲ್ಲಿ. ಅಲ್ಲಿಯವರೆಗೂ ಅವರನ್ನು ಮನೆಯಲ್ಲಿ ಮಾತ್ರ ಪ್ರೀತಿಯಿಂದ ಅಪ್ಪಿ ಎಂದು ಕರೆಯಲಾಗುತ್ತಿತ್ತು. ಆ ನಂತರ ಅವರು ಕನ್ನಡಿಗರ ಪ್ರೀತಿಯ ಅಪ್ಪುವಾದರು ಎಂಬುದು ವಿಶೇಷ. ಪುನೀತ್​ ರಾಜಕುಮಾರ್​ ನಾಯಕನಾಗಿ ಎಂಟ್ರಿ ಕೊಡುತ್ತಾರೆ ಎಂದಾಗ, ಸಹಜವಾಗಿಯೇ ಕುತೂಹಲ ಮತ್ತು ನಿರೀಕ್ಷೆ ಜಾಸ್ತಿ ಇತ್ತು. ಏಕೆಂದರೆ, ಅಷ್ಟರಲ್ಲಾಗಲೇ ರಾಜಕುಮಾರ್​ ಅವರ ಇಬ್ಬರು ಪುತ್ರರು ಚಿತ್ರರಂಗಕ್ಕೆ ಬಂದು ದೊಡ್ಡ ಹೆಸರು ಮಾಡಿದ್ದರು. ಪುನೀತ್​ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಈ ಚಿತ್ರ ಸೂಪರ್​ ಹಿಟ್​ ಆಗಿದ್ದಷ್ಟೇ ಅಲ್ಲ, 25 ವಾರಗಳ ಪ್ರದರ್ಶನವನ್ನೂ ಕಂಡಿತು. ಈ ಚಿತ್ರದ ಸಮಾರಂಭವನ್ನು ಅಂಬೇಡ್ಕರ್​ ಭವನದಲ್ಲಿ ಆಯೋಜಿಸಲಾಗಿತ್ತು ಮತ್ತು ಈ ಸಮಾರಂಭಕ್ಕೆ ರಜನಿಕಾಂತ್​ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದು ವಿಶೇಷ.

    ಪುನೀತ್​ ಶಾಲೆ ಮೆಟ್ಟಿಲು ಹತ್ತಿದವರಲ್ಲ! ಅಚ್ಚರಿ ಮೂಡಿಸುತ್ತೆ ಈ ವಿಷ್ಯ

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts